ಅಕ್ಷತಾ ಪೂಜಾರಿ ಆರೋಪ ಸಂಪೂರ್ಣ ಸುಳ್ಳು; ನಾನಾಗಲಿ, ಪೊಲೀಸರಾಗಲಿ ಏನೂ ಮಾಡಿಲ್ಲ: ದೇವೇಂದ್ರ ಸುವರ್ಣ
ಉಡುಪಿ: ಅಕ್ಷತಾ ಪೂಜಾರಿ ಮಾಡಿರುವ ಆರೋಪ ಸಂಪೂರ್ಣ ಸುಳ್ಳು. ಅವರ ಮನೆಯೊಳಗೆ ಹೋಗಿಲ್ಲ. ಯಾರ ಕೈಯನ್ನು ಎಳೆದಿಲ್ಲ. ನಾನಾಗಲಿ, ಪೊಲೀಸರಾಗಲಿ ಅವಾಚ್ಯ ಶಬ್ಧಗಳಿಂದ ಬೈದದ್ದು ಅಥವಾ ದುರ್ವಾತನೆ ತೋರಿಲ್ಲ ಎಂದು ದೇವೇಂದ್ರ ಸುವರ್ಣ ಹೇಳಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನ್ನೊಂದು ವರ್ಷಗಳ ಹಿಂದಿನ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಪರಿಹಾರ ನೀಡಬೇಕೆಂದು ಆದೇಶ ಮಾಡಿದೆ. ಅದರಂತೆ ಅಶಿಕ್ ಎಂಬ ವ್ಯಕ್ತಿಗೆ ಅರೆಸ್ಟ್ ಆರ್ಡರ್ ಕೂಡ ಆಗಿತ್ತು. ಆದರೆ ಆರೋಪಿ ಪದೇ ಪದೇ ತಲೆಮರೆಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಮೊಬೈಲ್ ಲೋಕೇಷನ್ ಮೂಲಕ ಪೊಲೀಸರು ಆರೋಪಿಯನ್ನು ಬಂಧಿಸಲು ಪ್ರಯತ್ನಿಸಿದ್ದಾರೆ. ಅದರಂತೆ ನನಗೆ ಪೊಲೀಸರು ಕರೆ ಮಾಡಿ ಆತ ಇಂತಹ ಲೋಕೇಷನ್ ನಲ್ಲಿ ಇದ್ದಾನೆ ನೀವು ಬನ್ನಿ ಎಂದು ಹೇಳಿದ್ರು. ಬೆಳಿಗ್ಗೆ ನಾಲ್ಕು ಗಂಟೆಗೆ ನಾನು ಪೊಲೀಸರೊಂದಿಗೆ ಅಲ್ಲಿ ತೆರಳಿದ್ದೇನೆ. ನಮ್ಮನ್ನು ಮನೆಯಿಂದ ಐದು ಮೀಟರ್ ದೂರದಲ್ಲಿ ನಿಲ್ಲಲು ಹೇಳಿದ್ರು. ಆದರೆ, ಅಕ್ಷತಾ ಪೂಜಾರಿ ಆರೋಪ ಮಾಡಿದಂತೆ ಏನೂ ನಡೆದಿಲ್ಲ. ಪೊಲೀಸರು ವಿಡಿಯೋ ಅನ್ನು ಮಾಡಿಕೊಂಡಿದ್ದಾರೆ ಎಂದರು.
ಕಾನೂನು ಪ್ರಕಾರ ಪೊಲೀಸರ ಮೇಲೆ ಪೊಲೀಸರಿಗೆ ಎಫ್ಐಆರ್ ಮಾಡುವ ಅವಕಾಶ ಇಲ್ಲದಿದ್ದರೂ ಕೂಡ ಸಂಘಟಕರ ಹೋರಾಟ ಮೇರೆಗೆ ಎಫ್ಐಆರ್ ಮಾಡಿದ್ದಾರೆ. ಅದರಲ್ಲಿ ನನ್ನ ಹೆಸರನ್ನು ಸೇರಿಸಿದ್ದಾರೆ. ಪೊಲೀಸರು ಹೆದರು ಪರಿಸ್ಥಿತಿ ನಿರ್ಮಾಣ ಆಗಿದೆ. ಅವರು ಕೂಡ ಕೇಸ್ ಹಾಕಿಸಿಕೊಂಡು ನನ್ನ ಜೊತೆ ಅಲೆದಾಡುವ ಸ್ಥಿತಿ ಬಂದಿದೆ. ಕಾನೂನು ಏನೂ ಹೇಳುತ್ತೆ. ಇನ್ನು ಆರೋಪಿಯನ್ನು ಹಿಡಿಯುವುದಕ್ಕೆ, ಪರಿಹಾರ ಪಡೆದುಕೊಳ್ಳುವುದಕ್ಕೆ ಅವಕಾಶ ಇಲ್ಲವೆ. ಹೋರಾಟಗಾರರು ನನ್ನ ಪರಿಸ್ಥಿತಿಯನ್ನು ಗಮನಿಸಬೇಕಿತ್ತು.
ನಾನು ಪರಿಹಾರ ಕೇಳುವುದು ಹೇಗೆ, ನ್ಯಾಯ ಕೇಳುವುದು ಹೇಗೆ. ಆ ವ್ಯಕ್ತಿಯನ್ನು ಹಿಡಿಯಲು ಅರೆಸ್ಟ್ ವಾರೆಂಟ್ ಇದೆ. ಮುಂದೆ ಆ ವ್ಯಕ್ತಿಯನ್ನು ಹಿಡಿಯಲು ಪೊಲೀಸರು ಬರುವುದಾದರೆ ಹೇಗೆ ಎಂದು ಅಳಲು ತೋಡಿಕೊಂಡರು.