ಪ್ರಧಾನಿ ಮೋದಿಗೆ ಓಮನ್ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
Thursday, December 18, 2025
ಮಸ್ಕತ್: ಭಾರತ-ಓಮನ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ನೀಡಿದ ಕೊಡುಗೆಗಳಿಗಾಗಿ ಪ್ರಧಾನಿ ನರೇಂದ್ರ ಮೋದಿಗೆ ಆರ್ಡರ್ ಆಫ್ ಓಮನ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಎರಡೂ ದೇಶಗಳ ನಡುವಿನ ಸಂಬಂಧಗಳನ್ನು ಬಲಪಡಿಸುವಲ್ಲಿ ಮೋದಿ ಅವರ ಪಾತ್ರವನ್ನು ಗುರುತಿಸಿ ಮಸ್ಕತ್ ಸುಲ್ತಾನ ಹೈಥಮ್ ಬಿನ್ ತಾರಿಕ್ ಅವರು ಇಂದು ಪ್ರಧಾನಿ ನರೇಂದ್ರ ಮೋದಿ (PM Modi in Oman) ಅವರಿಗೆ ಸುಲ್ತಾನರ ವಿಶಿಷ್ಟ ನಾಗರಿಕ ಗೌರವವಾದ ಆರ್ಡರ್ ಆಫ್ ಓಮನ್ ಅನ್ನು ಪ್ರದಾನ ಮಾಡಿದರು.
ಈ ಪ್ರಶಸ್ತಿಯನ್ನು ಈ ಮೊದಲು ರಾಣಿ ಎಲಿಜಬೆತ್ II, ನೆದರ್ಲ್ಯಾಂಡ್ಸ್‌ನ ರಾಣಿ ಮ್ಯಾಕ್ಸಿಮಾ, ಜಪಾನ್‌ನ ಚಕ್ರವರ್ತಿ ಅಕಿಹಿಟೊ, ನೆಲ್ಸನ್ ಮಂಡೇಲಾ ಮತ್ತು ಜೋರ್ಡಾನ್ ರಾಜ ಅಬ್ದುಲ್ಲಾ ಅವರಂತಹ ಗಣ್ಯರಿಗೆ ನೀಡಲಾಗಿತ್ತು. ಆ ಸಾಲಿಗೆ ಇದೀಗ ಪ್ರಧಾನಿ ಮೋದಿಯೂ ಸೇರಿದ್ದಾರೆ. ಮೋದಿಯವರಿಗೆ ಇದು 29ನೇ ಜಾಗತಿಕ ಗೌರವವಾಗಿದೆ.