ಅಲ್ ಬಿರ್ರ್ ಕಿಡ್ಸ್ ಫೆಸ್ಟ್ 2025-26; ಪೂರ್ವಭಾವಿ ಸಂಘಟಕ - ರಕ್ಷಕರ ಸಭೆ

ಅಲ್ ಬಿರ್ರ್ ಕಿಡ್ಸ್ ಫೆಸ್ಟ್ 2025-26; ಪೂರ್ವಭಾವಿ ಸಂಘಟಕ - ರಕ್ಷಕರ ಸಭೆ

ಮೂಡಬಿದ್ರೆ: ಸಮಸ್ತ ವಿದ್ಯಾಭ್ಯಾಸ ಮಂಡಳಿ ಅಧೀನದಲ್ಲಿ ಕಾರ್ಯಾಚರಿಸುವ ಅಲ್ ಬಿರ್ರ್ ಶಾಲೆಗಳ ದಕ್ಷಿಣ ಕನ್ನಡ ಝೋನ್ ಮಟ್ಟದ ಕಿಡ್ಸ್ ಫೆಸ್ಟ್ 2025-26 ಇದರ ಪೂರ್ವ ತಯಾರಿಯ ಭಾಗವಾಗಿ ಸಂಘಟಕಾ ಹಾಗೂ ರಕ್ಷಕರ ಸಭೆಯು ಮಂಗಳವಾರ ಮಧ್ಯಾಹ್ನ 3ಗಂಟೆಗೆ  ಮೂಡಬಿದ್ರೆ ಅಜುಮ್ ಅಲ್ ಬಿರ್ರ್ ಇಂಟರ್ನ್ಯಾಶನಲ್ ಸ್ಕೂಲ್ ಸಭಾಂಗಣದಲ್ಲಿ ನಡೆಯಿತು. 

ಅಲ್ ಬಿರ್ರ್ ದಕ್ಷಿಣ ಕನ್ನಡ ಜಿಲ್ಲಾ ಕೋರ್ಡಿನೇಟರ್ ಅಬ್ದುಲ್ ಶುಕೂರ್ ದಾರಿಮಿ ಕರಾಯ ಅಧ್ಯಕ್ಷತೆ ವಹಿಸಿದ್ದರು. ಪಾಝಿಯ್ ಫೈಝಿ ಲಾಡಿ ಪ್ರಾರ್ಥನೆಗೈದು, ಅಲ್ ಬಿರ್ರ್ ಮೂಡಬಿದ್ರೆ ವಿದ್ಯಾರ್ಥಿ ಝೈನುಲ್ ಅಬಿದೀನ್ ಕಿರಾಅತ್ ಪಠಿಸಿದರು. 

ಮೂಡಬಿದ್ರೆ ತಾಲೂಕು ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷರಾದ ಅಬ್ದುಲ್ ಸಲಾಂ ಬೂಟ್ ಬಝಾರ್ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನವಾಝ್  ವಯತ್ತಲ, ಮೂಡಬಿದ್ರೆ ಅಜುಮ್ ಅಲ್ ಬಿರ್ರ್ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಾಲಿಕ್, ಮಜೀದ್ ಹಾಜಿ ಸಿತಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮದ ಸಿದ್ಧತೆಗಳ ಬಗ್ಗೆ ವಿವರಿಸಿದರು. 

ಸಭೆಯಲ್ಲಿ ಕಾರ್ಯಕ್ರಮದ ಸ್ವಾಗತ ಸಮಿತಿಯನ್ನು ರಚಿಸಿ ಚೇರ್ಮ್ಯಾನ್ ಆಗಿ ಅಬ್ದುಲ್ ಸಲಾಂ ಬೂಟ್ ಬಝಾರ್, ಜನರಲ್ ಕನ್ವೀನರ್ ಆಗಿ ಅಬ್ದುಲ್ ರಝಾಕ್ ಮದನಿ, ಕೋಶಾಧಿಕಾರಿಯಾಗಿ ಅಶ್ರಫ್ ಮರೋಡಿ ಇವರನ್ನು ಆಯ್ಕೆಮಾಡಲಾಯಿತು. 

ಸಭೆಯಲ್ಲಿ ಹಾಫಿಝ್ ಅನ್ಸಾರಿ, ಅಹ್ಮದ್ ಹುಸೇನ್ ಲಾಡಿ, ಅಲ್ತಾಫ್ ಲೊರೊಟ್ಟೆಪದವು, ಎಸ್ಕೆಎಸ್ಸೆಸ್ಸೆಫ್ ವಲಯಾಧ್ಯಕ್ಷ ಅಬ್ದುಲ್ ರಝಾಕ್ ಮದನಿ, ಟೌನ್ ಮಸೀದಿ ಮುಹಮ್ಮದ್ ನದೀಮ್, ಎ.ಆರ್. ಭಕ್ಷಿ ಮೂಡಬಿದ್ರೆ, ಅಜುಮ್ ಅಲ್ಬಿರ್ರ್ ಮ್ಯಾನೇಜ್ಮೆಂಟ್ ಟ್ರಸ್ಟಿಗಳಾದ ಅಲ್ತಾಫ್ ಗಂಟಲ್ಕಟ್ಟೆ, ರಝ್ಝಾಕ್ ಸಚ್ಚರಿಪೇಟೆ, ಶಮೀಮುಲ್ಲಾ ಅಳಿಯೂರು, ಶಾಲೆಯ ಪ್ರಿನ್ಸಿಪಾಲ್ ಶಾಹೀನ, ಗಪೂರ್ ಕೋಟೆಬಾಗಿಲು, ಲಿಯಾಖತ್ ಅಲಿ, ಅಬ್ದುಲ್ ಹಮೀದ್ ವಾಲ್ಪಾಡಿ, ಪಿ.ಎಚ್. ಹೈದರ್, ಸಫ್ವಾನ್ ಹಮೀದ್ ಮುಂತಾದ ನಾಯಕರು ಭಾಗವಹಿಸಿದ್ದರು. ಅಲ್ ಬಿರ್ರ್ ಮೂಡಬಿದ್ರೆ ಅಧ್ಯಾಪಕ ಸಫ್ವಾನ್ ಬಾಖವಿ ಮಾಪಾಲ್ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

Ads on article

Advertise in articles 1

advertising articles 2

Advertise under the article