'ಅಲೆವೂರು ಗ್ರೂಪ್ ಆವಾರ್ಡ್'ಗೆ ನಟಿ ಮಾನಸಿ ಸುಧೀರ್ ಆಯ್ಕೆ

'ಅಲೆವೂರು ಗ್ರೂಪ್ ಆವಾರ್ಡ್'ಗೆ ನಟಿ ಮಾನಸಿ ಸುಧೀರ್ ಆಯ್ಕೆ

ಉಡುಪಿ: ಅಲೆವೂರು ಗ್ರೂಪ್ ಫೋರ್ ಎಜ್ಯುಕೇಷನ್ ವತಿಯಿಂದ ನೀಡಲಾಗುವ 2025ನೇ ಸಾಲಿನ ಪ್ರತಿಷ್ಟಿತ ಅಲೆವೂರು ಗ್ರೂಪ್ ಅವಾರ್ಡ್‌ಗೆ ಖ್ಯಾತ ಭರತನಾಟ್ಯ ಕಲಾವಿದೆ ಹಾಗೂ ಕಾಂತಾರ ಖ್ಯಾತಿಯ ಚಲನಚಿತ್ರ ನಟಿ ಮಾನಸಿ ಸುಧೀರ್ ಆಯ್ಕೆಯಾಗಿದ್ದಾರೆ. 

ಬಹುಮುಖ ಪ್ರತಿಭೆಯಾಗಿರುವ ಮಾನಸಿ ಅವರು ಭರತನಾಟ್ಯ ವಿದುಷಿಯಾಗಿದ್ದು, ನೃತ್ಯನಿಕೇತನ ಕೊಡವೂರು ಸಂಸ್ಥೆಯ ಮೂಲಕ ಸಾವಿರಾರು ಜನರಿಗೆ ಭರತನಾಟ್ಯ  ತರಬೀತಿ ನೀಡುತ್ತಿದ್ದಾರೆ. ಡಿ. 20ರಂದು ಶನಿವಾರ ಬೆಳಿಗ್ಗೆ 9.30ಕ್ಕೆ ಅಲೆವೂರಿನ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ 21ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಮಾಜಿ ಸಚಿವ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರು ಮಾನಸಿ ಅವರಿಗೆ ಬೆಳ್ಳಿ ಫಲಕ ಸಹಿತ ಅಲೆವೂರು ಗ್ರೂಪ್ ಪ್ರಶಸ್ತಿ ಪ್ರದಾನ ಮಾಡಲಿರುವರು. ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್ ನ ಪ್ರಾಂಶುಪಾಲರಾದ ಡಾ. ಲೀನಾ ಸಿಕ್ವೆರಾ ಅವರು ಮುಖ್ಯ ಅಥಿತಿಯಾಗಿ ಪಾಲ್ಗೊಳ್ಳಲಿರುವರು.

ಅಲೆವೂರು ಗ್ರೂಪ್ ಫೊರ್ ಎಜುಕೇಶನ್ ಅಧ್ಯಕ್ಷ ಅಲೆವೂರು ಗಣಪತಿ ಕಿಣಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು ಎಂದು ಅಲೆವೂರು ಗ್ರೂಪ್ ಫೋರ್ ಎಜುಕೇಶನ್ ಕಾರ್ಯದರ್ಶಿ ಎ. ದಿನೇಶ್ ಕಿಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಈ ಹಿಂದೆ ಪಿ.ರವೀಂದ್ರ ನಾಯಕ್, ಮುರಾರಿ ಬಲ್ಲಾಳ್(ಮರಣೋತ್ತರ), ರಮೇಶ್ ರಾವ್, ಡಾ. ರಮಾನಂದ ಭಟ್(ಮರಣೋತ್ತರ), ಡಾ. ಯು.ಎಮ್. ವೈದ್ಯ, ಡಾ. ಮೋಹನ್ ಆಳ್ವಾ, ಶಿರ್ತಾಡಿ ವಿಲಿಯಂ ಪಿಂಟೋ, ಶ್ರೀಮತಿ ಸಾರಾ ಅಬೂಬಕ್ಕರ್, ಡಾ. ಪ್ರತಾಪ್ ಕುಮಾರ್, ಪ್ರೊ. ಎಮ್.ಡಿ.ನಂಜುಡ, ಡಾ. ಪಿ.ವಿ. ಭಂಡಾರಿ, ಡಾ. ಎನ್.ಎ.ಮಧ್ಯಸ್ಥ, ಎ. ಈಶ್ವರಯ್ಯ, ಡಾ. ವೈ. ಎನ್. ಶೆಟ್ಟಿ, ಪ್ರೊ. ಪ್ರಹ್ಲಾದ ಆಚಾರ್ಯ, ಪ್ರೊ. ಮ್ಯಾಥ್ಯೂ ಸಿ. ನೈನನ್, ಡಾ. ಎ.ಪಿ. ಭಟ್, ಪ್ರೊ. ಉದ್ಯಾವರ ಮಾಧವ ಆಚಾರ್ಯ, ಡಾ. ಶಶಿಕಿರಣ್ ಉಮಾಕಾಂತ್, ನ್ಯಾಯವಾದಿ ಶಾಂತಾರಾಮ್ ಶೆಟ್ಚಿ ಅವರಿಗೆ ಅಲೆವೂರು ಗ್ರೂಪ್ ಅವಾರ್ಡ್ ನೀಡಿ ಗೌರವಿಸಲಾಗಿತ್ತು.

Ads on article

Advertise in articles 1

advertising articles 2

Advertise under the article