ತೆಂಕ ಎರ್ಮಾಳಿನಲ್ಲಿ ಬೈಕ್ ಡಿಕ್ಕಿ; ವ್ಯಕ್ತಿ ಮೃತ್ಯು
ಉಚ್ಚಿಲ: ಬೈಕೊಂದಕ್ಕೆ ಅಡ್ಡ ಬಂದ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ತೆಂಕ ಎರ್ಮಾಳಿನ ಸತ್ಯಂ ಬಾರ್'ನ ಮುಂಭಾಗದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ತೆಂಕ ಎರ್ಮಾಳಿನ ನಿವಾಸಿ ಅಣ್ಣಯ್ಯ ಬಂಗೇರ(67) ಎಂದು ಗುರುತಿಸಲಾಗಿದೆ. ಬೈಕ್ ಸವಾರ ಬಾದಾಮಿಯ ಹಸನ್ ಎಂಬರಿಗೂ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಪುವಿನಿಂದ ಕುಳಾಯಿ ಕಡೆ ಹಸನ್ ತನ್ನ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ರಾತ್ರಿ 7.15ರ ಸುಮಾರಿಗೆ ತೆಂಕ ಎರ್ಮಾಳಿನ ಸತ್ಯಂ ಬಾರ್'ನ ಮುಂಭಾಗದಲ್ಲಿ ಏಕಾಏಕಿ ಅಣ್ಣಯ್ಯ ಬಂಗೇರ ಅಡ್ಡಬಂದಿದ್ದು, ಈ ವೇಳೆ ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಉಚ್ಚಿಲ SDPI ಅಂಬ್ಯುಲೆನ್ಸ್ ಚಾಲಕ ಕೆ.ಎಂ.ಸಿರಾಜ್ ಅವರು ಸ್ಥಳಕ್ಕೆ ಧಾವಿಸಿ ಅಣ್ಣಯ್ಯ ಬಂಗೇರ ಅವರ ಮೃತದೇಹವನ್ನು ಪಡುಬಿದ್ರೆ ಆಸ್ಪತ್ರೆಗೆ ದಾಖಲಿಸಿದರು. ಇನ್ನೊಂದೆಡೆ ಗಾಯಗೊಂಡ ಹಸನ್ ಅವರನ್ನು ಸಾಮಾಜಿಕ ಕಾರ್ಯಕರ್ತ ಜಲಾಲುದ್ದೀನ್ ಜಲ್ಲು ಉಚ್ಚಿಲ ಹಾಗು ಮೂಳೂರು SDPI ಅಂಬ್ಯುಲೆನ್ಸ್ ಚಾಲಕ ಹಮೀದ್ NH ಅವರು ಅಂಬ್ಯುಲೆನ್ಸ್ ಮೂಲಕ ಉಡುಪಿಯ ಆದರ್ಶ್ ಆಸ್ಪತ್ರೆಗೆ ದಾಖಲಿಸಿದರು.