ಒಮಾನ್ ಭೇಟಿ ವೇಳೆ ಪ್ರಧಾನಿ ಮೋದಿ ಕಿವಿಗೆ ಧರಿಸಿದ್ದೇನು? ಭಾರಿ ಚರ್ಚೆಗೆ ಗ್ರಾಸವಾದ ʼಕಿವಿಯೋಲೆʼ ಪ್ರಸಂಗ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಒಮನ್ ಗೆ ಭೇಟಿ ನೀಡಿದ್ದು ಹಲವು ಅಂಶಗಳಿಂದಾಗಿ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.
ಒಮನ್ ಗೆ ಬಂದಿಳಿದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿತ್ತು. ಓಮನ್ ರಕ್ಷಣಾ ವ್ಯವಹಾರಗಳ ಉಪ ಪ್ರಧಾನ ಮಂತ್ರಿಯಿಂದ ಸ್ವಾಗತಿಸಲ್ಪಟ್ಟ ಪ್ರಧಾನಿ ಮೋದಿಯವರನ್ನು ಸಾಂಪ್ರದಾಯಿಕ ನೃತ್ಯ ಮತ್ತು ಗೌರವ ರಕ್ಷೆ ಸೇರಿದಂತೆ ಭವ್ಯವಾಗಿ ಸ್ವಾಗತಿಸಲಾಯಿತು. ಆದಾಗ್ಯೂ, ಸಾಮಾಜಿಕ ಮಾಧ್ಯಮದಲ್ಲಿ ಕುತೂಹಲವನ್ನು ಹುಟ್ಟುಹಾಕಿದ್ದು ಅವರ ಬಲ ಕಿವಿಯಲ್ಲಿ ಸಣ್ಣ ಕಿವಿಯೋಲೆ.
ಇದು ಸಾಮಾಜಿಕ ಜಾಲತಾಣಗಳಲ್ಲಿ ಊಹಾಪೋಹಗಳನ್ನು ಉಂಟುಮಾಡಿದೆ. ಇದು ಪ್ರಧಾನಿ ಮೋದಿಯವರ ಹೊಸ ಶೈಲಿಯೇ? ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ.
ಏನಿದು ʼಕಿವಿಯೋಲೆʼ ಪ್ರಸಂಗ?
ಪ್ರಧಾನಿ ನರೇಂದ್ರ ಮೋದಿಯವರು ಧರಿಸಿದ ʼಕಿವಿಯೋಲೆʼ ಸುದ್ದಿಯಲ್ಲಿದೆ. ಆದರೆ ಸಮೀಪದಿಂದ ನೋಡಿದಾಗ ಇದು ಕಿವಿಯೋಲೆಯಲ್ಲ ಬದಲಾಗಿ ಅನುವಾದದ ಸಾಧನ ಎನ್ನುವುದು ತಿಳಿದು ಬರುತ್ತದೆ. ಉನ್ನತ ಮಟ್ಟದ ರಾಜತಾಂತ್ರಿಕ ವ್ಯವಹಾರದ ಸಂದರ್ಭದಲ್ಲಿ ಸಂವಹನ ಸರಳವಾಗಿ ನಡೆಯಲು ಅಂತಹ ಕಿವಿಯ ಸಾಧನಗಳನ್ನು ಬಳಸಲಾಗುತ್ತದೆ.
ವಿಮಾನ ನಿಲ್ದಾಣದಲ್ಲಿ ಪ್ರಧಾನಿಯವರು ಒಮಾನ್ನ ಉಪಪ್ರಧಾನಿ ಸಯ್ಯದ್ ಶಿಹಾಬ್ ಬಿನ್ ತಾರಿಕ್ ಅಲ್ ಸೈದ್ ಅವರನ್ನು ಭೇಟಿಯಾದಾಗ ಈ ಕಿವಿಯ ಸಾಧನ ಧರಿಸಿದ್ದರು. ಒಮಾನ್ ಪ್ರಜೆಗಳು ಅರೆಬಿಕ್ ಭಾಷೆಯಲ್ಲಿ ಮಾತನಾಡುವ ಕಾರಣ ಸಂವಾದ ಸರಳವಾಗಲು ಪ್ರಧಾನಿ ಈ ಕಿವಿಯ ಸಾಧನವನ್ನು ಧರಿಸಿದ್ದರು.
ಈ ಭೇಟಿಯ ಸಂದರ್ಭದಲ್ಲಿ ಪ್ರಧಾನಿಯವರು ಒಮಾನ್ ಜೊತೆಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಭಾರತದಿಂದ ರಫ್ತಾಗುವ ಶೇ 98ರಷ್ಟು ವಸ್ತುಗಳನ್ನು ಸುಂಕವಿಲ್ಲದೆ ಸ್ವೀಕರಿಸುವ ಅವಕಾಶವನ್ನು ಈ ಒಪ್ಪಂದದ ಮೂಲಕ ನೀಡಲಾಗಿದೆ.