ಒಡಿಶಾದಲ್ಲಿ 102  ಹೋಮ್ ಗಾರ್ಡ್ ಹುದ್ದೆಗಳಿಗೆ 4,000ಕ್ಕೂ ಅಧಿಕ ಅಭ್ಯರ್ಥಿಗಳು ಹಾಜರು! ಪರೀಕ್ಷೆ ಬರೆದ ಪದವೀಧರರು, ಸ್ನಾತಕೋತ್ತರ ಪದವೀಧರರು, ತಾಂತ್ರಿಕ ಅರ್ಹತೆಯ ಅಭ್ಯರ್ಥಿಗಳು

ಒಡಿಶಾದಲ್ಲಿ 102 ಹೋಮ್ ಗಾರ್ಡ್ ಹುದ್ದೆಗಳಿಗೆ 4,000ಕ್ಕೂ ಅಧಿಕ ಅಭ್ಯರ್ಥಿಗಳು ಹಾಜರು! ಪರೀಕ್ಷೆ ಬರೆದ ಪದವೀಧರರು, ಸ್ನಾತಕೋತ್ತರ ಪದವೀಧರರು, ತಾಂತ್ರಿಕ ಅರ್ಹತೆಯ ಅಭ್ಯರ್ಥಿಗಳು

ಭುವನೇಶ್ವರ: ರಾಜ್ಯದ ಜಾರ್ಸುಗುಡ ಜಿಲ್ಲೆಯಲ್ಲಿ ರವಿವಾರ ನಡೆದ ಹೋಮ್ ಗಾರ್ಡ್ ಲಿಖಿತ ಪರೀಕ್ಷೆಯಲ್ಲಿ ಕೇವಲ 102 ಪೋಸ್ಟ್‌ಗಳಿಗೆ 4,000ಕ್ಕೂ ಅಧಿಕ ಅಭ್ಯರ್ಥಿಗಳು ಹಾಜರಾಗಿದ್ದರು. ಈ ವೇಳೆ ಉದ್ಯೋಗಾಕಾಂಕ್ಷಿಗಳು ಬೃಹತ್ ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ.

ರವಿವಾರ (ಡಿ.28) ಒಡಿಶಾದ ವಿಶೇಷ ಸಶಸ್ತ್ರ ಪೊಲೀಸ್ ಬೆಟಾಲಿಯನ್ ಮೈದಾನದಲ್ಲಿ ನಡೆದ ಪರೀಕ್ಷೆ ವೇಳೆ 4,040 ಆಕಾಂಕ್ಷಿಗಳು ಭಾಗವಹಿಸಿದ್ದರು. ಕೇವಲ 102 ಪೋಸ್ಟ್‌ಗಳಿದ್ದು, ಪ್ರತಿ ಹುದ್ದೆಗೆ 40 ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ. ಈ ಪೋಸ್ಟ್‌ಗೆ ಕನಿಷ್ಠ ಶೈಕ್ಷಣಿಕ ಅರ್ಹತೆ ಕೇವಲ 5ನೇ ತರಗತಿಯಾಗಿದ್ದರೂ ಕೂಡ ಪರೀಕ್ಷೆ ಬರೆಯಲು ಪದವೀಧರರು, ಸ್ನಾತಕೋತ್ತರ ಪದವೀಧರರು ಹಾಗೂ ತಾಂತ್ರಿಕ ಅರ್ಹತೆ ಪಡೆದಿದ್ದವರು ಆಗಮಿಸಿದ್ದರು.

ಈ ವೇಳೆ ಕೆಲವು ಅಭ್ಯರ್ಥಿಗಳು ಮಾತನಾಡಿ, ಖಾಸಗಿ ವಲಯದಲ್ಲಿ ಉದ್ಯೋಗಗಳ ಕೊರತೆ, ಸರ್ಕಾರಿ ನೇಮಕಾತಿ ವಿಳಂಬ ಮತ್ತು ಇತರ ಕೆಲವು ವೈಯಕ್ತಿಕ ಸಮಸ್ಯೆಗಳಿಂದಾಗಿ ಅರ್ಜಿ ಸಲ್ಲಿಸಲೇಬೇಕಾದ ಅನಿವಾರ್ಯತೆ ಇದೆ. ಜೊತೆಗೆ ಆರ್ಥಿಕವಾಗಿ ಬದುಕುಳಿಯಲು ಇದು ತುಂಬಾ ಮುಖ್ಯ, ಜೀವನೋಪಾಯಕ್ಕಾಗಿ ಮಾಡಬೇಕಾಗುತ್ತದೆ ಎಂದು ತಿಳಿಸಿದರು. ಈ ಮೂಲಕ ವಿದ್ಯಾವಂತ ಯುವಕರ ಎದುರಿಸುತ್ತಿರುವ ಒತ್ತಡ ಎದ್ದು ಕಾಣಿಸುತ್ತಿದೆ.

ಇದಕ್ಕೂ ಮುನ್ನ ಸಂಬಲ್ಪುರದಲ್ಲಿ ನಡೆದ ಪರೀಕ್ಷೆ ವೇಳೆ ಸುಮಾರು 8,000 ಅಭ್ಯರ್ಥಿಗಳು 187 ಹೋಮ್ ಗಾರ್ಡ್ ಹುದ್ದೆಗಳಿಗೆ ಸ್ಪರ್ಧಿಸಿದ್ದರು.

Ads on article

Advertise in articles 1

advertising articles 2

Advertise under the article