ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿಯಾದ ಕಡಲ ತೀರ ವಲಯ ನಿರ್ವಹಣಾ ಸಮಿತಿ ಉಡುಪಿ ಜಿಲ್ಲಾ ಸದಸ್ಯ ಎ.ಕೆ.ಅನ್ಸಾಫ್

ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿಯಾದ ಕಡಲ ತೀರ ವಲಯ ನಿರ್ವಹಣಾ ಸಮಿತಿ ಉಡುಪಿ ಜಿಲ್ಲಾ ಸದಸ್ಯ ಎ.ಕೆ.ಅನ್ಸಾಫ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿರುವ ಅರಣ್ಯ ಜೀವಿಶಾಸ್ತ್ರ , ಪರಿಸರ ಸಚಿವ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಈಶ್ವರ್ ಬಿ. ಖಂಡ್ರೆ ಅವರನ್ನು ಉಡುಪಿ ಜಿಲ್ಲಾ ಕಡಲ ತೀರ ವಲಯ ನಿರ್ವಹಣಾ ಸಮಿತಿ ಸದಸ್ಯ ಎ.ಕೆ.ಅನ್ಸಾಫ್ ಅವರು ಭೇಟಿಯಾಗಿ ಅಗತ್ಯ ಸಲಹೆ ಸೂಚನೆಯನ್ನು ಪಡೆದುಕೊಂಡರು.

ಅರಣ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಶುಕ್ರವಾರ ಮಂಗಳೂರಿಗೆ ಆಗಮಿಸಿದ್ದ ಸಚಿವ ಈಶ್ವರ್ ಬಿ. ಖಂಡ್ರೆ ಅವರನ್ನು ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎ ಕೆ ಅನ್ಸಾಫ್ ಅವರು ಸ್ವಾಗತಿಸಿದರು , ಟೀಂ ಖಂಡ್ರೆ ವಿದ್ ಇಂಟಿಗ್ರಿಟಿಯ ಸ್ಥಾಪಕ ಅಧ್ಯಕ್ಷರೂ ಆಗಿರುವ ಎ ಕೆ ಅನ್ಸಾಫ್ ರವರು ಈ ಸಂದರ್ಭ ತನ್ನ ಮಾರ್ಗದರ್ಶಕರಾದ ಸಚಿವ ಈಶ್ವರ್ ಬಿ ಖಂಡ್ರೆ ಅವರಿಂದ ಕಡಲ ತೀರಾ ವಲಯ ನಿರ್ವಹಣಾ ಸಮಿತಿಗೆ ಸಂಬಂಧಿಸಿ ಅಗತ್ಯ ಸಲಹೆ ಸೂಚನೆಯನ್ನು ಪಡೆದುಕೊಂಡರು

Ads on article

Advertise in articles 1

advertising articles 2

Advertise under the article