'ಗಲ್ಫ್ ಐಡಲ್' ವಿಜೇತರಿಗೆ ನನ್ನ ಸಿನಿಮಾದಲ್ಲಿ ನೇರ ಅವಕಾಶ: ಕಣ್ಣನ್ ರವಿ ಘೋಷಣೆ
ದುಬೈನಲ್ಲಿ ತನ್ನ ಚೊಚ್ಚಲ ಆವೃತ್ತಿಯ ಸ್ಫರ್ಧಾ ಕಾರ್ಯಕ್ರಮದಲ್ಲೇ ಜನಮೆಚ್ಚುಗೆ ಪಡೆಯುತ್ತಿರುವ ಗಲ್ಫ್ ಐಡಲ್ ಸೆಮಿಫೈನಲ್ ಸ್ಪರ್ಧೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಇದೀಗ 'ಗ್ರ್ಯಾಂಡ್ ಫಿನಾಲೆ' ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು, ಜನವರಿ 10ರಂದು ಇತಿಸಲಾತ್ ಅಕಾಡೆಮಿ ಮೈದಾನದಲ್ಲಿ ಸ್ಪರ್ಧಿಗಳ ನಡುವೆ ಫೈನಲ್ ಹಣಾಹಣಿ ನಡೆಯಲಿದೆ.
ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಭಾರತ, ಅಮೇರಿಕಾ, ಕೆನಡಾ, ಯುಕೆ, ನೇಪಾಳ, ಫಿಲಿಪ್ಪೀನ್ಸ್, ಸಿರಿಯಾ, ಆಫ್ರಿಕಾ ದೇಶಗಳ 300 ಸ್ಪರ್ಧಿಗಳ ನಡುವೆ ನಡೆದ ಗಾಯನ, ನೃತ್ಯ, ಕೌಶಲ್ಯ ಸ್ಪರ್ಧೆಯಲ್ಲಿ 21 ಸ್ಪರ್ಧಿಗಳು ಫೈನಲ್'ಗೆ ತೇರ್ಗಡೆ ಹೊಂದಿದ್ದು, ಇತಿಸಲಾತ್ ಅಕಾಡೆಮಿ ಮೈದಾನದಲ್ಲಿ ಸಾವಿರಾರು ಪ್ರೇಕ್ಷಕರ ಮುಂದೆ ಫೈನಲ್ ಪ್ರದರ್ಶನ ನೀಡಲಿದ್ದಾರೆ. ಗ್ರ್ಯಾಂಡ್ ಫಿನಾಲೆ ಯ ಮುಖ್ಯ ತೀರ್ಪುಗಾರರಾಗಿ ಬಾಲಿವುಡ್ ನಟಿ ಮಲೈಕಾ ಅರೋರ ಭಾಗವಹಿಸುತ್ತಿದ್ದು, ಕಾರ್ಯಕ್ರಮಕ್ಕೆ ತಾರಾ ಮೆರುಗು ನೀಡಲಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಸಾಹಿಲ್ ಝಹೀರ್ ಫೈನಲ್ ಕಾರ್ಯಕ್ರಮ ನಿರೂಪಿಸಲಿದ್ದಾರೆ.
ಫೈನಲ್ ಸ್ಪರ್ಧಿಗಳಿಗೆ ಸುವರ್ಣ ಅವಕಾಶ: ದುಬೈ ಉದ್ಯಮಿ, ಸಿನಿಮಾ ನಿರ್ಮಾಪಕ ಕಣ್ಣನ್ ರವಿಯವರು ಗಲ್ಫ್ ಐಡಲ್ ತಂಡದ ಜೊತೆ ಕೈಜೋಡಿಸಿ, ಪ್ರಾಯೋಜಕತ್ವ ಮಾತ್ರವಲ್ಲದೆ ಫೈನಲ್ ವಿಜೇತರಿಗೆ ತನ್ನ ಮುಂದಿನ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಘೋಷಿಸಿದ್ದಾರೆ, ಇದು ಫೈನಲ್ ವಿಜೇತರಿಗೆ ಉಜ್ವಲ ಭವಿಷ್ಯವನ್ನು ರೂಪಿಸಲು ಸದುಪಯೋಗಪಡೆಸುವ ವೇದಿಕೆಯಾಗಲಿದೆ.
'ಗಲ್ಫ್ ಐಡಲ್' ಯಶಸ್ವಿನ ಹಿಂದಿರುವ ಶಕ್ತಿ, ಅನಿವಾಸಿ ಕನ್ನಡತಿ ಡಾ.ರಶ್ಮಿ ನಂದಕಿಶೋರ್: ದುಬೈನ ಪ್ರಸಿದ್ಧ ರೀವಾ ಸಂಸ್ಥೆಯು ಗಲ್ಫ್ ಐಡಲ್'ಗೆ ಮುಖ್ಯ ಪ್ರಾಯೋಜಕತ್ವ ನೀಡಿದ್ದು ಮಾತ್ರವಲ್ಲ ಸಂಸ್ಥೆಯ ಮುಖ್ಯಸ್ಥೆ ಡಾ. ರಶ್ಮಿ ನಂದಕಿಶೋರ್ 'ಗಲ್ಫ್ ಐಡಲ್' ಕಾರ್ಯಕ್ರಮದ ಚೇರ್ಮನ್ ಆಗಿ ಇದರ ಯಶಸ್ಸಿನ ಹಿಂದಿರುವ ತಂಡದ ಪ್ರೇರಣೆಯಾಗಿದ್ದಾರೆ. ಝಿಯಾವುದ್ದೀನ್ ಮಹಮ್ಮದ್ ಝಹೀರ್, ಅಧ್ಯಕ್ಷರು ಗಲ್ಫ್ ಐಡಲ್, ಮಹಮ್ಮದ್ ಇಸ್ಮಾಯಿಲ್ ಮೂಳೂರು ಉಪಾಧ್ಯಕ್ಷರು, ಮೇಘ ಸಾಗರ್ ಶೆಟ್ಟರ್, ಕುಬ್ರಾ ಇಸ್ಮಾಯಿಲ್ ಹಾಗೂ ಶ್ವೇತಾ ರಾಮ್ ನಿರ್ದೇಶಕರು, ಅಶೋಕ್ ಬೈಲೂರು ಸಲಹೆಗಾರರಾಗಿ ತಂಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿವಿಐಪಿ ಆಫರ್: ರೀವಾ ಸಂಸ್ಥೆಯ 16ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಗ್ರ್ಯಾಂಡ್ ಫೆನಾಲೆ ಕಾರ್ಯಕ್ರಮದ AED 5000 ಮೌಲ್ಯದ ವಿವಿಐಪಿ ಟಿಕೆಟ್ ಅನ್ನು ವಿಶೇಷ ರಿಯಾಯಿತಿ ಮೂಲಕ AED1000ಗೆ ನೀಡುತ್ತಿದ್ದು, ಈ ಆಫರ್ ಕೆಲವೇ ಟಿಕೆಟ್'ಗಳು ಬಾಕಿ ಇದ್ದು, ಬೇಕಾದವರು ಕೂಡಲೇ +971507868853 ಸಂಪರ್ಕಿಸಿ ಬುಕ್ ಮಾಡಬಹುದು.
