ಅದ್ದೂರಿಯಾಗಿ ನಡೆದ ಕಣ್ಣೂರು ಆಂಗ್ಲ ಮಾಧ್ಯಮ ಶಾಲೆಯ ಶಾಲಾ ವಾರ್ಷಿಕೋತ್ಸವ
ಮಂಗಳೂರು: ಪೋಷಕರು ಮಕ್ಕಳಿಗೆ ಆಸ್ತಿ ಮಾಡಿಡುವ ಬದಲು, ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಲು ಅವರಿಗೆ ಉತ್ತಮ ಶಿಕ್ಷಣ ನೀಡಬೇಕು. ಹಾಗಾದಲ್ಲಿ ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಮೂಡಿಬರುತ್ತಾರೆ ಎಂದು ಡಾಕ್ಟರ್ ಯು.ಟಿ.ಇಫ್ತಿಕಾರ್ ಇವರು ಅಭಿಪ್ರಾಯ ಪಟ್ಟರು.
ಕಣ್ಣೂರು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚಿಗೆ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು. ಇನ್ನಿಬ್ಬರು ಮುಖ್ಯ ಅತಿಥಿಗಳಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ , ಉದ್ಯಮಿ ಝಕರಿಯ ಜೋಕಟ್ಟೆ ಹಾಗೂ ಜೆ ಆರ್ ಲೋಬೋ ಸಂಸ್ಥೆಯ ಕುರಿತು ಮಾತನಾಡಿ ಶುಭ ಹಾರೈಸಿದರು. ಸಂಸ್ಥೆಯ ಅಧ್ಯಕ್ಷರಾದ ಎಸ್ ಮೊಹಮ್ಮದ್ ಅಧ್ಯಕ್ಷತೆಯನ್ನು ವಹಿಸಿದ್ದರು.
2024-25ನೇ ಸಾಲಿನ ಪ್ರತೀ ತರಗತಿಯ ಕಲಿಕೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಹಾಜರಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ವಿಧ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಮುಖ್ಯ ಅತಿಥಿಗಳು ವಿತರಿಸಿದರು. 2025- 26 ಸಾಲಿನ ಎಸೆಸೆಲ್ಸಿ ಹಾಗೂ ಪಿಯುಸಿಯ ಉತ್ತಮ ಹೊರಹೋಗುವ ವಿದ್ಯಾರ್ಥಿಗಳಾಗಿ ಫಾತಿಮಾ ಅಫ್ನಾಝ್ ಹಾಗೂ ಜೈನಬ ಅಲ್ಸಿಯ ಸ್ಮರಣಿಕೆಯನ್ನು ಪಡೆದುಕೊಂಡರು.
ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ , ಉದ್ಯಮಿ ಝಕರಿಯ ಜೋಕಟ್ಟೆ ಹಾಗೂ ಸಂಸ್ಥೆಯ ಅಬ್ದುಲ್ ಕರೀಂ ಹಾಜಿ ಶಿರಸಿ ಇವರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು. ಅತಿಥಿಗಳಾಗಿ ಸಂಸ್ಥೆಯ ಕಾರ್ಯದರ್ಶಿ ಎಸ್ ಉಮರಬ್ಬ ಹಾಗೂ ಸಿತಾರ್ ಅಬ್ದುಲ್ ಮಜೀದ್, ಸಂಚಾಲಕರಾದ ರಿಯಾಝ್ ಅಹಮದ್ ಕಣ್ಣೂರು ಹಾಗೂ ಸಂಸ್ಥೆಯ ಪ್ರೌಢ ಹಾಗೂ ಪ್ರಾಥಮಿಕ ಮುಖ್ಯ ಶಿಕ್ಷಕರು ಸಂಶಾದ್ ಹಾಗೂ ವಿಶಾಲಾಕ್ಷಿ ಮತ್ತಿತರು ಉಪಸ್ಥತರಿದ್ದರು.
ಸಂಚಾಲಕ ರಿಯಾಝ್ ಅಹಮ್ಮದ್ ಪ್ರಾಸ್ತಾವಿಕ ಭಾಷಣ ಮಾಡಿದರು. ಮುಖ್ಯ ಶಿಕ್ಷಕಿ ಸಂಶಾದ್ 2024 - 25ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಸಭಾ ಕಾರ್ಯಕ್ರಮದ ನಂತರ ಪ್ರಾಥಮಿಕ ವಿಧ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಕಾರ್ಯದರ್ಶಿಯಾದ ಸಿತಾರ್ ಅಬ್ದುಲ್ ಮಜಿದ್ ಸ್ವಾಗತಿಸಿ, ವಿದ್ಯಾರ್ಥಿನಿ ನುಹೈಮ ಕಿರಾಅತ್ ಪಠಿಸಿದರು.ಶಿಕ್ಷಕಿ ಅಫ್ರತ್ ವಂದಿಸಿ, ಶಿಕ್ಷಕಿ ಜಯಲತ ಕಾರ್ಯಕ್ರಮ ನಿರೂಪಿಸಿದರು.








