ಉಡುಪಿ: "ಅಕ್ಕ ಪಡೆ ವಾಹನ"ಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಸ್ವರೂಪ

ಉಡುಪಿ: "ಅಕ್ಕ ಪಡೆ ವಾಹನ"ಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಸ್ವರೂಪ

ಉಡುಪಿ: ದೌರ್ಜನ್ಯ, ತೊಂದರೆಗೊಳಗಾಗುವ ಹೆಣ್ಣುಮಕ್ಕಳಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಮೂಲಕ‌ ಜಾರಿಗೊಳಿಸಿರುವ ಅಕ್ಕ ಪಡೆ ವಾಹನಕ್ಕೆ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಚಾಲನೆ ನೀಡಲಾಯಿತು. 

ಅಕ್ಕ ಪಡೆ ವಾಹನಕ್ಕೆ ಚಾಲನೆ ನೀಡಿ ಜಿಲ್ಲಾಧಿಕಾರಿ ಸ್ವರೂಪ ಟಿಕೆ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಭಾಗಿತ್ವದಲ್ಲಿ ಈ ಅಕ್ಕ ಪಡೆ ಕಾರ್ಯನಿರ್ವಹಿಸಲಿದೆ. ನಗರ ಪ್ರದೇಶದಲ್ಲಿ ದೌರ್ಜನ್ಯಕ್ಕೊಳಗಾಗುವ ಹೆಣ್ಣುಮಕ್ಕಳಿಗೆ ತ್ವರಿತಗತಿಯಲ್ಲಿ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಈ ಅಕ್ಕಪಡೆಯನ್ನು ರಚಿಸಲಾಗಿದೆ. ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ಇದೊಂದು ಮಹತ್ವದ ಯೋಜನೆ ಆಗಿದೆ. ದೌರ್ಜನ್ಯ, ಸಂಕಷ್ಟಕ್ಕೊಳಗಾಗುವ ಹೆಣ್ಣುಮಕ್ಕಳು ಈ ಅಕ್ಕಪಡೆಯನ್ನು ಸಂಪರ್ಕಿಸಬಹುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ‌ ಹರಿರಾಮ್ ಶಂಕರ್ ಮಾತನಾಡಿ, ಈ ಅಕ್ಕ ಪಡೆ ವಾಹನದಲ್ಲಿ ನಾಲ್ಕು ಮಂದಿ ಮಹಿಳಾ ಹೋಮ್ ಗಾರ್ಡ್ ಹಾಗೂ ಓರ್ವ ಪೊಲೀಸ್ ಚಾಲಕರು ಇರಲಿದ್ದಾರೆ. ಈಗಾಗಲೇ ಇವರಿಗೆ ಒಂದು ವಾರಗಳ ತರಬೇತಿ ನೀಡಲಾಗಿದೆ. ಎಲ್ಲ ಪೊಲೀಸ್ ವಾಹನದಂತೆ ಈ ವಾಹನಕ್ಕೂ ವಾಯರ್ ಲೆಸ್ ಸೆಟ್ ಗಳನ್ನು ಅಳವಡಿಸಲಾಗಿದೆ. ತುರ್ತಾಗಿ ಸ್ಪಂದಿಸಲು ಬೇಕಾದ ಎಲ್ಲ ಸೌಲಭ್ಯಗಳು ಈ ವಾಹನದಲ್ಲಿದೆ. ನಗರ ಪ್ರದೇಶದಲ್ಲಿ ಮಹಿಳೆಯರಿಗೆ ತೊಂದರೆ ಆದಂತಹ ಸಂದರ್ಭದಲ್ಲಿ ಮೊದಲು ಈ ವಾಹನವನ್ನು ಕಳುಹಿಸುತ್ತೇವೆ. ಶಾಲಾ ಮಕ್ಕಳು, ಕಾಲೇಜು ಮಕ್ಕಳು, ಹಾಸ್ಟೇಲ್ ಗಳು, ಹೆಣ್ಣು ಮಕ್ಕಳು ಹೆಚ್ಚಿರುವ ಪ್ರದೇಶಗಳಲ್ಲಿ ಈ ವಾಹನ ಸಂಚರಿಸಲಿದೆ ಎಂದು ತಿಳಿಸಿದರು.

Ads on article

Advertise in articles 1

advertising articles 2

Advertise under the article