ಯಲ್ಲಾಪುರದಲ್ಲಿ ರಂಜಿತಾ ಹತ್ಯೆ ಬೆನ್ನಲ್ಲೇ ಕಾಡಿನಲ್ಲಿ ಆರೋಪಿ ರಫೀಕ್ ಶವ ಪತ್ತೆ!
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದ ವಿವಾಹಿತೆ ರಂಜಿತಾ ಹತ್ಯೆ ತೀವ್ರ ಆಕ್ರೋಶಕ್ಕೆ ಕಾರಣವಾಗಿರುಬಾ ಬೆನ್ನಲ್ಲೇ ಆರೋಪಿ ರಫೀಕ್ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ರಂಜಿತಾಳ ಹತ್ಯೆ ನಂತರ ರಫೀಕ್ ಕೂಡ ಕಣ್ಮರೆಯಾಗಿದ್ದನು. ರಂಜಿತಾ ಹತ್ಯೆ ಖಂಡಿಸಿ ಇಂದು ಯಲ್ಲಾಪುರ ಬಂದ್‌ಗೆ ಕರೆ ನೀಡಲಾಗಿತ್ತು. ಇದೀಗ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣದ ಆರೋಪಿ ಯಲ್ಲಾಪುರದ ರಾಮಾಪುರ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾಳಮ್ಮನಗರದ ನಿವಾಸಿ 30 ವರ್ಷದ ಆರೋಪಿ ಮಹಮ್ಮದ್ ರಫೀಕ್ ಇಮಾಮ್‌ಸಾಬ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ರಾಮಾಪುರ ಕಾಡಿನಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ರಫಿಕ್‌ನ ಮೃತದೇಹ ಪತ್ತೆಯಾಗಿದೆ.
ಹಾಡಹಗಲೇ ರಂಜಿತಾ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದನು. ಇನ್ನು ಈ ಘಟನೆ ಬಗ್ಗೆ ಮೃತ ರಂಜಿತಾ ಸಹೋದರ ವೀರಭದ್ರ ಮಾತನಾಡಿ, ಹಾಡಹಗಲೇ ಕೃತ್ಯ ನಡೆಸಿದ್ದಾನೆ, ನನ್ನ ಕೈಯಲ್ಲಿಯೇ ತಂಗಿ ಜೀವ ಬಿಟ್ಟಿದ್ದಾಳೆ. ಹಣಕಾಸಿನ ವಿಚಾರದ ಹಿನ್ನೆಲೆಯಲ್ಲಿ ಆರೋಪಿ ರಫೀಕ್ ಮತ್ತು ರಂಜಿತಾಳ ಪರಿಚಯವಾಗಿತ್ತು. ರಫೀಕ್ಗೆ ಲವರ್ ಕೈಕೊಟ್ಟಿದ್ದರಿಂದ ನನ್ನ ತಂಗಿಗೆ ಗಂಟು ಬಿದ್ದಿದ್ದ, ಈಗ ಕೊಲೆ ಮಾಡಿದ್ದಾನೆ ಎಂದು ಹೇಳಿದ್ದಾರೆ.