BJPಗೆ ಶಾಕ್; ದೆಹಲಿ ಪಾಲಿಕೆ ಹಿಡಿದ ಆಪ್: 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯ

BJPಗೆ ಶಾಕ್; ದೆಹಲಿ ಪಾಲಿಕೆ ಹಿಡಿದ ಆಪ್: 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯ


ನವದೆಹಲಿ(Headlines Kannada): ದೆಹಲಿ ಪಾಲಿಕೆಯ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಮೊದಲ ಬಾರಿಗೆ ಆಪ್‌ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಮೂಲಕ 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯಗೊಂಡಿದೆ.

ತೀವ್ರ ಕುತೂಹಲ ಕೆರೆಳಿಸಿದ್ದ ಎಂಸಿಡಿ ಚುನಾವಣೆಯಲ್ಲಿ ಬಿಜೆಪಿ ಪೈಪೋಟಿಯ ಹೊರತಾಗಿಯೂ ದೆಹಲಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ AAP ಪಕ್ಷ ಯಶಸ್ವಿಯಾಗಿದ್ದು, 150ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಗೆಲ್ಲುವ ಮೂಲಕ ಮೊದಲ ಬಾರಿಗೆ ಅಧಿಕಾರವನ್ನಿಡಿದಿದೆ. ಆ ಮೂಲಕ ದೆಹಲಿಯಲ್ಲಿ 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯಗೊಂಡಿದ್ದು, ಮತ ಎಣಿಕೆಯ ಆರಂಭದ ವೇಳೆ ಬಿಜೆಪಿ ಮತ್ತು AAP ಮಧ್ಯೆ ನೇರಾನೇರ ಸ್ಪರ್ಧೆ ಇತ್ತು. ಬಳಿಕ AAP ಮುನ್ನಡೆಯನ್ನು ಕಾಯ್ದುಕೊಂಡು ವಿಜಯದ ನಗೆ ಬೀರಿತು. 

ದೆಹಲಿಯ 250 ವಾರ್ಡ್ ಗಳ ಪೈಕಿ AAP ಪಕ್ಷ 136 ವಾರ್ಡ್ ಗಳಲ್ಲಿ ಜಯಭೇರಿ ಭಾರಿಸಿದ್ದು, ಬಹುಮತಕ್ಕೆ ಅಗತ್ಯವಿರುವ 126 ಸ್ಥಾನಗಳನ್ನು ಮೀರಿ ಇನ್ನೂ 10 ಹೆಚ್ಚುವರಿ ಸ್ಥಾನಗಳೊಂದಿಗೆ ಆಪ್ ಅಧಿಕಾರದ ಗದ್ದುಗೆ ಏರಿದೆ.. ಆದರೆ ಆಡಳಿತಾರೂಢ ಬಿಜೆಪಿ 90 ಸ್ಥಾನಗಳಲ್ಲಿ ಗೆದ್ದಿದ್ದು,  ಇನ್ನೂ 10ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಇದರ ಗಳಿಕೆ 105ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಉಳಿದಂತೆ ಕಾಂಗ್ರೆಸ್ 9 ಮತ್ತು ಪಕ್ಷೇತರರು 4 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದಾರೆ. 

Ads on article

Advertise in articles 1

advertising articles 2

Advertise under the article