ಕುಕ್ಕುಂದೂರು: ಬಾವಿಗೆ ಬಿದ್ದು ವೃದ್ಧ ಮೃ#ತ್ಯು
Wednesday, December 7, 2022
ಕಾರ್ಕಳ(Headlines Kannada): ನೀರು ತರಲು ಹೋದ ವೃದ್ಧರೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃ#ತಪಟ್ಟ ಘಟನೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಮೇಲ್ಜಡ್ಡು ಎಂಬಲ್ಲಿ ಡಿ.6ರಂದು ಸಂಜೆ ನಡೆದಿದೆ.
ಕುಕ್ಕುಂದೂರು ಗ್ರಾಮದ ಮೇಲ್ಜಡ್ಡು ನಿವಾಸಿ 65 ವರ್ಷದ ಚುಕುಡ ಎಂದು ಗುರುತಿಸಲಾಗಿದೆ. ಇವರು ಪ್ರತಿದಿನ ಸಂಜೆ ಬಾವಿಯಿಂದ ನೀರು ತೆಗೆದು ತೋಟಕ್ಕೆ ಹಾಕುತ್ತಿದ್ದರು. ಅದರಂತೆ ನಿನ್ನೆ ಸಂಜೆ ಕೊಡಪಾನ ಹಿಡಿದುಕೊಂಡು ತೋಟದಲ್ಲಿರುವ ಬಾವಿಗೆ ಹೋಗಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿ ನೀರಿಗೆ ಬಿದ್ದು ಮುಳುಗಿ ಮೃ#ತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.