ಗಂಡನಿಲ್ಲದ ವೇಳೆ ಜೂ#ಜಾಟದಲ್ಲಿ ಸೋತು ಬೇರೊಬ್ಬನ ಪಾಲಾದ ಎರಡು ಮಕ್ಕಳ ತಾಯಿ !  ಮುಂದೆ ಏನಾಯಿತು ನೋಡಿ...

ಗಂಡನಿಲ್ಲದ ವೇಳೆ ಜೂ#ಜಾಟದಲ್ಲಿ ಸೋತು ಬೇರೊಬ್ಬನ ಪಾಲಾದ ಎರಡು ಮಕ್ಕಳ ತಾಯಿ ! ಮುಂದೆ ಏನಾಯಿತು ನೋಡಿ...ಪ್ರತಾಪಗಢ(Headlines Kannada): ಜೂ#ಜಾಟಕ್ಕೆ ಜಗತ್ತಿನಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದಕ್ಕೆ ಇಲ್ಲೊಂದು ನಡೆದ ಘಟನೆಯೇ ಸಾಕ್ಷಿ. 

ಲೂ#ಡೊ ಚಟಕ್ಕೆ ಬಿದ್ದ ವಿವಾಹಿತ ಮಹಿಳೆಯೊಬ್ಬಳು ಎಲ್ಲವನ್ನು ಕಳೆದುಕೊಂಡು ಕೊನೆಗೆ ತಾನೇ ಪಣಕ್ಕಿಟ್ಟು ಸೋತು ಬೇರೊಬ್ಬನ ಪಾಲಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ನಗರ್‌ ಕೊತ್ವಾಲಿಯಲ್ಲಿ ಈ ನಡೆದಿದ್ದು, ಲೂ#ಡೊ ಚಟಕ್ಕೆ ಬಿದ್ದ ವಿವಾಹಿತ ಮಹಿಳೆಯೊಬ್ಬಳು ಹಣವನ್ನೆಲ್ಲ ಕಳೆದುಕೊಂಡು, ಕೊನೆಯಲ್ಲಿ ತನ್ನನ್ನೇ ತಾನು ಪಣವಿಟ್ಟು ಸೋತು ಇದೀಗ ಬೇರೊಬ್ಬನ ಪಾಲಾಗುವ ಮೂಲಕ ಸುದ್ದಿಯಾಗಿದ್ದಾಳೆ. ಇದೀಗ ಆಕೆಯ ಪತಿ ತನ್ನ ಪತ್ನಿಯನ್ನು ತನಗೆ ಒಪ್ಪಿಸುವಂತೆ ಗ್ರಾಮದ ಹಿರಿಯರಿಗೆ ದಂಬಾಲುಬಿದ್ದಿದ್ದಾರೆ.

ಈಗ ಸುದ್ದಿಯಲ್ಲಿರುವುದು 2 ಮಕ್ಕಳ ತಾಯಿ ರೇಣು. ಆಕೆಯ ಪತಿ ರಾಜಸ್ಥಾನದ ಜೈಪುರದಲ್ಲಿ ಕೆಲಸ ಮಾಡುತ್ತಿದ್ದು, ಪ್ರತೀ ತಿಂಗಳು ಆಕೆಗೆ ಹಣ ಕಳುಹಿಸುತ್ತಿದ್ದ. ಆದರೆ ಲೂಡೋ ಗೀಳಿಗೆ ಬಿದ್ದ ಪತ್ನಿ ರೇಣು ತನ್ನ ಪತಿ ಕಳುಹಿಸಿದ ಹಣವನ್ನೆಲ್ಲ ತನ್ನ ಭೂ ಮಾಲೀಕನೊಂದಿಗೆ ಲೂಡೋ ಆಡುತ್ತಿದ್ದಳು.  ಕಳೆದ ವಾರ ಆಟ ಆಡುತ್ತ ಈಕೆ ಪೂರ್ತಿ ಹಣ ಸೋತಿದ್ದಾಳೆ. ಬಳಿಕ ತನ್ನ ಬಳಿ ಏನೂ ಇಲ್ಲದ ಕಾರಣ ಆಟದಲ್ಲಿ ತನ್ನನ್ನೇ ತಾನು ಪಣಕ್ಕಿಟ್ಟುಕೊಂಡಿದ್ದಾಳೆ. ಲೂಡೋದಲ್ಲಿ ಸೋತು ಇದೀಗ ಆತನ ಪಾಲಾಗಿ ಆತನೊಂದಿಗೇ ನೆಲೆಸಿದ್ದಾಳೆ.

ಇದಾದ ಬಳಿಕ ಪತಿಗೆ ಕರೆ ಮಾಡಿ ಘಟನೆಯನ್ನು ವಿವರಿಸಿದ್ದಾಳೆ. ಊರಿಗೆ ಮರಳಿದ ಪತಿ ಇದನ್ನೆಲ್ಲಾ ಅರಿತು ಈ ಕುರಿತು ಸ್ಥಳೀಯ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, ಎಲ್ಲೆಡೆ ಹರಿದಾಡುತ್ತಿದೆ. 

ಇವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಆರು ತಿಂಗಳ ಹಿಂದೆ ರೇಣು ಪತಿ ಕೆಲಸಕ್ಕಾಗಿ ಜೈಪುರಕ್ಕೆ ಹೋಗಿದ್ದರು. ಈ ವೇಳೆ ಆಕೆ ಭೂ ಮಾಲೀಕನೊಂದಿಗೆ ವಾಸಿಸಲು ಪ್ರಾರಂಭಿಸಿದ್ದಾಳೆ. ಅಲ್ಲಿಂದ ವಾಪಸ್‌ ಬರಲು ತಾನು ಕೇಳಿಕೊಂಡೆ. ಆದರೆ ಆಕೆ ಸಿದ್ಧವಿಲ್ಲ ಎಂದು ರೇಣು ಪತಿ ಆರೋಪಿಸಿದ್ದಾರೆ.

Ads on article

Advertise in articles 1

advertising articles 2

Advertise under the article