ಉಡುಪಿಯಲ್ಲಿ ಮನುಸ್ಮೃತಿ ದ#ಹಿಸಿ ದಲಿತ ಮುಖಂಡರ ಆಕ್ರೋಶ; ಮನುಸ್ಮೃತಿ ಮೂಲಕ ದಲಿತರ ದಮನಕ್ಕೆ ಯತ್ನ: ಜಯನ್ ಮಲ್ಪೆ ಕಿಡಿ

ಉಡುಪಿಯಲ್ಲಿ ಮನುಸ್ಮೃತಿ ದ#ಹಿಸಿ ದಲಿತ ಮುಖಂಡರ ಆಕ್ರೋಶ; ಮನುಸ್ಮೃತಿ ಮೂಲಕ ದಲಿತರ ದಮನಕ್ಕೆ ಯತ್ನ: ಜಯನ್ ಮಲ್ಪೆ ಕಿಡಿ

ಮನುಸ್ಮೃತಿ ಪೂರ್ತಿ ಜಾರಿಗೊಂಡರೆ ದಲಿತರ ಬದುಕು ನಿರ್ನಾಮ: ಸುಂದರ್ ಮಾಸ್ತರ್ ಆತಂಕ

ಉಡುಪಿ (Headlines Kannada): ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಸಮಿತಿ ಉಡುಪಿ ಜಿಲ್ಲೆ ಇದರ ವತಿಯಿಂದ ಅಜ್ಜರಕಾಡಿನ ಹುತಾತ್ಮರ ಸ್ಮಾರಕದ ಮುಂಭಾಗದಲ್ಲಿ‌ ರವಿವಾರ ಮನುಸ್ಮೃತಿ ದ#ಹನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 



ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ದಲಿತ ಮುಖಂಡ ಸುಂದರ್ ಮಾಸ್ತರ್ ಅವರು, ಕಳೆದ ಏಳೆಂಟು ವರ್ಷಗಳಲ್ಲಿ ಶೇ.50ರಷ್ಟು ಭಾಗ ಮನುಸ್ಮೃತಿ ಜಾರಿಗೊಂಡಿದೆ. ಇದು ಪೂರ್ತಿಯಾಗಿ ಜಾರಿಗೊಂಡರೆ, ನಮ್ಮ ಬದುಕನ್ನು ನಾವು ಕಳೆದುಕೊಳ್ಳುತ್ತೇವೆ. ಹಾಗಾಗಿ ಮುಂದಿನ ದಿನಗಳಲ್ಲಿ ದಲಿತರೆಲ್ಲ ಒಗ್ಗೂಡಿ ಇನ್ನಷ್ಟು ತೀವ್ರಗತಿಯ ಹೋರಾಟಗಳನ್ನು ಮಾಡಬೇಕು ಎಂದು ಕರೆ ನೀಡಿದರು.

ದೇಶದಲ್ಲಿ ದಲಿತರ ಮೇಲೆ ಸಾವಿರಾರು ದೌರ್ಜನ್ಯ ಪ್ರಕರಣಗಳು ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಬಾಯಿ ಬಿಡುತ್ತಿಲ್ಲ. ಒಂದೇ ಒಂದು ಖಂಡನೀಯ ಶಬ್ದ ಅವರ ಬಾಯಿಂದ ಬರುತ್ತಿಲ್ಲ. ಅವರು ಸ‌ಂಪೂರ್ಣವಾಗಿ ಆರ್ ಎಸ್ ಎಸ್ ಒಗ್ಗಿಕೊಂಡಿದ್ದಾರೆ ಎಂಬುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಏಳೆಂಟು ವರ್ಷಗಳಲ್ಲಿ ಶೇ.50ರಷ್ಟು ಭಾಗ ಮನುಸ್ಮೃತಿ ಜಾರಿಗೊಂಡಿದೆ. ಆರಂಭ ಹಂತದಲ್ಲಿ ಸರಕಾರಿ ಸೌಮ್ಯದ ಹೆಚ್ಚಿನ ಸಂಸ್ಥೆಗಳನ್ನು ಖಾಸಗೀಕರಣ ಮಾಡಿದ್ರು. ಅದು ದೊಡ್ಡ ಅನ್ಯಾಯ. ದೇಶದಲ್ಲಿ ದಲಿತರ ಮೇಲೆ ಸಾವಿರಾರು ದೌರ್ಜನ್ಯ ಪ್ರಕರಣಗಳು ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಬಾಯಿ ಬಿಡುತ್ತಿಲ್ಲ. ಒಂದೇ ಒಂದು ಶಬ್ದ ಮಾತನಾಡಿಲ್ಲ‌. ಅವರು ಸ‌ಂಪೂರ್ಣವಾಗಿ ಆರ್ ಎಸ್ ಎಸ್ ಒಗ್ಗಿಕೊಂಡಿದ್ದಾರೆ ಎಂಬುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದರು. 

ಆರ್ ಎಸ್ ಎಸ್ ಮನುಸ್ಮೃತಿಯನ್ನು ಪೋಷಿಸುತ್ತಿದೆ...

ದಲಿತ ಹೋರಾಟಗಾರ ಜಯನ್ ಮಲ್ಪೆ ಮಾತನಾಡಿ, ಸಂಘಪರಿವಾರ ಅಂಬೇಡ್ಕರ್ ಬರೆದ ಸಂವಿಧಾನವನ್ನು ಯಾವತ್ತೂ ಒಪ್ಪದೆ, ಮನುಸ್ಮೃತಿಯ ಆಧಾರದಲ್ಲಿ ದಲಿತರನ್ನು ದಮನಿಸುವ ಕೆಲಸವನ್ನು ಈಗಲೂ ಮಾಡುತ್ತಿದೆ ಎಂದು ದೂರಿದರು. 

ಮನುಸ್ಮೃತಿ ದಲಿತರ ಪಾಲಿಗೆ ಶರಪಂಜರ ಇದ್ದಂತೆ. ಆ ರೀತಿಯ ಬಂಧನದಲ್ಲಿ ದಲಿತ ಸಮಾಜವನ್ನು ನೋಡಲಾಗುತ್ತಿತ್ತು. ದಲಿತರು ವಿದ್ಯೆ ಕಲಿತರೆ ಕಾದ ಸೀಶೆಯನ್ನು ಕಿವಿಗೆ ಹಾಕಬೇಕೆಂಬ, ದಲಿತರು ಮನನ ಮಾಡಿದರೆ ದೇಹ ಸೀಳುದಾಗಿ, ದಲಿತರು ವಿದ್ಯೆ ಕಲಿತರೆ ನಾಲಿಗೆ ಸೀಳಬೇಕೆಂದು ಹೇಳುವ ಮನುಸ್ಮೃತಿ ನಿಜಕ್ಕೂ ದಲಿತರಿಗೆ ಮಾತ್ರವಲ್ಲ ಇಡೀ ಮನುಕುಲಕ್ಕೆ ನಾಚಿಕೆಗೇಡಿನ ವಸ್ತುವಾಗಿದೆ ಎಂದು ಜಯನ್ ಮಲ್ಪೆ ಹೇಳಿದರು.

ಆರ್ ಎಸ್ ಎಸ್ ಮನುಸ್ಮೃತಿಯನ್ನು ಪೋಷಿಸುತ್ತಿದೆ. ದಲಿತರು ಯಾವತ್ತೂ ಕೂಡ ಅಭಿವೃದ್ಧಿ ಹೊಂದದ ರೀತಿಯಲ್ಲಿ, ಅವರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಪ್ರಗತಿ ಹೊಂದದ ರೀತಿಯಲ್ಲಿ ಈ ಮನುಸ್ಮೃತಿ ಕೆಲಸ ಮಾಡಿದೆ. ಈ ಧರ್ಮವನ್ನೆ ಇಟ್ಟುಕೊಂಡು ಸಂಘಪರಿವಾರ ಅಂಬೇಡ್ಕರ್ ಬರೆದ ಸಂವಿಧಾನವನ್ನು ಯಾವತ್ತೂ ಒಪ್ಪದೆ, ಈ ಮನುಸ್ಮೃತಿಯ ಆಧಾರದಲ್ಲಿ ದಲಿತರನ್ನು ದಮನಿಸುವ ಕೆಲಸವನ್ನು ಈಗಲೂ ಮಾಡುತ್ತಿದೆ. ಇದು ಅತ್ಯಂತ ನೋವಿನ ಸಂಗತಿ. 

ಧರ್ಮವನ್ನೇ ಆಧಾರವಾಗಿಟ್ಟುಕೊಂಡು, ಧರ್ಮವನ್ನೇ ರಾಜಕೀಯ ಬಂಡವಾಳ ಮಾಡಿಕೊಂಡು ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಬಳಿಸುವ ಷಡ್ಯಂತ್ರ ನಡೆಯುತ್ತಿದೆ. 

ಮನುಸ್ಮೃತಿಯಿಂದ ದಲಿತ ಸಮಾಜದ ಉದ್ಧಾರ ಸಾಧ್ಯವಿಲ್ಲವೆಂದು ಮನಗಂಡ ಬಾಬಾ ಸಾಹೇಬ್ ಅಂಬೇಡ್ಕರ್ ಅದನ್ನು ಸುಟ್ಟು ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ರಾಜ್ಯಾದ್ಯಂತ ದಲಿತ ಸಂಘಟನೆಗಳು ಒಗ್ಗೂಡಿ ಮನುಸ್ಮೃತಿಯನ್ನು ಸುಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಯನ್ ಮಲ್ಪೆ ತಿಳಿಸಿದರು.

ಎಲ್ಲ ದಲಿತ ಸಂಘಟನೆಗಳು ಒಂದಾಗಿ ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳು ಮರೆತು, ಸಾಮಾಜಿಕ ನೆಲೆಗಟ್ಟಿನಲ್ಲಿ ದಲಿತರ ಮೇಲೆ ನಡೆಯುವ ದೌರ್ಜನ್ಯಗಳನ್ನು ಇಟ್ಟುಕೊಂಡು ಹೋರಾಟ ಮಾಡುವ ಪಣತೊಡಬೇಕು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ದಲಿತ ಸಮಾಜಕ್ಕಾಗಿ, ಸಂವಿಧಾನದ ಉಳಿಯುವುಗಾಗಿ ನಾವೆಲ್ಲ ಒಂದೋಣ ಎಂದು ಕರೆ ನೀಡಿದರು.

ದಲಿತ ಮುಖಂಡರಾದ ಮಂಜುನಾಥ್ ಗಿಳಿಯಾರು, ಶ್ಯಾಮರಾಜ್ ಬಿರ್ತಿ, ಶೇಖರ್ ಹೆಜಮಾಡಿ,ವಿಶ್ವನಾಥ ಬೆಳ್ಳಂಪಳ್ಳಿ, ವಾಸುದೇವ ಮುದ್ದೂರು, ಸಂಜೀವ ಬಳ್ಕೂರು, ಹರೀಶ್ ಮಲ್ಪೆ, ಶ್ಯಾಮಸುಂದರ ತೆಕ್ಕಟ್ಟೆ, ಕುಮಾರ್ ಕೋಟ, ದಲಿತ ಪರ ಹೋರಾಟಗಾರರಾದ ಬಾಲಕೃಷ್ಣ ಶೆಟ್ಟಿ, ಪ್ರೊ. ಫಣಿರಾಜ್, ಶ್ರೀರಾಮ ದಿವಾಣ, ಯಾಸಿನ್ ಕೋಡಿಬೆಂಗ್ರೆ ಮೊದಲಾದವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article