ನನಗೆ ಪತಿ ಬೇಡವೆಂದು ಡಿ#ವೋರ್ಸ್(ವಿ#ಚ್ಛೇದನ)ಗೆ ಅರ್ಜಿ ಸಲ್ಲಿಸಿದ ಮಹಿಳೆ; ಕಾರಣ ಕೇಳಿದ್ರೆ ನೀವು ಶಾಕ್ ಆಗ್ತೀರಾ....!
ಲಖನೌ(Headlines Kannada): ಏನೆಲ್ಲ ಕಾರಣಗಳಿಗೆ ಮದುವೆಯಾದ ಗಂಡ-ಹೆಂಡತಿ ಬೇರೆ ಬೇರೆ ಆಗುತ್ತಾರೆ. ಇಲ್ಲೊಂದು ಮಹಿಳೆ ತನಗೆ ಪತಿ ಬೇಡ ಎಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ಅಷ್ಟಕ್ಕೂ ಕಾರಣವೇನು ಗೊತ್ತೇ...? ಈ ವರದಿ ಓದಿ...
ಪತಿ ತನ್ನ ಖರ್ಚುಗಳಿಗೆ ಹಣವನ್ನು ನೀಡುವುದಿಲ್ಲ, ಮೇಕಪ್ ವಸ್ತುಗಳನ್ನು ಖರೀದಿಸಲು ಕೂಡ ಹಣವನ್ನು ನೀಡುವುದಿಲ್ಲ ಎಂದು ಆರೋಪಿಸಿ ಉತ್ತರ ಪ್ರದೇಶದ ಅಲಿಗಢದ ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ಪ್ರದೇಶದ ನಿವಾಸಿಯಾಗಿರುವ ಮಹಿಳೆಯೊಬ್ಬಳು ಕೌಟುಂಬಿಕ ನ್ಯಾಯಾಲಯಕ್ಕೆ ವಿ#ಚ್ಛೇದನ ಅರ್ಜಿ ಸಲ್ಲಿಸಿದ್ದಾಳೆ. ನನ್ನ ನೋಟವು ಸರಿಯಿಲ್ಲ ಎಂದು ನನ್ನ ಪತಿ ಅವಮಾನಿಸುತ್ತಾರೆ. ನಾನು ಪತಿಯೊಂದಿಗೆ ಇರಲು ಅರ್ಹಳಲ್ಲವಂತೆ, ಹೀಗಾಗಿ ನಾನು ಆತನೊಂದಿಗೆ ವಾಸಿಸಲು ಸಾಧ್ಯವಿಲ್ಲ ಎಂದು ಮಹಿಳೆ ತಮ್ಮ ನೋವು ತೋಡಿಕೊಂಡಿದ್ದಾರೆ.
ನನ್ನ ಖರ್ಚುವೆಚ್ಚಗಳಿಗಾಗಿ ಹಣವನ್ನು ಕೇಳಿದಾಗ ಪತಿ ಹಣವನ್ನು ಕೊಡುವುದಿಲ್ಲಎಂದು ಮಹಿಳೆ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿರುವುದಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ನೇಮಕಗೊಂಡಿರುವ ಆಪ್ತ ಸಮಾಲೋಚಕ ಯೋಗೇಶ್ ಹೇಳಿದ್ದಾರೆ. ಇದಲ್ಲದೆ, ಮಹಿಳೆ ತನ್ನ ಅತ್ತೆ ಹಾಗು ಮಾವನ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
“ನಾನು ಮೇಕಪ್ಗಾಗಿ ಹಣ ಕೇಳಿದಾಗ ಅವರು ನಿರಾಕರಿಸುತ್ತಿದ್ದರು. ನನ್ನ ಖರ್ಚುವೆಚ್ಚಗಳನ್ನು ಸಹ ಪಾವತಿಸಲಿಲ್ಲ ಎಂದು ಮಹಿಳೆ ದೂರಿದ್ದಾಳೆ.