ಸುರತ್ಕಲ್'ನ ಅಮಾಯಕ ಜಲೀಲ್ ಹ#ತ್ಯೆ ಪ್ರಕರಣ; ಆರೋಪಿಗಳ ವಿರುದ್ಧ ಕಠಿಣ UAPA ಪ್ರಕರಣ ದಾಖಲಿಸುವಂತೆ ಇನಾಯತ್ ಅಲಿ ಒತ್ತಾಯ

ಸುರತ್ಕಲ್'ನ ಅಮಾಯಕ ಜಲೀಲ್ ಹ#ತ್ಯೆ ಪ್ರಕರಣ; ಆರೋಪಿಗಳ ವಿರುದ್ಧ ಕಠಿಣ UAPA ಪ್ರಕರಣ ದಾಖಲಿಸುವಂತೆ ಇನಾಯತ್ ಅಲಿ ಒತ್ತಾಯ

ಸಂತ್ರಸ್ತ ಕುಟುಂಬಕ್ಕೆ ಗರಿಷ್ಠ ಮೊತ್ತದ ಪರಿಹಾರಕ್ಕೆ ಆಗ್ರಹ!

ಮಂಗಳೂರು(Headlines Kannada): ಸುರತ್ಕಲ್ ನ ಕೃಷ್ಣಾಪುರದ 9ನೇ ಬ್ಲಾಕ್ ನಿವಾಸಿ, ದಿನಸಿ ಅಂಗಡಿ ವ್ಯಾಪಾರಿ ಜಲೀಲ್ ಅವರನ್ನು ದು#ಷ್ಕರ್ಮಿಗಳು ಹ#ತ್ಯೆಗೈದ ಪ್ರಕರಣದ ನೈಜ ಆರೋಪಗಳನ್ನು ಶೀಘ್ರ ಬಂಧಿಸಿ, ಆರೋಪಿಗಳ ವಿರುದ್ಧ UAPA ಅಡಿ ಪ್ರಕರಣ ದಾಖಲಿಸುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ರಾಜ್ಯ ಗೃಹ ಇಲಾಖೆಯನ್ನು ಆಗ್ರಹಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಗಳಿಂದ ನಿರಂತರವಾಗಿ ನೈ#ತಿಕ ಪೋಲಿಸ್ ಗಿರಿ ಪ್ರಕರಣಗಳು ನಡೆಯುತ್ತಿದ್ದು, ಆರೋಪಿಗಳ ವಿರುದ್ಧ ಪೋಲಿಸ್ ಇಲಾಖೆ ಯಾವುದೇ ರೀತಿಯ ಕಠಿಣ ಕ್ರಮ ಕೈಗೊಳ್ಳದೆ ಇರುವುದೇ ದು#ಷ್ಕರ್ಮಿಗಳಿಗೆ ಇಂತಹ ದು#ಷ್ಕೃತ್ಯಗಳಿಗೆ ಪ್ರೇರಣೆ ನೀಡುತ್ತಿದೆ ಹಾಗೂ ಇಂತಹ ದು#ಷ್ಕೃತ್ಯಗಳನ್ನು ಎಸಗಿ ಸಮಾಜದ ಸಾಮರಸ್ಯಕ್ಕೆ ಧಕ್ಕೆ ತರುವ ಸಮಾಜಘಾತುಕರು ಯಾರೇ ಇರಲಿ, ಅಂತಹವರು ಇಡೀ‌ ನಾಗರಿಕ ಸಮಾಜಕ್ಕೆ ಅಪಮಾನ ಹಾಗೂ ಇಂತಹ ಅಮಾನವೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರನ್ನು ಸಮಾಜ ಪಕ್ಷಾತೀತವಾಗಿ ಒಕ್ಕೊರಲಿನಿಂದ ಬಹಿಷ್ಕರಿಸಬೇಕಾಗಿದೆ ಎಂದು ಇನಾಯತ್ ಅಲಿ ಕರೆನೀಡಿದ್ದಾರೆ.

ಸರಕಾರ ಈ ವಿಷಯದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡದೆ ಶೀಘ್ರದಲ್ಲೇ ಈ ಹಿಂದೆ ಹ#ತ್ಯೆಯಾದ ಮಸೂದ್, ಫಾಝಿಲ್ ಹಾಗೂ ಜಲೀಲ್ ಕುಟುಂಬಕ್ಕೆ ಗರಿಷ್ಠ ಮೊತ್ತದ ಪರಿಹಾರವನ್ನು ನೀಡುವ ಮೂಲಕ ನೈ#ತಿಕತೆ ತೋರಿಸಬೇಕಾಗಿದೆ ಎಂದು ಒತ್ತಾಯಿಸಿರುವ ಇನಾಯತ್ ಅಲಿ, ಈ ಬಗ್ಗೆ ಅಧಿವೇಶನದಲ್ಲಿ ಸರಕಾರವನ್ನು ಆಗ್ರಹಿಸುವಂತೆ ಪಕ್ಷದ ಉನ್ನತ ಮಟ್ಟದ ನಾಯಕರಲ್ಲಿ ಕೋರಿಕೆ ಸಲ್ಲಿಸಿದ್ದೇನೆ ಎಂದಿದ್ದಾರೆ.

Ads on article

Advertise in articles 1

advertising articles 2

Advertise under the article