ಯುವತಿಗೆ ಅ#ಮಾನುಷವಾಗಿ ಥ#ಳಿಸಿದ ಪ್ರಿಯಕರ; ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್

ಯುವತಿಗೆ ಅ#ಮಾನುಷವಾಗಿ ಥ#ಳಿಸಿದ ಪ್ರಿಯಕರ; ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ಮಧ್ಯಪ್ರದೇಶ(Headlines Kannada): ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ 19 ವರ್ಷದ ಯುವತಿಯೊಬ್ಬಳಿಗೆ ಆಕೆಯ ಗೆಳೆಯ ಅ#ಮಾನುಷವಾಗಿ ಥ#ಳಿಸಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. 

ವಿಡಿಯೋ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು ಆರೋಪಿ ವಿರುದ್ಧ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ. ಘಟನೆಯು ರೇವಾದ ಮೌಗಂಜ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಆರೋಪಿ ಪಂಕಜ್ ತ್ರಿಪಾಠಿ ಮತ್ತು ವಿಡಿಯೋ ರೆಕಾರ್ಡ್ ಮಾಡಿದ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು ಇಬ್ಬರ ವಿರುದ್ಧವೂ ಐಟಿ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆ ಬಳಿಕ ಕೆಲವು ದಿನಗಳವರಗೆ  ಪರಾರಿಯಾಗಿದ್ದ ಪಂಕಜ್ ತ್ರಿಪಾಠಿ ಉತ್ತರ ಪ್ರದೇಶದ ಮಿರ್ಜಾಪುರದಿಂದ ಸಿಕ್ಕಿಬಿದ್ದಿದ್ದರು. ಯುವತಿ ಮದುವೆಗೆ ನಿರಾಕರಿಸಿದ್ದಕ್ಕಾಗಿ ಯುವಕ ಮನಬಂದಂತೆ ಥ#ಳಿಸಿದ್ದಾನೆ. ಇದನ್ನು ಪಂಕಜ್ ತ್ರಿಪಾಠಿ ಸ್ನೇಹಿತ ವೀಡಿಯೊ ಮಾಡಿದ್ದು, ಆತನೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದನು.ಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article