ದೇಶದ ಸಂವಿಧಾನ ರಕ್ಷಿಸಲು ಬಯಸುವವರು ಮೋದಿಯ ಹ#ತ್ಯೆಗೆ  ಸಜ್ಜಾಗಿ: ಕರೆ ನೀಡಿದ ಕಾಂಗ್ರೆಸ್ ನಾಯಕನ ವಿರುದ್ಧ F#IR

ದೇಶದ ಸಂವಿಧಾನ ರಕ್ಷಿಸಲು ಬಯಸುವವರು ಮೋದಿಯ ಹ#ತ್ಯೆಗೆ ಸಜ್ಜಾಗಿ: ಕರೆ ನೀಡಿದ ಕಾಂಗ್ರೆಸ್ ನಾಯಕನ ವಿರುದ್ಧ F#IR


ಭೂಪಾಲ್(Headlines Kannada): ದೇಶದ ಸಂವಿಧಾನ ರಕ್ಷಿಸಲು ಮತ್ತು ದಲಿತರು, ಅಲ್ಪಸಂಖ್ಯಾತರ ಭವಿಷ್ಯಕ್ಕಾಗಿ ಪ್ರಧಾನಿ ಮೋದಿ ಅವರ ಹ#ತ್ಯೆಗೆ  ಸಜ್ಜಾಗಿ ಎಂದು ಮಧ್ಯ ಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ವಿವಾ#ದಾತ್ಮಕ ಹೇಳಿಕೆ ನೀಡಿದ್ದಾರೆ.  

ಇಂಥ ವಿವಾದಾತ್ಮಕ ಹೇಳಿಕೆ ನೀಡಿರುವ ಮಾಜಿ ಸಚಿವ ರಾಜಾ ಪಟೇರಿಯಾ ವಿರುದ್ಧ  ಎಫ್# ಐಆರ್ ದಾಖಲಿಸಲು ರಾಜ್ಯ ಸರ್ಕಾರ ಆದೇಶಿಸಿದೆ. 'ಪ್ರಧಾನಿ ಮೋದಿ ಅವರನ್ನು ಹತ್ಯೆಗೈಯ್ಯಲು ರೆಡಿಯಾಗಿ ಎಂದು ಪಟೇರಿಯಾ, ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಿರುವ ಹೇಳಿಕೆಯೊಂದರ ವಿಡಿಯೋ ಸೋಮವಾರ ಬೆಳಗ್ಗೆ ಸಾಮಾಜಿಕ ತಾಣಗಳಲ್ಲಿ ಹರಿದಾಡಿದೆ.

ಮೋದಿ ಅವರು ಚುನಾವಣೆಗೆ ಅಂತ್ಯ ಕಾಣಿಸುತ್ತಾರೆ, ಧರ್ಮ, ಜಾತಿ ಮತ್ತು ಭಾಷೆ ಆಧಾರದ ಮೇಲೆ ದೇಶವನ್ನು ವಿಭಜಿಸುತ್ತಿದ್ದಾರೆ. ಇದರಿಂದಾಗಿ ದಲಿತರು, ಬುಡಕಟ್ಟು ಮತ್ತು ಅಲ್ಪಸಂಖ್ಯಾತರ ಭವಿಷ್ಯ ಅಪಾಯದಲ್ಲಿದೆ. ನೀವು ಸಂವಿಧಾನವನ್ನು ಉಳಿಸಲು ಬಯಸುವವರಾದರೆ ಮೋದಿ ಹ#ತ್ಯೆಗೆ ಸಿದ್ಧರಾಗಿ. ಮೋದಿ ಅವರನ್ನು ಸೋಲಿಸುವ ಭಾವನೆಯೊಂದಿಗೆ ಹ#ತ್ಯೆ ಮಾಡಿ ಎಂದು ಪಟೇರಿಯಾ ಪನ್ನಾ ಜಿಲ್ಲೆಯ ಪವೈಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಬೀದಿರುವ ಹೇಳಿಕೆ ಭಾರೀ ಸುದ್ದಿ ಮಾಡುತ್ತಿದೆ.

ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ದೇಶಾದ್ಯಂತ ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವವರ ವಾಸ್ತವ ಏನೆಂಬುದು ಮುನ್ನೆಲೆಗೆ ಬಂದಿದೆ. ಪಟೇರಿಯಾ ವಿರುದ್ಧ F#IR ದಾಖಲಿಸಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 

Ads on article

Advertise in articles 1

advertising articles 2

Advertise under the article