ಮೋ#ಸ ಮಾಡುವುದರಲ್ಲಿ BJP ನಂಬರ್ 1: ಬಿಜೆಪಿ ಬಿಟ್ಟು 'ಕೈ' ಹಿಡಿಯಲು ಮುಂದಾದ ಸಂದೇಶ್ ನಾಗರಾಜ್

ಮೋ#ಸ ಮಾಡುವುದರಲ್ಲಿ BJP ನಂಬರ್ 1: ಬಿಜೆಪಿ ಬಿಟ್ಟು 'ಕೈ' ಹಿಡಿಯಲು ಮುಂದಾದ ಸಂದೇಶ್ ನಾಗರಾಜ್ಮೈಸೂರು(Headlines Kannada): ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಮೈಸೂರು ಭಾಗದಲ್ಲಿ BJP ಮತ್ತೊಂದು ವಿಕೆಟ್ ಪತನವಾಗಿದ್ದು, ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಅವರು ಕಾಂಗ್ರೆಸ್ ಸೇರಲು ಸಿದ್ದರಾಗಿದ್ದಾರೆ. 

ನಾನು BJPಯಲ್ಲಿ ಸಕ್ರಿಯನಾಗಿಲ್ಲ, ಅಕ್ರಮವಾಗಿದ್ದೇನೆ. BJP ಅವರು ನನ್ನನ್ನು ಪಕ್ಷಕ್ಕೆ ಸೇರಿಸಿಕೊಂಡು ಅನ್ಯಾಯ ಮಾಡಿದರು ಎಂದು ಸ್ವಪಕ್ಷದ ವಿರುದ್ಧವೇ ಮಾಜಿ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಂದೇಶ್ ನಾಗರಾಜ್, BJPವರು ನನ್ನನ್ನು ಪಕ್ಷಕ್ಕೆ ಸೇರಿಸಿಕೊಂಡು ಅನ್ಯಾಯ ಮಾಡಿದರು. ಅ#ನ್ಯಾಯ ಮಾಡುವುದರಲ್ಲಿ BJP ಅವರು ನಿಸ್ಸೀಮರು. ಮೋ#ಸ ಮಾಡುವುದರಲ್ಲಿ BJP ಅವರು ನಂಬರ್ 1 ಎಂದು ವಾಗ್ದಾಳಿ ನಡೆಸಿದ್ದಾರೆ.

ನಾನಲ್ಲದೆ BJPಯಿಂದ 10ಕ್ಕಿಂತ ಹೆಚ್ಚು ಶಾಸಕರು ಕಾಂಗ್ರೆಸ್ ಗೆ ಬರುತ್ತಾರೆ ಎಂದು ಹೊಸ ಬಾಂಬ್ ಸಿಡಿಸಿದ ಅವರು, BJP ಸಹವಾಸ ನನಗೆ ಸಾಕು, ಎಚ್.ವಿಶ್ವನಾಥ್ ಗೆ ಅನ್ಯಾಯ ಮಾಡಿದರು. ನನಗೂ ಅನ್ಯಾಯ ಮಾಡಿದ್ದು, ನಾನು ಸಿದ್ದರಾಮಯ್ಯ ಅವರ ಜೊತೆ ಮಾತನಾಡಿದ್ದೇನೆ. ಡಿಕೆ ಶಿವಕುಮಾರ್ ಅವರ ಜೊತೆಯೂ ಮಾತಾಡುತ್ತೇನೆ ಎಂದು ಹೇಳಿದರು. 

Ads on article

Advertise in articles 1

advertising articles 2

Advertise under the article