ಬಳ್ಕೂರು ಗ್ರಾಮದಲ್ಲಿ ಚಲಿಸುತ್ತಿದ್ದ ಬೈಕ್ ಗೆ ಕ್ರೇನ್ ಡಿ#ಕ್ಕಿ: ಸಹಸವಾರ ಸ್ಥಳದಲ್ಲೇ ಮೃ#ತ್ಯು

ಬಳ್ಕೂರು ಗ್ರಾಮದಲ್ಲಿ ಚಲಿಸುತ್ತಿದ್ದ ಬೈಕ್ ಗೆ ಕ್ರೇನ್ ಡಿ#ಕ್ಕಿ: ಸಹಸವಾರ ಸ್ಥಳದಲ್ಲೇ ಮೃ#ತ್ಯುಕುಂದಾಪುರ (Headlines Kannada): ಚಲಿಸುತ್ತಿದ್ದ ಬೈಕ್ ಗೆ ಹಿಂಬದಿಯಿಂದ ಕ್ರೇನ್ ವೊಂದು ಡಿ#ಕ್ಕಿ ಹೊಡೆದ ಪರಿಣಾಮ ಸಹಸವಾರ ಸ್ಥಳದಲ್ಲೆ ಮೃ#ತಪಟ್ಟ ಘಟನೆ ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ಪಾನಕದಕಟ್ಟೆಯ ಶ್ರೀನಿವಾಸ  ಕಾಂಪ್ಲೆಕ್ಸ್‌ ಬಳಿ ಡಿ.26ರಂದು ಮಧ್ಯಾಹ್ನ 3.15ಕ್ಕೆ‌ ನಡೆದಿದೆ.

ಮೃ#ತನನ್ನು ಸ್ಥಳೀಯ ನಿವಾಸಿ ಪ್ರಶಾಂತ  ಮೊಗವೀರ ಎಂದು ಗುರುತಿಸಲಾಗಿದೆ. ಮೃತ ಪ್ರಶಾಂತ್ ಅವರು ದಿನೇಶ್ ಪೂಜಾರಿ ಎಂಬವರ ಬೈಕ್ ನ ಹಿಂಬದಿಯಲ್ಲಿ ಕುಳಿತುಕೊಂಡು ಕುಂದಾಪುರ ಕಡೆಯಿಂದ ಸಿದ್ದಾಪುರ ಕಡೆಗೆ ತೆರಳುತ್ತಿದ್ದರು. ಈ ವೇಳೆ ಅದೇ ದಿಕ್ಕಿನಲ್ಲಿ ಅಪರಿಚಿತ ಚಾಲಕನೋರ್ವ ನೋಂದಣಿ ಸಂಖ್ಯೆ ಇಲ್ಲದ ಹೊಸ ಕ್ರೇನ್ ಅನ್ನು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ  ಮಾಡಿಕೊಂಡು ಬಂದು, ಪ್ರಶಾಂತ್ ಸಹ ಸವಾರನಾಗಿ ಪ್ರಯಾಣಿಸುತ್ತಿದ್ದ ಬೈಕ್ ಗೆ ಹಿಂದಿನಿಂದ ಡಿ#ಕ್ಕಿ ಹೊಡೆದಿದ್ದಾನೆ. ಇದರ ಪರಿಣಾಮ ಬೈಕ್ ಸಮೇತ ಇಬ್ಬರು ಸವಾರರು ರಸ್ತೆ ಬಿದ್ದಿದ್ದು, ಗಂ#ಭೀರವಾಗಿ ಗಾಯಗೊಂಡ ಪ್ರಶಾಂತ್ ಸ್ಥಳದಲ್ಲೆ ಉ#ಸಿರು ಚೆ#ಲ್ಲಿದ್ದಾರೆ. ಸವಾರ ದಿನೇಶ್ ಪೂಜಾರಿ ಸಣ್ಣಪುಟ್ಟ ಗಾಯದೊಂದಿಗೆ ಪ್ರಾಣಾಯಾದಿಂದ ಪಾರಾಗಿದ್ದು, ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ರೇನ್ ಅನ್ನು ಸ್ಥಳದಲ್ಲೆ ನಿಲ್ಲಿಸಿದ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article