ತೋಟದಲ್ಲಿ ತೆಂಗಿನಕಾಯಿ ಹೆಕ್ಕಲೆಂದು ತೆರಳಿದ್ದ ವೃದ್ಧೆ ತೆರೆದ ಬಾ#ವಿಗೆ ಬಿದ್ದು ಮೃ#ತ್ಯು
Tuesday, December 27, 2022
ಕೋಟ(Headlines Kannada): ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಲೆಂದು ತೆರಳಿದ್ದ ವೃದ್ಧೆಯೋರ್ವರು ಆಕಸ್ಮಿಕವಾಗಿ ತೆರೆದ ಬಾವಿಗೆ ಬಿದ್ದು ಮೃ#ತಪಟ್ಟ ಘಟನೆ ಹಳ್ಳಾಡಿ-ಹರ್ಕಾಡಿ ಗ್ರಾಮದ ಗಾವಳಿಯ ಎಂಬಲ್ಲಿ ಸೋಮವಾರ ಬೆಳಿಗ್ಗೆ 11.15ಕ್ಕೆ ನಡೆದಿದೆ.
ಮೃ#ತರನ್ನು ಹಳ್ಳಾಡಿ-ಹರ್ಕಾಡಿ ಗ್ರಾಮದ ಗಾವಳಿಯ ನಿವಾಸಿ ಚಿಕ್ಕು ಎಂದು ಗುರುತಿಸಲಾಗಿದೆ. ಇವರು ನಿನ್ನೆ ಬೆಳಿಗ್ಗೆ 11.15ಕ್ಕೆ ಸುಮಾರಿಗೆ ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಲೆಂದು ಹೋಗಿದ್ದರು. ಈ ವೇಳೆ ಅಲ್ಲೆ ಪಕ್ಕದಲ್ಲಿ ಇದ್ದ ತೆರೆದ ಬಾವಿಗೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದಿದ್ದರು. ತಕ್ಷಣವೇ ಅವರನ್ನು ಬಿದ್ಕಲಕಟ್ಟೆಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಅಲ್ಲಿ ಪರೀಕ್ಷಿಸಿದ ವೈದ್ಯರು ಚಿಕ್ಕು ಅವರು ಅದಾಗಲೇ ಮೃ#ತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.