
ಹುಂಜ ಕೂಗುವುದರಿಂದ ಸಮಸ್ಯೆ ಆಗುತ್ತಿದೆ: ಪೊಲೀಸರಿಗೆ ದೂರು ನೀಡಿದ ನೆರೆಮನೆ ವ್ಯಕ್ತಿ
ಬೆಂಗಳೂರು: ನೆರೆ ಮನೆಯವರ ಹುಂಜ(ಕೋಳಿ) ಕೂಗುವುದರಿಂದ ರಾತ್ರಿಹೊತ್ತು ನಿದ್ದೆಗೆ ಸಮಸ್ಯೆ ಆಗುತ್ತಿದೆ ಎಂದು ಬೆಂಗಳೂರು ಪೊಲೀಸರಿಗೆ ವ್ಯಕ್ತಿಯೊಬ್ಬ ದೂರು ನೀಡಿದ್ದಾನೆ.
ನೆಮೊ ಹೆಸರಿನ ವ್ಯಕ್ತಿ ಟ್ವಿಟ್ಟರ್ ಖಾತೆ ಪೋಸ್ಟ್ ಹಾಕಿ ತಮಗಾಗುತ್ತಿರುವ ತೊಂದರೆಯನ್ನು ಮನೆಯ ವೀಡಿಯೋ ಜೊತೆಗೆ ತಮಗಾಗುತ್ತಿರುವ ಸಮಸ್ಯೆ ಕುರಿತು ಹೇಳಿಕೊಂಡಿದ್ದಾನೆ.
ನಮ್ಮ ನೆರೆ ಮನೆಯವರು ಹುಂಜಾ ಮತ್ತು ಬಾತುಕೋಳಿ ಸಾಕುತ್ತಿದ್ದಾರೆ. ಅವುಗಳು ಪ್ರತಿದಿನ ಕೂಗುವುದರಿಂದ ನಮಗೆ ತೊಂದರೆಯಾಗುತ್ತಿದೆ. ನಮ್ಮ ಮನೆಯಲ್ಲಿರುವ 2 ವರ್ಷದ ಮಗು ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಟ್ವಿಟ್ಟರ್ ಮೂಲಕ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಂಗಳೂರಿನ ಜೆಪಿ ನಗರ 8ನೇ ಹಂತದಲ್ಲಿನ ಮನೆಯೊಂದರಲ್ಲಿ ಕೋಳಿ ಹಾಗು ಬಾತುಕೋಳಿ ಸಾಕಾಣೆ ಮಾಡ್ತಾರೆ. ಬೆಳಗ್ಗೆ 3 ಗಂಟೆಗೆ ಕೋಳಿಗಳು ಒಟ್ಟಾಗಿ ಕೂಗುತ್ತವೆ. ಇದರಿಂದ ನಮ್ಮ 2 ವರ್ಷದ ಮಗ ನಿದ್ರೆಯಿಂದ ಎದ್ದುಬಿಡ್ತಾನೆ. ಕೋಳಿ ಕೂಗೋದರಿಂದ ನಮಗೂ ಸರಿಯಾಗಿ ನಿದ್ದೆ ಬರುತ್ತಿಲ್ಲ, ಅಕ್ಕಪಕ್ಕದವರಿಗೂ ನಿದ್ರೆ ಸಮಸ್ಯೆ ಎದುರಾಗಿದೆ. ಸಮಸ್ಯೆಗೆ ಸ್ಪಂದಿಸುವಂತೆ ಹಾಗು ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸರಿಗೆ ದೂರು ನೀಡಲಾಗಿದೆ.