ಅಬುದಾಭಿಯ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಉಡುಪಿ ಪುತ್ತಿಗೆ ಶ್ರೀ
Sunday, December 18, 2022
ದುಬೈ(Headlines Kannada): ಅಬುದಾಭಿಯಲ್ಲಿಂದು ಸರಕಾರದ ಕ್ಯಾಬಿನೇಟ್ ಸಚಿವ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅವರನ್ನು ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಸೌಹಾರ್ದ ಭೇಟಿ ಮಾಡಿ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಸಚಿವರಿಗೆ ಶ್ರೀಪಾದರು ತಮ್ಮ ಸಮಾಜಮುಖಿ ಯೋಜನೆಯಾದ ಕೋಟಿ ಗೀತಾ ಲೇಖನ ಯಜ್ಞದ ಬಗ್ಗೆ ವಿವರಿಸಿದರು. ಮಂತ್ರಿಗಳು ಶ್ರೀಗಳ ವಿಶ್ವಶಾಂತಿ ನಾಯಕತ್ವದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಶ್ರೀಗಳು ತಮ್ಮ ಮುಂಬರುವ ಶ್ರೀ ಕೃಷ್ಣ ಪೂಜಾ ಪರ್ಯಾಯಕ್ಕೆ ಪ್ರೀತಿಪೂರ್ವಕ ಆಹ್ವಾನಿಸಿದಾಗ ಮಂತ್ರಿಗಳು ಸಂತೋಷದಿಂದ ಒಪ್ಪಿಗೆ ಸೂಚಿಸಿದರು .