ಮಣಿಪಾಲದಲ್ಲಿ ನಡೆದ KHCCL-2022 ಕ್ರಿಕೆಟ್ ಲೀಗ್; ಮಣಿಪಾಲ ಟೆಕ್ನಾಲಜಿ ಲಿಮಿಟೆಡ್ ವಿನ್ನರ್ಸ್, ಉಡುಪಿ SP-11 ರನ್ನರ್ಸ್

ಮಣಿಪಾಲದಲ್ಲಿ ನಡೆದ KHCCL-2022 ಕ್ರಿಕೆಟ್ ಲೀಗ್; ಮಣಿಪಾಲ ಟೆಕ್ನಾಲಜಿ ಲಿಮಿಟೆಡ್ ವಿನ್ನರ್ಸ್, ಉಡುಪಿ SP-11 ರನ್ನರ್ಸ್



ಮಣಿಪಾಲ (Headlines Kannada): ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯು ಕಾರ್ಪೊರೇಟ್ ಕಂಪನಿ, ಬ್ಯಾಂಕ್ ಗಳು, ವೈದ್ಯಕೀಯ ಸಂಘ, ಆಸ್ಪತ್ರೆಗಳು ಮತ್ತು ಮಾಧ್ಯಮ ಮಿತ್ರರಿಗಾಗಿ 3 ದಿನಗಳ ಕಾಲ 'ಸೌಹಾರ್ದಯುತವಾಗಿ ಕಾರ್ಪೊರೇಟ್ ಕ್ರಿಕೆಟ್ ಲೀಗ್' (KHCCL-2022) ಆಯೋಜಿಸಿತ್ತು. 

ಇಂದು ನಡೆದ ಸಮಾರೂಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹಾಕೆ ಅಕ್ಷಯ್ ಮಚ್ಚೇಂದ್ರ ಅವರು ಪಾಲ್ಗೊಂಡಿದ್ದರು.

ಎಲ್ಲಾ ತಂಡಗಳು ಒಟ್ಟುಗೂಡಿ 1,20,000 ರೂ. ಮೊತ್ತವನ್ನು ಮಕ್ಕಳ ರಕ್ತ ಶಾಸ್ತ್ರ ಮತ್ತು  ಆಂಕೊಲಾಜಿ ವಿಭಾಗ ನಿಧಿಗೆ ದೇಣಿಗೆಯಾಗಿ ನೀಡಿದರು. ಈ ಉದಾತ್ತ ಕಾರ್ಯವು  ಹೆಚ್ಚು ಮೆಚ್ಚುಗೆ ಪಡೆದಿದೆ. ಚೆಕ್ ಅನ್ನು ಮಕ್ಕಳ ರಕ್ತ ಶಾಸ್ತ್ರ ಮತ್ತು  ಆಂಕೊಲಾಜಿ ವಿಭಾಗದ ಮುಖ್ಯಸ್ಥರಾದ  ಡಾ.ವಾಸುದೇವ ಭಟ್ ಅವರಿಗೆ ಹಸ್ತಾಂತರಿಸಲಾಯಿತು.  

KMC ಡೀನ್ ಡಾ.ಶರತ್ ಕೆ ರಾವ್ , ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ COO  ಡಾ ಆನಂದ್  ವೇಣುಗೋಪಾಲ್  ಮತ್ತು  ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ, ಡಾ ಕೀರ್ತಿನಾಥ್ ಬಲ್ಲಾಳ, ಸಚಿನ್ ಕಾರಂತ್ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಕಾರ್ಪೊರೇಟ್ ಕ್ರಿಕೆಟ್ ಲೀಗ್ (KHCCL-2022) ನಲ್ಲಿ  ಮಣಿಪಾಲ ಟೆಕ್ನಾಲಜಿ ಲಿಮಿಟೆಡ್ ಅವರು ವಿಜೇತರಾಗಿದ್ದು, ಉಡುಪಿ ಎಸ್ ಪಿ 11 ರನ್ನರ್ ಆಪ್ ಪ್ರಶಸ್ತಿ ಪಡೆದರು.  ಪ್ರಶಾಂತ್  ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಕಾರ್ತಿಕ್  ಅವರು ಉತ್ತಮ ದಾಂಡಿಗ ಮತ್ತು  ಸಿದ್ದೇಶ್  ಅವರು ಉತ್ತಮ  ದಾಳಿಗಾರ  ಪ್ರಶಸ್ತಿ ಪಡೆದರು.

Ads on article

Advertise in articles 1

advertising articles 2

Advertise under the article