ದುಬೈನಲ್ಲಿ ಉಡುಪಿ ಪುತ್ತಿಗೆ ಶ್ರೀಗಳಿಗೆ ಭವ್ಯ ಸ್ವಾಗತ: ಡಿ.23ರವರೆಗೆ ದುಬೈ, ಅಬುದಾಭಿಯಲ್ಲಿ ಸಂಚಾರ ನಡೆಸಲಿರುವ ಪುತ್ತಿಗೆ ಶ್ರೀ
Sunday, December 18, 2022
ದುಬೈ (Headlines Kannada): ದುಬೈ ಶ್ರೀ ರಾಘವೇಂದ್ರ ಸೇವಾ ಸಮಿತಿ ಸದಸ್ಯರಿಂದ ಭಾವಿ ಪರ್ಯಾಯ ಉಡುಪಿ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರನ್ನು ಭವ್ಯ ಸ್ವಾಗತದೊಂದಿಗೆ ದುಬೈಗೆ ಬರಮಾಡಿಕೊಳ್ಳಲಾಯಿತು.
ಈ ವೇಳೆ ಸಮಿತಿಯ ಸದಸ್ಯರು ಶ್ರೀಗಳಿಗೆ ಸಾಮೂಹಿಕ ಪಾದಪೂಜೆ, ತೊಟ್ಟಿಲುಪೂಜಾ ಸೇವೆ ನಡೆಸಿ, ಭವ್ಯ ಅಭಿನಂದನಾ ಕಾರ್ಯಕ್ರಮ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನಾಚಾರ್ಯ ಮತ್ತು ಅರ್ಚಕ ಶ್ರೀಪತಿ ಉಪಾಧ್ಯಾಯ ಅವರನ್ನು ಗೌರವಿಸಲಾಯಿತು.
ದುಬೈಯಲ್ಲಿ ನೂರಾರು ಮಂದಿಯನ್ನು ಭಗವದ್ಗೀತಾ ಪ್ರಚಾರಕ್ಕೆ ಪ್ರೇರೇಪಿಸಿದ ಸುರೇಶ್ ಅವರನ್ನು ಸನ್ಮಾನಿಸಲಾಯಿತು. ಸಂಯೋಜಕ ಹರಿಪ್ರಸಾದ್ ವಂದಿಸಿದರು. ಶ್ರೀಪಾದರು ದುಬೈ, ಅಬುದಾಭಿಯಲ್ಲಿ ಡಿಸೆಂಬರ್ 23 ರವರೆಗೆ ಸಂಚರಿಸಲಿದ್ದಾರೆ .