20 ವರ್ಷ ವಯಸ್ಸಿನ ತನ್ನ ವಿದ್ಯಾ#ರ್ಥಿನಿಯನ್ನೇ ಮದುವೆಯಾದ 50 ವಯಸ್ಸಿನ ಶಿಕ್ಷಕ!
Sunday, December 11, 2022
ಪಾಟ್ನಾ(Headlines Kannada): ಇಲ್ಲೊಬ್ಬ 50 ವರ್ಷ ವಯಸ್ಸಿನ ಇಂಗ್ಲಿಷ್ ಶಿಕ್ಷಕ ತನ್ನ 20 ವರ್ಷ ವಯಸ್ಸಿನ ತನ್ನ ವಿದ್ಯಾರ್ಥಿನಿಯನ್ನೇ ಮದುವೆಯಾಗಿ ಸುದ್ದಿಯಾಗಿದ್ದಾನೆ.
ಬಿಹಾರ್‌ನ ಸಮಸ್ತಿಪುರದಲ್ಲಿ ಈ ಘಟನೆ ನಡೆದಿದ್ದು, ಶ್ವೇತಾ ಕುಮಾರಿ ಎಂಬ ವಿದ್ಯಾರ್ಥಿನಿಯನ್ನು ಶಿಕ್ಷಕ ಸಂಗೀತ್ ಕುಮಾರ್ ಎಂಬಾತ ವರಿಸಿದ್ದಾನೆ . 20 ವರ್ಷದ ವಿದ್ಯಾರ್ಥಿನಿಯು ಇಂಗ್ಲಿಷ್ ಕಲಿಯುದಕ್ಕೆಂದು ಮನೆಯಿಂದ ಕೋಚಿಂಗ್ ಸೆಂಟರ್‌ಗೆ ಹೋಗುತ್ತಿದ್ದಳು. ಅಲ್ಲಿ 50 ವರ್ಷದ ಇಂಗ್ಲಿಷ್ ಶಿಕ್ಷಕನೊಂದಿಗೆ ವಿದ್ಯಾರ್ಥಿನಿಗೆ ಪ್ರೀತಿಗೆ ಬಿದ್ದಿದ್ದು, ಇಬ್ಬರೂ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.
ಸಮಸ್ತಿಪುರದ ದೇವಸ್ಥಾನವೊಂದರಲ್ಲಿ ಇಬ್ಬರೂ ವಿವಾಹವಾಗಿದ್ದು, ಮದುವೆಗೆ ಪರಿಚಯಸ್ಥರು ಸಾಕ್ಷಿಯಾಗಿದ್ದಾರೆ. ಇಬ್ಬರ ಮದುವೆಯ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿದಾಡುತ್ತಿದೆ. 50 ವರ್ಷದ ಇಂಗ್ಲಿಷ್ ಶಿಕ್ಷಕ ಸಂಗೀತ್ ಪತ್ನಿ ಕೆಲ ವರ್ಷಗಳ ಹಿಂದೆ ನಿಧ#ನರಾಗಿದ್ದು, ಆತ 2ನೇ ಮದುವೆ ಮಾಡಿಕೊಂಡಿರಲಿಲ್ಲ ಎನ್ನಲಾಗಿದೆ.