ನಾನು ಕಾಪಿ ಹೊಡೆದು ಪಾಸಾಗಿದ್ದು, ಗೂಂ#ಡಾಗಿರಿ ಮಾಡುತ್ತಿದ್ದೆ...14-15 ಬಾರಿ ಜೈ#ಲಿಗೂ ಹೋಗಿದ್ದೆ: ಶ್ರೀರಾಮುಲು

ನಾನು ಕಾಪಿ ಹೊಡೆದು ಪಾಸಾಗಿದ್ದು, ಗೂಂ#ಡಾಗಿರಿ ಮಾಡುತ್ತಿದ್ದೆ...14-15 ಬಾರಿ ಜೈ#ಲಿಗೂ ಹೋಗಿದ್ದೆ: ಶ್ರೀರಾಮುಲು



ಬಳ್ಳಾರಿ(Headlines Kannada):  ವಿದ್ಯಾರ್ಥಿಯಾಗಿದ್ದಾಗ ಲಾಸ್ಟ್ ಬೆಂಚ್ ವಿದ್ಯಾರ್ಥಿಗಾಗಿದ್ದು,  ಕಾಪಿ ಹೊಡೆದು ಪಾಸಾಗಿದ್ದೇನೆ. ಕಾಪಿ ಹೊಡೆಯುವುದರಲ್ಲಿ ನಾನು PHD ಮಾಡಿದ್ದೇನೆ. ಮೊದಲು ನಾನೂ ಗೂಂ#ಡಾಗಿರಿ ಮಾಡುತ್ತಿದ್ದೆ, ಬಹಳ ಜಗ#ಳವಾಡುತ್ತಿದ್ದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಎಸ್‌ಜಿ ಕಾಲೇಜಿನ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀರಾಮುಲು, ಬಡವರ ಪರ ನಿಂತು 14-15 ಬಾರಿ ಜೈಲಿಗೂ ಹೋಗಿದ್ದೆ ಎಂದರು.

ನನಗೆ ಶಾಲಾ ದಿನಗಳಲ್ಲಿ ಓದು ತಲೆಗೆ ಹತ್ತಲಿಲ್ಲ, ಆದರೆ ಸಂಸ್ಕಾರ ಮಾತ್ರ ನಾನು ಬಿಡಲಿಲ್ಲ. ನಾನೇನು ಬಾರಿ ಬುದ್ಧಿವಂತನಲ್ಲ, ಲಾಸ್ಟ್​ ಬೆಂಚ್ ವಿದ್ಯಾರ್ಥಿ.  5 ಬಾರಿ ಶಾಸಕ, 4 ಬಾರಿ ಸಚಿವನಾಗಿರುವುದಕ್ಕೆ ವಿವಿ ಸಂಘ ಕಾರಣ ಎಂದ ಅವರು, ನಾನು ಜೀನ್ಸ್​ಪ್ಯಾಂಟ್ ಹಾಕಿಕೊಂಡು ಹೋದರೆ ಹುಡುಗೀರೆಲ್ಲಾ ನನ್ನನ್ನೇ ನೋಡುತ್ತಿದ್ದರು ಎಂದರು. 

Ads on article

Advertise in articles 1

advertising articles 2

Advertise under the article