ಸಾ#ಮೂಹಿಕ ಅ#ತ್ಯಾ#ಚಾರದ 11 ಅ#ಪರಾಧಿಗಳ ಬಿಡುಗಡೆ; ಬಿಲ್ಕಿಸ್ ಬಾನು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ನವದೆಹಲಿ(Headlines Kannada): 2002ರ ಗುಜರಾತ್ ಗ#ಲಭೆಯ ವೇಳೆ ನಡೆದ ಸಾ#ಮೂಹಿಕ ಅ#ತ್ಯಾ#ಚಾರ ಪ್ರಕರಣದಲ್ಲಿ 11 ಅಪರಾಧಿಗಳನ್ನು ಗುಜರಾತ್ ಸರ್ಕಾರ ಬಿಡುಗಡೆ ಮಾಡಿರುವ ಕ್ರಮವನ್ನು ಪ್ರಶ್ನಿಸಿ ಸಂತ್ರಸ್ತೆ ಬಿಲ್ಕಿಸ್ ಬಾನು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ಸುಪ್ರೀಂಕೋರ್ಟ್ನಲ್ಲಿ ವಜಾಗೊಂಡಿದೆ.
2002ರ ಗುಜರಾತ್ ಗ#ಲಭೆಯಲ್ಲಿ ಸಾಮೂ#ಹಿಕ ಅ#ತ್ಯಾ#ಚಾರ ಮತ್ತು ಒಂದೇ ಕುಟುಂಬದ ಏಳು ಸದಸ್ಯರನ್ನು ಹ#ತ್ಯೆ ಮಾಡಿದ ಪ್ರಕರಣದಲ್ಲಿ 11 ಅಪರಾಧಿಗಳನ್ನು ಗುಜರಾತ್ ಸರ್ಕಾರ ಬಿಡುಗಡೆ ಮಾಡಿರುವ ಕ್ರಮಕ್ಕೆ ಆಕ್ರೋಶಗೊಂಡಿದ್ದ ಬಿಲ್ಕಿಸ್ ಬಾನು, ಇಅದರ ವಿರುದ್ಧ ಸುಪ್ರೀಂಕೋರ್ಟ್ಗೆ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ವಜಾಗೊಂಡಿದೆ.
2002ರಲ್ಲಿ ಗೋಧ್ರಾ ರೈಲು ದ#ಹನ ಘಟನೆಯ ನಂತರ ಭು#ಗಿಲೆದ್ದ ಗ#ಲ#ಭೆಯ ವೇಳೆ ಓಡಿಹೋಗುವಾಗ 21ರ ಹರೆಯದ ಬಿಲ್ಕಿಸ್ ಬಾನು ಆಗ 5 ತಿಂಗಳ ಗರ್ಭಿಣಿಯಾಗಿದ್ದರು. ಆಕೆಯ ಮೇಲೆ ಸಾಮೂಹಿಕ ಅ#ತ್ಯಾ#ಚಾರ ನಡೆದಿದ್ದು, ಅವರ ಕುಟುಂಬದ 7 ಮಂದಿಯನ್ನು ಹ#ತ್ಯೆ ಮಾಡಲಾಗಿತ್ತು. ಕೊ#ಲೆಯಾದ ಸದಸ್ಯರಲ್ಲಿ ಅವರ 3 ವರ್ಷದ ಮಗಳೂ ಸೇರಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲವು 11 ಅ#ಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಅಪರಾಧಿಗಳು 15 ವರ್ಷಗಳ ಜೈ#ಲುವಾಸದ ನಂತರ ಗುಜರಾತ್ ಸರ್ಕಾರವು ಅವರನ್ನು 11 ಅಪರಾಧಿಗಳನ್ನು ಬಿಡುಗಡೆ ಮಾಡಿತ್ತು.
ಈ ಬಗ್ಗೆ ಗುಜರಾತ್ ಸರ್ಕಾರ ತನ್ನ ಕ್ಷ#ಮಾದಾನ ನೀತಿಗೆ ಅನುಗುಣವಾಗಿ 11 ಅಪರಾಧಿಗಳಿಗೆ ವಿನಾಯಿತಿ ನೀಡಿದೆ ಎಂದು ಹೇಳಿದೆ. ಈ ವರ್ಷ ಆಗಸ್ಟ್ 15 ರಂದು ಈ 11 ಮಂದಿ ಅಪರಾಧಿಗಳು ಗೋಧ್ರಾ ಉಪ ಜೈ#ಲಿನಲ್ಲಿ 15 ವರ್ಷಗಳಿಗೂ ಹೆಚ್ಚು ಕಾಲ ಶಿಕ್ಷೆ ಅನುಭವಿಸಿದ ನಂತರ ಬಿಡುಗಡೆ ಮಾಡಲಾಗಿದೆ.
ಅಪರಾಧಿಗಳ ಅವಧಿಪೂರ್ವ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದ ಬಿಲ್ಕಿಸ್ ಬಾನು, ಇದನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿಯಲ್ಲಿ ಮೇ 13ರ ಆದೇಶವನ್ನು ಮರುಪರಿಶೀಲಿಸುವಂತೆ ಬಿಲ್ಕಿಸ್ ಬಾನು ಮನವಿ ಮಾಡಿದ್ದರು.