
2024ರ ಅಂತ್ಯದೊಳಗೆ ಭಾರತದ ರಸ್ತೆಗಳು ಅಮೆರಿಕಾದ ರಸ್ತೆಗಳಂತೆ ಆಗುತ್ತವೆ: ಕೇಂದ್ರ ಸಚಿವ ಗಡ್ಕರಿ
Saturday, December 17, 2022
ನವದೆಹಲಿ(Headlines Kannada): 2024ರ ಅಂತ್ಯದ ವೇಳೆಗೆ ಭಾರತದ ರಸ್ತೆಗಳು ಅಮೆರಿಕದ ರಸ್ತೆಗಳ ಗುಣಮಟ್ಟಕ್ಕೆ ಸಮನಾಗಿರುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಶುಕ್ರವಾರ ನಡೆದ 95ನೇ ಎಫ್‍ಐಸಿಸಿಐ ವಾರ್ಷಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ಭಾರತದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ರಸ್ತೆಯನ್ನು ಮಾಡುತ್ತಿದ್ದೇವೆ. 2024 ರೊಳಗೆ ನಮ್ಮ ರಸ್ತೆ ಮೂಲ ಸೌಕರ್ಯವು ಅಮೆರಿಕ, ಇಂಗ್ಲೆಂಡ್‍ಗೆ ಸಮನಾಗಿರುತ್ತದೆ ಎಂದು ಭರವಸೆ ನೀಡಿದರು.
ಪ್ರಸಕ್ತ ಸರಕು ವೆಚ್ಚವು ನಮ್ಮ ದೊಡ್ಡ ಸಮಸ್ಯೆಯಾಗಿದೆ. ಈಗ 14 ಪ್ರತಿಶತವಿದೆ. ಆದರೆ 2024ರ ಕೊನೆಯೊಳಗೆ 9 ಪ್ರತಿಶತಕ್ಕೆ ಇಳಿಕೆ ಮಾಡುತ್ತೇನೆ ಎಂದು ಗಡ್ಕರಿ ತಿಳಿಸಿದರು