
ಭಾರತವು ಹಿಂದೂ ರಾಷ್ಟ್ರೀಯವಾದಿ ರಾಷ್ಟ್ರವಾಗುವ ಅ#ಪಾಯವನ್ನು ಎದುರಿಸುತ್ತಿದೆ: ಆ್ಯಂಡಿ ಲೆವಿನ್
Saturday, December 17, 2022
ವಾಷಿಂಗ್ಟನ್(Headlines Kannada): ಭಾರತವು ಹಿಂದೂ ರಾಷ್ಟ್ರೀಯವಾದಿ ರಾಷ್ಟ್ರವಾಗುವ ಅ#ಪಾಯವನ್ನು ಎದುರಿಸುತ್ತಿದೆ ಎಂದು ಅಮೆರಿಕಾದ ಡೆಮಾಕ್ರೆಟ್ ಪಕ್ಷದ ನಿರ್ಗಮನ ಸಂಸದ ಆ್ಯಂಡಿ ಲೆವಿನ್ ಗಂಭೀರ ಆರೋಪ ಮಾಡಿದ್ದಾರೆ.
ಅಮೆರಿಕಾದ ಹೌಸ್ ಆಫ್ ರೆಪ್ರಸೆಂಟೇಟಿವ್ಸ್‌ನಲ್ಲಿ ತಮ್ಮ ಕೊನೆಯ ಭಾಷಣದಲ್ಲಿ ಮಾತನಾಡಿದ ಅವರು, ಭಾರತದಂತಹ ದೇಶಗಳಲ್ಲಿ ಮಾನವ ಹಕ್ಕುಗಳ ರಕ್ಷಣೆ ಪರ ನಿಂತು, ನಾನು ಎಂದಿಗೂ ಧ್ವನಿ ಎತ್ತುತ್ತೇನೆ. ಭಾರತವು ಜಾತ್ಯತೀತ ಪ್ರಜಾಪ್ರಭುತ್ವ ರಾಷ್ಟ್ರವಾಗುವ ಬದಲಿಗೆ ಹಿಂದೂ ರಾಷ್ಟ್ರೀಯವಾದ ದೇಶವಾಗುವ ಅ#ಪಾಯದಲ್ಲಿದೆ' ಎಂದು ಟೀಕಿಸಿದರು.
"ಭಾರತದಲ್ಲಿ ಜನ್ಮ ತಾಳಿರುವ ಹಿಂದೂ, ಜೈನ, ಬೌದ್ಧ ಧರ್ಮದ ಮತ್ತು ಇತರ ಧರ್ಮಗಳ ಅಭಿಮಾನಿಯಾಗಿರುವ ನಾನು, ನಾವು ಇಲ್ಲಿನ ಎಲ್ಲಾ ಜನರ - ಅಂದರೆ ಮುಸ್ಲಿಮರಾಗಿರಲಿ, ಹಿಂದುಗಳಾಗಿರಲಿ, ಬೌದ್ಧ, ಯಹೂದಿಗಳು, ಕ್ರೈಸ್ತರು ಅಥವಾ ಜೈನರಾಗಿರಲಿ, ಅವರ ಹಕ್ಕುಗಳನ್ನು ರಕ್ಷಿಸಬೇಕಿದೆ ಎಂದು ಹೇಳಿದರು.