ಮಂಗಳೂರು ಕು#ಕ್ಕರ್ ಬಾಂ#ಬ್ ಸ್ಫೋ#ಟ ಪ್ರಕರಣ; ಚಿಕಿತ್ಸೆಗಾಗಿ ಆರೋಪಿ ಶಾರಿಖ್ ಬೆಂಗಳೂರಿಗೆ

ಮಂಗಳೂರು ಕು#ಕ್ಕರ್ ಬಾಂ#ಬ್ ಸ್ಫೋ#ಟ ಪ್ರಕರಣ; ಚಿಕಿತ್ಸೆಗಾಗಿ ಆರೋಪಿ ಶಾರಿಖ್ ಬೆಂಗಳೂರಿಗೆಮಂಗಳೂರು(Headlines Kannada): ಮಂಗಳೂರಿನಲ್ಲಿ ನಡೆದ  ಕು#ಕ್ಕರ್ ಬಾಂ#ಬ್ ಸ್ಫೋ#ಟ ಪ್ರಕರಣದ ಆರೋಪಿ ಆರೋಪಿ ಮೊಹಮ್ಮದ್ ಶಾರಿಖ್ ನನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ.

ಸ್ಪೋ#ಟದಲ್ಲಿ ಗಾಯಗೊಂಡಿದ್ದ ಆರೋಪಿ ಶಾರಿಕ್ ಗೆ ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆಸ್ಪತ್ರೆ ವೈದ್ಯರ ಸಲಹೆಯಂತೆ ಆತನನ್ನು ಈಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಶನಿವಾರ ಬೆಳಗ್ಗೆ 6 ಗಂಟೆಗೆ ಬಿಗಿ ಭದ್ರತೆ ಮೂಲಕ ಆತನನ್ನು ಬೆಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಹೇಳಿದ್ದಾರೆ.

ನವೆಂಬರ್ 19 ರಂದು ಮಂಗಳೂರಿನ ಗರೋಡಿಯಲ್ಲಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಆರೋಪಿ ಶಾರಿಕ್ ಕೈಯಲ್ಲಿದ್ದ ಕು#ಕ್ಕರ್ ಬಾಂ#ಬ್ ಸ್ಫೋ#ಟಗೊಂಡಿತ್ತು. ಇದರಿಂದ ಗಾಯಗೊಂಡಿದ್ದ ಆರೋಪಿ ಶಾರಿಕ್ ಹಾಗು ರಿಕ್ಷಾ ಚಾಲಕ ಪುರುಷೋತ್ತಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪ್ರಕರಣವನ್ನು ಕೇಂದ್ರ ಸರ್ಕಾರ ಈಗಾಗಲೇ NIAಗೆ ಹಸ್ತಾಂತರಿಸಿದೆ.


Ads on article

Advertise in articles 1

advertising articles 2

Advertise under the article