ಮೈಸೂರಿನ ಕಡಕೋಳದಲ್ಲಿ ಸಂಭವಿಸಿದ್ದ ಮೋದಿ ಸಹೋದರನ ಕಾರು ಅ#ಪಘಾತ ಪ್ರಕರಣ; ಚಾಲಕನ ವಿರುದ್ಧವೇ ಪ್ರಕರಣ ದಾಖಲು

ಮೈಸೂರಿನ ಕಡಕೋಳದಲ್ಲಿ ಸಂಭವಿಸಿದ್ದ ಮೋದಿ ಸಹೋದರನ ಕಾರು ಅ#ಪಘಾತ ಪ್ರಕರಣ; ಚಾಲಕನ ವಿರುದ್ಧವೇ ಪ್ರಕರಣ ದಾಖಲು


ಮೈಸೂರು(Headlines Kannada): ಕೆಲವು ದಿನಗಳ ಹಿಂದೆ ಮೈಸೂರು ಜಿಲ್ಲೆಯ ಕಡಕೋಳ ಗ್ರಾಮದ ಬಳಿ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಮತ್ತು ಅವರ ಕುಟುಂಬ ಸದಸ್ಯರಿದ್ದ ಕಾರು ಅ#ಪಘಾತಕ್ಕೀಡಾಗಿದ್ದು, ಈ ಅ#ಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕಾರು ಚಾಲಕ ಎನ್. ಸತ್ಯನಾರಾಯಣ ಎಂಬುವವರ ವಿರುದ್ಧ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಸಂಬಂಧ ಬೆಂಗಾವಲು ಪಡೆಯ ಸಿಬ್ಬಂದಿ ಎಸ್. ಮಹದೇವ ಪೊಲೀಸ್  ಠಾಣೆಯಲ್ಲಿ ದಾಖಲಿಸಿದ್ದರು. ಆರೋಪಿ ಚಾಲಕನ ಅತಿವೇಗ ಹಾಗು ನಿರ್ಲಕ್ಷ್ಯದ ಚಾಲನೆಯೇ ಅ#ಪಘಾತಕ್ಕೆ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಡಿಸೆಂಬರ್ 27 ರಂದು ಮೈಸೂರು ಜಿಲ್ಲೆಯ ಕಡಕೋಳ ಗ್ರಾಮದ ಬಳಿ ಪ್ರಧಾನಿ ಮೋದಿಯವರ ಸಹೋದರ ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ಹಾಗು ಅವರ ಕುಟುಂಬ ಸದಸ್ಯರು ಪ್ರಯಾಣಿಸುತ್ತಿದ್ದ ವೇಳೆ ಕಾರು ಅ#ಪಘಾತಕ್ಕೀಡಾಗಿ ಗಾಯಗೊಂಡಿದ್ದರು.

ಪ್ರಹ್ಲಾದ್ ಮೋದಿ ಹಾಗು ಅವರ ಕುಟುಂಬ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಪ್ರವಾಸಿ ತಾಣ ಬಂಡೀಪುರ ಕಡೆಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿತ್ತು. ಅತೀ ವೇಗದಲ್ಲಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ರಸ್ತೆ ವಿಭಜಕಕ್ಕೆ ಡಿ#ಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯಲ್ಲಿ ಪ್ರಹ್ಲಾದ್ ಮೋದಿ(70 ), ಅವರ ಮಗ ಮೆಹುಲ್ ಪ್ರಹ್ಲಾದ್ ಮೋದಿ (40), ಸೊಸೆ ಜಿನಾಲ್ ಮೋದಿ ಹಾಗು  6 ವರ್ಷದ ಮೊಮ್ಮಗ ಮೆನತ್ ಮೆಹುಲ್ ಮೋದಿ ಗಾ#ಯಗೊಂಡಿದ್ದರು. ಈ ಅ#ಪಘಾತದ ವೇಳೆ ಆರೋಪಿ ಚಾಲಕ ಸತ್ಯನಾರಾಯಣ ಅವರಿಗೂ ಗಾಯಗಳಾಗಿವೆ.

Ads on article

Advertise in articles 1

advertising articles 2

Advertise under the article