ಕತಾರಿನಲ್ಲಿ ಬ್ರಹ್ಮಾವರ ಪಡುಕರೆ ನಿವಾಸಿಯೊಬ್ಬರು ಕು#ಸಿದುಬಿದ್ದು ಸಾ#ವು; ಊರಿಗೆ ಬರುವ ಸಿದ್ಧತೆಯಲ್ಲಿರುವಾಗಲೇ ನಡೆದ ಘಟನೆ !

ಕತಾರಿನಲ್ಲಿ ಬ್ರಹ್ಮಾವರ ಪಡುಕರೆ ನಿವಾಸಿಯೊಬ್ಬರು ಕು#ಸಿದುಬಿದ್ದು ಸಾ#ವು; ಊರಿಗೆ ಬರುವ ಸಿದ್ಧತೆಯಲ್ಲಿರುವಾಗಲೇ ನಡೆದ ಘಟನೆ !

ಬ್ರಹ್ಮಾವರ (Headlines Kannada): ಕತಾರಿನಲ್ಲಿ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಪಡುಕರೆ ನಿವಾಸಿಯೊಬ್ಬರು ಕು#ಸಿದುಬಿದ್ದು ಸಾ#ವನ್ನಪ್ಪಿರುವ ಘಟನೆ ನಡೆದಿದೆ.

ಮೃ#ತರನ್ನು ಕೋಟತಟ್ಟು ಪಡುಕರೆ ನಿವಾಸಿ ಮುಹಮ್ಮದ್ (45) ಎಂದು ಗುರ್ತಿಸಲಾಗಿದೆ. ಅವರ ಕತಾರಿನ ಸನಯ್ಯ ಪ್ರದೇಶದಲ್ಲಿ 14 ವರ್ಷಗಳಿಂದ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಅವರು, ಜ.2ರಂದು ಊರಿಗೆ ಬರಲು ಸಿದ್ಧತೆಯಲ್ಲಿದ್ದಾಗಲೇ ಸಾ#ವನ್ನಪ್ಪಿದ್ದಾರೆ.

ಕಳೆದ 4 ದಿನಗಳ ಹಿಂದೆ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಕು#ಸಿದು ಬಿದ್ದ ಮುಹಮ್ಮದ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಮೆದುಳು ನಿ#ಷ್ಕ್ರಿಯೆಗೊಂಡಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃ#ತಪಟ್ಟಿದ್ದಾರೆ.

ಮುಹಮ್ಮದ್ ಅವರು ಈ ಹಿಂದೆ ಕೋಟತಟ್ಟು ಪಡುಕರೆ ಹಿದಾಯತುಲ್ ಇಸ್ಲಾಂ ಮದ್ರಸದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಜೊತೆಗೆ KCF ಕತಾರ್ ರಾಷ್ಟ್ರೀಯ ಸಮಿತಿಯ ಅಝೀಝಿಯಾ ಝೋನ್ ಸನಯ್ಯಾ ಯುನಿಟ್ ಅಧ್ಯಕ್ಷರಾಗಿದ್ದರು. ಮೃ#ತರು ತಾಯಿ, ಪತ್ನಿ, ನಾಲ್ವರು ಸಹೋದರರು, ಇಬ್ಬರು ಸಹೋದರಿಯರು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.


Ads on article

Advertise in articles 1

advertising articles 2

Advertise under the article