ಹಿರಿಯಡಕದಲ್ಲಿ ಸೋಲಾರ್ ಪ್ಲೇಟ್‌ ಅಳವಡಿಸುವಾಗ ಎತ್ತರದಿಂದ ಕೆಳಗೆ ಬಿ#ದ್ದು ವ್ಯಕ್ತಿ ಸಾ#ವು

ಹಿರಿಯಡಕದಲ್ಲಿ ಸೋಲಾರ್ ಪ್ಲೇಟ್‌ ಅಳವಡಿಸುವಾಗ ಎತ್ತರದಿಂದ ಕೆಳಗೆ ಬಿ#ದ್ದು ವ್ಯಕ್ತಿ ಸಾ#ವು



ಹಿರಿಯಡ್ಕ (Headlines Kannada): ಸೋಲಾರ್ ಪ್ಲೇಟ್ ಅಳವಡಿಸುತ್ತಿದ್ದ ಆ#ಕಸ್ಮಿಕವಾಗಿ ಆಯತಪ್ಪಿ 30 ಅಡಿ ಎತ್ತರದಿಂದ ಕೆಳಗೆ ಬಿ#ದ್ದು ವ್ಯಕ್ತಿಯೊಬ್ಬರು ಮೃ#ತಪಟ್ಟ ಘಟನೆ ಹಿರಿಯಡಕ ಠಾಣಾ ವ್ಯಾಪ್ತಿಯಲ್ಲಿ ಡಿ.27ರಂದು ನಡೆದಿದೆ.

ಮೃ#ತರನ್ನು ರವೀಂದ್ರ ಎಂದು ಗುರುತಿಸಲಾಗಿದೆ. ಇವರು ನಿನ್ನೆ ಮೆಸಿಲಿ ಇಂಡಿಯಾ ಪ್ಯಾಕೆಜಿಂಗ್ ಕಂಪೆನಿಯಲ್ಲಿ ಸೋಲಾರ್ ಪ್ಲೇಟ್‌ಗಳನ್ನು ಅಳವಡಿಸುವ ಕೆಲಸಕ್ಕೆ ಹೋಗಿದ್ದರು. ಅಲ್ಲಿ ಟೆಕ್ನಿಶಿಯನ್ ಗಳಿಗೆ ರವೀಂದ್ರ ಅವರು ತಲೆ ಮೇಲೆ ಸೋಲಾರ್ ಪ್ಲೇಟ್‌ಗಳನ್ನು ಹೊತ್ತುಕೊಂಡು ಹೋಗಿ ಕೊಡುತ್ತಿದ್ದರು. ಸೋಲಾರ್ ಪ್ಲೇಟ್‌ಗಳನ್ನು ತಲೆ ಮೇಲೆ ಹೊತ್ತುಕೊಂಡು ಸಿಮೆಂಟ್ ಸೀಟಿನ ಮಾಡಿನ ಮೇಲೆ ನಡೆದುಕೊಂಡು ಹೋಗುವಾಗ ಮ#ಧ್ಯದಲ್ಲಿದ್ದ ಫೈಬರ್ ಸೀಟಿನ ಮೇಲೆ ಕಾಲು ಹಾಕಿದ ಪರಿಣಾಮ ಅದು ತುಂ#ಡಾಗಿ ರವೀಂದ್ರ ಅವರು ಸುಮಾರು 30 ಅಡಿ ಎತ್ತರದಿಂದ ಕೆಳಗೆ ಬಿದ್ದು, ಗಂ#ಭೀರವಾಗಿ ಗಾ#ಯಗೊಂಡಿದ್ದರು. 

ತಕ್ಷಣವೇ ಅವರನ್ನು ಮಣಿಪಾಲದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ಅಲ್ಲಿ ಪರೀಕ್ಷಿಸಿ ವೈದ್ಯರು ರವೀಂದ್ರ ಅವರು ಅದಾಗಲೇ ಮೃ#ತಪಟ್ಟಿರುವುದಾಗಿ ತಿಳಿಸಿದ್ದಾರೆ. ಕೆಲಸ ನಡೆಯುವ ಸ್ಥಳದಲ್ಲಿದ್ದ ಗುತ್ತಿಗೆದಾರಾದ ಯೋಗೀಶ್ ಆಚಾರ್ಯ ಹಾಗೂ ಶರತ್ ಎಂಬವರು ಸರಿಯಾದ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ನಿರ್ಲಕ್ಷತನದಿಂದ ಕೆಲಸ ಮಾಡಿಸಿರುವುದೇ ಈ ಅ#ವಘಡಕ್ಕೆ ಕಾರಣವೆಂದು ದೇವಪ್ಪ ಎಂಬವರು ನೀಡಿದ ದೂರಿನಂತೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article