ಕುಕ್ಕಿಕಟ್ಟೆ ಮುಚ್ಲುಗೋಡು ದೇವಸ್ಥಾನದಲ್ಲಿ ಸಹಸ್ರ ಕದಳಿ ಯಾಗ ಸಂಪನ್ನ
Wednesday, December 28, 2022
ಉಡುಪಿ (Headlines Kannada): ಕಿರಿ ಷಷ್ಠಿ ಪ್ರಯುಕ್ತ ಕುಕ್ಕಿಕಟ್ಟೆ ಮುಚ್ಲುಗೋಡು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ಸಹಸ್ರ ಕದಳಿ ಯಾಗ ವಿಜೃಂಭಣೆಯಿಂದ ನಡೆಯಿತು.
ನೂರಾರು ಸಂಖ್ಯೆಯಲ್ಲಿ ಬಾಳೆ ಗೊನೆಯನ್ನು ದೇವರಿಗೆ ಸಮರ್ಪಿಸಲಾಯಿತು. ಭಕ್ತರು ಹರಕೆಯ ರೂಪದಲ್ಲಿ ಬಾಳೆಗೊನೆ ಅರ್ಪಿಸಿ, ಯಾಗದಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.
ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಉರುಳು ಸೇವೆ, ತುಲಾಭಾರ ಸೇವೆ ಸಹಿತ ವಿವಿಧ ಸೇವೆಗಳು ಜರುಗಿದವು. ನೂರಾರು ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದು ಪುಣಿತರಾದರು.