ದುಬೈಯಲ್ಲಿ ಸಾ#ವನ್ನಪ್ಪಿದ  ಕನ್ನಡಿಗನ ಮೃ#ತ ದೇ#ಹ ಕನ್ನಡ ಸಂಘದ ಸಹಾಯದಿಂದ ತಾಯಿನಾಡಿಗೆ ರವಾನೆ

ದುಬೈಯಲ್ಲಿ ಸಾ#ವನ್ನಪ್ಪಿದ ಕನ್ನಡಿಗನ ಮೃ#ತ ದೇ#ಹ ಕನ್ನಡ ಸಂಘದ ಸಹಾಯದಿಂದ ತಾಯಿನಾಡಿಗೆ ರವಾನೆ

ದುಬೈ (Headlines Kannada): ಬಿಜಾಪುರದ ಅಬ್ರಾರ್ ಉಮರಾಣಿ ಬಂದೇನವಾಜ್ ಎಂಬವರು ಡಿಸೆಂಬರ್  17ರಂದು  ದುಬೈಯಲ್ಲಿ ಅಕಾಲಿಕ ಮ#ರಣ  ಹೊಂದಿದ್ದು, ಅವರ ಮೃ#ತ ಶರೀರವನ್ನು ಅವರು ಕೆಲಸ ಮಾಡುತ್ತಿದ್ದ ಸಂಸ್ಥೆ ಮತ್ತು ಅನಿವಾಸಿ ಕನ್ನಡಿಗರ ಸಹಾಯದಿಂದ ತಮ್ಮ ಹುಟ್ಟೂರಾದ  ಬಿಜಾಪುರಕ್ಕೆ ಕಳುಹಿಸಿಕೊಡಲಾಯಿತು. 

ಅಬ್ರಾರ್ ಅವರು ಕಳೆದ ಕೆಲವು ವರ್ಷಗಳಿಂದ ಟೆಕ್ನಿಷಿಯನ್ ಆಗಿ ಖಾಸಗಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೃ#ತ ದೇ#ಹವನ್ನು ತಾಯಿನಾಡಿಗೆ ಕಳುಹಿಸಲು ಹೆಮ್ಮೆಯ ದುಬೈ ಕನ್ನಡ ಸಂಘದ ಸಹಾಯ ಹಸ್ತ ವಿಭಾಗದ ಮುಖ್ಯ ಸಂಚಾಲಕರಾದ ರಫೀಕಲಿ ಕೊಡಗು ಅವರೊಂದಿಗೆ ಅಬ್ರಾರ್ ಅವರ ಊರಿನವರಾದ ಶಂಕರ್ ಬಿರಾದರ್ ಬಿಜಾಪುರ ಮತ್ತು ರಫೀಕ್ ಬಿಜಾಪುರ ಅವರು ಮೃ#ತ ದೇ#ಹವನ್ನು ತಾಯಿನಾಡಿಗೆ ಕಳಿಸಲು  ಬೇಕಾದ ಎಲ್ಲಾ ದಾಖಲೆಗಳ ಕಾರ್ಯ ಮಾಡಿ ಬಹಳ  ಶ್ರಮ ವಹಿಸಿದ್ದರು. ಹಾಗೆ ಮ#ರಣ ಹೊಂದಿದ ಸುದ್ದಿಯನ್ನು ದುಬೈ ಕನ್ನಡ ಸಂಘಕ್ಕೆ ಬಸವ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ಲಿಂಗದಳ್ಳಿ ಅವರು ತಿಳಿಸಿ ಬೇಕಾದ ಕಾರ್ಯಗಳನ್ನು ಮಾಡಲು ಸೂಚನೆ ನೀಡಿ ಸಹಕಾರ ಕೋರಿದ್ದರು.

Ads on article

Advertise in articles 1

advertising articles 2

Advertise under the article