ರಾಹುಲ್ ಗಾಂಧಿ ರಾಮನಲ್ಲದಿದ್ದರೂ, ಬಿಜೆಪಿ ರಾವಣನ ಹಾದಿಯಲ್ಲಿ ಸಾಗುತ್ತಿದೆ: ಬಿಜೆಪಿ ವಿರುದ್ಧ ಕಿ#ಡಿಕಾರಿದ ಸಲ್ಮಾನ್ ಖುರ್ಷಿದ್
Wednesday, December 28, 2022
ನವದೆಹಲಿ: ರಾಹುಲ್ ಗಾಂಧಿ ರಾಮನಲ್ಲನಾಗಿರಬಹುದು, ಆದರೆ ಬಿಜೆಪಿ ರಾವಣನ ಹಾದಿಯಲ್ಲಿ ಸಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಕಿ#ಡಿಕಾರಿದ್ದಾರೆ.
“ರಾಹುಲ್ ಗಾಂಧಿ ಭಗವಾನ್ ರಾಮ ಅಲ್ಲ ಆಗಿರಬಹುದು, ಆದರೆ ಅವರು ಭಗವಾನ್ ರಾಮ ತೋರಿಸಿದ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ರಾಹುಲ್ ಗಾಂಧಿಗೆ ರಾಮನ ಹಾದಿಯಲ್ಲಿ ನಡೆಯುವ ಹಕ್ಕಿಲ್ಲ ಎಂದು BJP ಹೇಳುತ್ತಿದ್ದಾರೆ. BJP ರಾಮನ ಬದಲು ರಾವಣನ ಮಾರ್ಗವನ್ನು ಅನುಸರಿಸುತ್ತಿದ್ದಾರೆ ಎಂಬುದಕ್ಕೆ ನಮ್ಮ ಆಕ್ಷೇಪವಿದೆ ಎಂದು ಸಲ್ಮಾನ್ ಖುರ್ಷಿದ್ ಟೀಕಿಸಿದ್ದಾರೆ.
ಸೋಮವಾರ ಸಲ್ಮಾನ್ ಖುರ್ಷಿದ್ ಅವರು ರಾಹುಲ್ ಗಾಂಧಿಯನ್ನು ರಾಮನಿಗೆ ಹೋಲಿಸಿದ್ದರು. ಇದಕ್ಕೆ BJP ನಾಯಕರಿಂದ ತೀ#ಕ್ಷ್ಣವಾದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಗಾಂಧಿ ಕುಟುಂಬದ ಮನವೊಲಿಸಲು ಕಾಂಗ್ರೆಸ್ ನಾಯಕರು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು BJP ನಾಯಕರು ಟೀಕಿಸಿದ್ದರು.