ಪೆರ್ಡೂರು: ಕಂ#ಠಪೂರ್ತಿ ಕು#ಡಿದು ಶಾಲೆಯ ಜಗಲಿಯಲ್ಲಿ ಮ#ಲಗಿದ ಮುಖ್ಯ ಶಿಕ್ಷಕ: ಶಿಕ್ಷಕನ ಅ#ಮಾನತಿಗೆ ಗ್ರಾಮಸ್ಥರ ಆಗ್ರಹ
Wednesday, December 28, 2022
ಉಡುಪಿ (Headlines Kannada): ಮುಖ್ಯ ಶಿಕ್ಷಕನೋರ್ವ ಬೆಳ್ಳಂಬೆಳಿಗ್ಗೆಯೇ ಕಂ#ಠಪೂರ್ತಿ ಕು#ಡಿದು ತೂ#ರಾಡಿಕೊಂಡು ಬಂದು ಶಾಲಾ ಜಗಲಿಯಲ್ಲೆ ಮಲಗಿದ ಘಟನೆ ಪೆರ್ಡೂರು ಅಲಂಗಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಕೃಷ್ಣಮೂರ್ತಿ ಎಂಬಾತ ಕಂ#ಠಪೂರ್ತಿ ಕು#ಡಿದು ಜಗಲಿಯಲ್ಲಿ ಮಲಗಿದ ಮುಖ್ಯ ಶಿಕ್ಷಕ. ಮಕ್ಕಳ ಭವಿಷ್ಯ ರೂಪಿಸಬೇಕಾದ ಶಿಕ್ಷಕನೋರ್ವ ಈ ರೀತಿ ಕಂ#ಠಪೂರ್ತಿ ಕು#ಡಿದು ಶಾಲೆಯಲ್ಲಿ ಮಲಗಿದ್ದು ವಿಪರ್ಯಾಸವೇ ಸರಿ. ಈತ ಬೆಳಿಗ್ಗೆಯೇ ಈ ರೀತಿ ಮ#ದ್ಯಪಾನ ಮಾಡಿದರೆ, ಇನ್ನೂ ಮಕ್ಕಳಿಗೆ ಏನೂ ಪಾಠ ಮಾಡುತ್ತಾನೆ ಎನ್ನುವುದು ಪೋಷಕರ ಆತಂಕವಾಗಿದೆ.
ಶಿಕ್ಷಕನನ್ನು ಕೂಡಲೇ ಅ#ಮಾನತು ಮಾಡುವಂತೆ ಪೆರ್ಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವು ಪೂಜಾರಿ, ಉಪಾಧ್ಯಕ್ಷೆ ಚೇತನಾ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ ತುಕಾರಾಮ ನಾಯಕ್, ರಮೇಶ್ ಪೂಜಾರಿ, ಶಾಲಾಭಿವೃದ್ಧಿ ಸಮಿತಿ, ಬೈದ ಫ್ರೆಂಡ್ಸ್ ನ ಸತೀಶ್, ಗ್ರಾಮಸ್ಥರು ಆಗ್ರಹಿಸಿದ್ದಾರೆ.