ಮತ್ತೆ ಆ#ತಂಕ ಹುಟ್ಟಿಸಿದ ಕೊರೊನಾ; ವಿದೇಶದಿಂದ ಬರುವವರಿಗೆ RT-PCR ಪರೀಕ್ಷೆ ಕಡ್ಡಾಯ: ಅರೋಗ್ಯ ಸಚಿವ ಮಾಂಡವೀಯ

ಮತ್ತೆ ಆ#ತಂಕ ಹುಟ್ಟಿಸಿದ ಕೊರೊನಾ; ವಿದೇಶದಿಂದ ಬರುವವರಿಗೆ RT-PCR ಪರೀಕ್ಷೆ ಕಡ್ಡಾಯ: ಅರೋಗ್ಯ ಸಚಿವ ಮಾಂಡವೀಯ




ನವದೆಹಲಿ(Headlines Kannada): ಚೀನಾ ಸೇರಿದಂತೆ ಇತರ ದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಕಾರಣ ಭಾರತದಲ್ಲೂ ಕಟ್ಟುನಿಟ್ಟಿನ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ವಿದೇಶದಿಂದ ಬರುವವರಿಗೆ ಕಡ್ಡಾಯವಾಗಿ RT-PCR ಪರೀಕ್ಷೆ ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಸ್ಪಷ್ಟಪಡಿಸಿದ್ದಾರೆ.  

ಜಗತ್ತಿನಲ್ಲಿ ಪ್ರತಿದಿನ ಒಟ್ಟಾರೆ 5 ಲಕ್ಷ ಕೊರೊನಾ ಕೇಸ್​​ಗಳು ಪತ್ತೆಯಾಗುತ್ತಿದೆ, ಜಪಾನ್​, ಅಮೆರಿಕ, ಫ್ರಾನ್ಸ್​, ಚೀನಾದಲ್ಲಿ ಕೊರೊನಾ ಆರ್ಭಟ ಮತ್ತೆ ಮುಂದುವರಿದಿದೆ. ಭಾರತ ಈ ಹಿಂದೆ ಕೊರೊನಾವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದೇವೆ, ಕೊರೊನಾ‌ ವಿರುದ್ಧ ಹೋರಾಡಲು ರಾಜ್ಯಗಳಿಗೆ ಕೇಂದ್ರದಿಂದ ಎಲ್ಲ ರೀತಿಯ ನೆರವು ನೀಡಲಾಗಿದೆ ಎಂದರು.

ಕೊರೋನಾ ರೂಪಾಂತರಿ ತಳಿಯನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ, ದೇಶದಲ್ಲಿ 220 ಕೋಟಿ ಡೋಸ್ ಕೊರೊನಾ ವ್ಯಾಕ್ಸಿನ್ ಈಗಾಗಲೇ ನೀಡಲಾಗಿದೆ, ಕೊರೊನಾ ನಿರ್ವಹಣೆ ಮಾಡಲು ಸರ್ಕಾರ ಸದಾ ಸಿದ್ಧವಿದೆ. ಹೊಸ ಕೇಸ್​​ಗಳ ರೂಪಾಂತರ ಪತ್ತೆ ಹಚ್ಚಲು ಸೂಚನೆ ನೀಡಲಾಗಿದ್ದು, ಬೂಸ್ಟರ್ ಡೋಸ್ ನೀಡಲು ಎಲ್ಲಾ ರಾಜ್ಯಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಮನ್ಸುಖ್ ಮಾಂಡವೀಯ ಹೇಳಿದರು.

ಇನ್ನು ಮುಂದೆ ವಿದೇಶದಿಂದ ಬರುವ ಪ್ರಯಾಣಿಕರಿಗೆ ಸೂಕ್ತ ಪರೀಕ್ಷೆ ನಡೆಸಲಾಗುವುದು, ಹೊಸ ವರ್ಷ ಆಚರಣೆ, ಹಬ್ಬದ ದಿನಗಳಲ್ಲಿ ಮಾರ್ಗಸೂಚಿ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್, ಸ್ಯಾನಿಟೈಸರ್ ಬಳಕೆ ಮುಂದುವರಿಸಬೇಕು, ವಿದೇಶದಿಂದ ಬರುವ ಪ್ರಯಾಣಿಕರಿಗೆ RT-PCR ಪರೀಕ್ಷೆ ಪ್ರಾರಂಭಿಸಿದ್ದೇವೆ ಎಂದು ಅವರು ಹೇಳಿದರು. 

Ads on article

Advertise in articles 1

advertising articles 2

Advertise under the article