ತನ್ನ ಮಗಳ ಹುಟ್ಟುಹಬ್ಬ ಆಚರಿಸಲು ಸುವರ್ಣ ವಿಧಾನಸೌಧ ಬಾಡಿಗೆಗೆ ನೀಡುವಂತೆ ಸಭಾಪತಿಗೆ ಪತ್ರ ಬರೆದ ವಕೀಲ

ತನ್ನ ಮಗಳ ಹುಟ್ಟುಹಬ್ಬ ಆಚರಿಸಲು ಸುವರ್ಣ ವಿಧಾನಸೌಧ ಬಾಡಿಗೆಗೆ ನೀಡುವಂತೆ ಸಭಾಪತಿಗೆ ಪತ್ರ ಬರೆದ ವಕೀಲ



ಬೆಳಗಾವಿ(Headlines Kannada): ಕರ್ನಾಟಕ ಸುವರ್ಣ ವಿಧಾನಸೌಧದ ಕಲಾಪದ ಸಭಾ ಭವನ ತನ್ನ ಮಗಳ ಬರ್ತ್‌ಡೇ ಆಚರಣೆಗಾಗಿ ಬಾಡಿಗೆ ನೀಡುವಂತೆ ಕೋರಿ ವಿಧಾನ ಪರಿಷತ್‌ ಸಭಾಪತಿಗೆ ವಕೀಲರೊಬ್ಬರು ಮನವಿ ಪತ್ರ ಸಲ್ಲಿಸಿದ್ದಾರೆ. 

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಡಿಗವಾಡ ಗ್ರಾಮದ ವಕೀಲ ಮಲ್ಲಿಕಾರ್ಜುನ ದುಂಡಪ್ಪ ಚೌಕಾಶಿ ಹೆಸರಿನ ವ್ಯಕ್ತಿ ಸುವರ್ಣ ಸೌಧ ಬಾಡಿಗೆಗೆ ನೀಡುವಂತೆ ಸಭಾಪತಿಗೆ ಮನವಿ ಮಾಡಿದ್ದಾರೆ.

ಬೆಳಗಾವಿಯ ಸುವರ್ಣ ವಿಧಾನಸೌಧ ವರ್ಷದಲ್ಲಿ 15 ದಿನ ಕಲರವದಿಂದ ಕೂಡಿ ಉಳಿದ ದಿನ ಭೂ#ತ ಬಂಗ್ಲೆಯಂತಿರುವ ಕರ್ನಾಟಕ ಸುವರ್ಣ ವಿಧಾನಸೌಧದ ಸಭಾಂಗಣವನ್ನು ಬಾಡಿಗೆ ನೀಡಿ. ಖಾಲಿ ಸಮಯದಲ್ಲಿ ನನ್ನ 5 ವರ್ಷದ ಮಗಳ ಹುಟ್ಟು ಹಬ್ಬಕ್ಕೆ ಸುವರ್ಣಸೌಧ ಬಾಡಿಗೆ ಕೊಡಿ ಎಂದು ವಕೀಲರು ಪತ್ರ ಬರೆದಿದ್ದಾರೆ.

ನನ್ನ ಏಕೈಕ ಪುತ್ರಿಯಾದ ಮಣಿಶ್ರೀಗೆ ಜನವರಿ 30ಕ್ಕೆ 5 ವರ್ಷ ಮುಗಿದು 6ನೇ ವರ್ಷಕ್ಕೆ ಕಾಲಿಡುತ್ತಿದ್ದು, ಅವಳು 1ನೇ ತರಗತಿಯ ಪ್ರವೇಶ ಪಡೆಯಬೇಕಿದೆ. ಇದು ಅವಳ ಜೀವನದ ಅಮೂಲ್ಯ ಕ್ಷಣವಾಗಿರುವುದರಿಂದ ಅವಳ ಹುಟ್ಟುಹಬ್ಬವನ್ನು ಆಚರಿಸುವುದರೊಂದಿಗೆ ನಮ್ಮ ಭಾಗದಲ್ಲಿ ಚಿಕ್ಕ ಹೆಣ್ಣುಮಕ್ಕಳಿಗೆ ಹುಟ್ಟದಬ್ಬ ಮಾಡುವ ಪದ್ಧತಿ ಇದೆ. ಇದು ಕೂಡ ಜೀವನದಲ್ಲಿ ಒಮ್ಮೆ ಬರುವಂತಹದ್ದಾಗಿರುವುದರಿಂದ ಸುವರ್ಣ ವಿಧಾನಸೌಧ ಸಭಾಂಗಣವನ್ನು ಬಾಡಿಗೆ ನೀಡಬೇಕು ಎಂದು ವಿನಂತಿಸಿದ್ದಾರೆ.

ಸರಕಾರದ ಖರ್ಚು ಸರಿ ಹೊಂದಿಸಲು ಬಾಡಿಗೆ ಕೊಟ್ಟರೆ ಒಳ್ಳೆಯದು. ಈ ರೀತಿ ಕಾರ್ಯಕ್ರಮಗಳಿಗೆ ಬಾಡಿಗೆ ನೀಡುವುದರಿಂದ ಸರ್ಕಾರಕ್ಕೆ ಹೊರೆಯಾಗುತ್ತಿರುವ ಆರ್ಥಿಕ ನಿರ್ವಹಣಾ ವೆಚ್ಚವನ್ನು ಉಳಿಸಬಹುದಾಗಿದೆ. ಸದ್ಯಕ್ಕೆ ಅಧಿವೇಶನ ನಡೆಯುತ್ತಿದ್ದು, ಸದನದಲ್ಲಿ ಈ ವಿಷಯವನ್ನು ಚರ್ಚಿಸಿ ಬಾಡಿಗೆ ನೀಡಬೇಕು ಎಂದು ಪತ್ರದಲ್ಲಿ ವಕೀಲರು ಉಲ್ಲೇಖಿಸಿದ್ದಾರೆ.

Ads on article

Advertise in articles 1

advertising articles 2

Advertise under the article