ಶ್ರದ್ಧಾ ವಾಲ್ಕರ್ ಕೊ#ಲೆ ಪ್ರಕರಣ; ಜಾಮೀನು ಅರ್ಜಿ ಹಿಂಪಡೆದ ಆರೋಪಿ ಅಫ್ತಾಬ್
ನವದೆಹಲಿ(Headlines Kannada): ಶ್ರದ್ಧಾ ವಾಲ್ಕರ್ ಕೊ#ಲೆ ಆರೋಪಿ ಅಫ್ತಾಬ್ ಪೂನಾವಾಲಾ ನ್ಯಾಯಾಲದಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹಿಂಪಡೆದಿದ್ದಾನೆ.
ನ್ಯಾಯಾಲಕ್ಕೆ ಸಲ್ಲಿಸಲಾಗಿದ್ದ ಅರ್ಜಿಯನ್ನು ತಪ್ಪಾಗಿ ಸಲ್ಲಿಸಲಾಗಿತ್ತು ಎಂಬ ಕಾರಣ ನೀಡಿ ಹಿಂಪಡೆದಿದ್ದಾನೆ. ಡಿಸೆಂಬರ್ 17 ರಂದು ತಾನು ವಕಾಲತ್ಗೆ ಸಹಿ ಹಾಕಿದ್ದೆ, ಆದರೆ, ಜಾಮೀನು ಅರ್ಜಿ ಸಲ್ಲಿಸುವ ಬಗ್ಗೆ ತಿಳಿದಿಲ್ಲ ಎಂದು ಅಫ್ತಾಬ್ ಹೇಳಿದ್ದಾನೆ.
ನ್ಯಾಯಾಲಯಕ್ಕೆ ಜಾಮೀನು ಅರ್ಜಿಯನ್ನು ತಪ್ಪಾಗಿ ಸಲ್ಲಿಸಲಾಗಿದೆ ಎಂದು ಪೂನಾವಾಲಾ ಅವರಿಂದ ಇಮೇಲ್ ಮೂಲಕ ನ್ಯಾಯಾಲಯಕ್ಕೆ ಮನವಿ ಬಂದಿದೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ವೃಂದಾ ಕುಮಾರಿ ಸ್ಪಷ್ಟಪಡಿಸಿದ್ದಾರೆ.
ಡಿಸೆಂಬರ್ 16ರಂದು ಜಾಮೀನು ಕೋರಿ ನ್ಯಾಯಾಲಯಕ್ಕೆ ಅಫ್ತಾಬ್ ಅರ್ಜಿ ಸಲ್ಲಿಸಿದ್ದ. ಡಿಸೆಂಬರ್ 9 ರಂದು ನ್ಯಾಯಾಲಯ ಪೂನಾವಾಲಾ ಅವರ ನ್ಯಾಯಾಂಗ ಬಂಧನವನ್ನು 14 ದಿನಗಳವರೆಗೆ ಮುಂದೂಡಿತ್ತು. ನವೆಂಬರ್ 12 ರಂದು ಆತನನ್ನು ಬಂಧಿಸಿದ್ದು, ಆರೋಪಿ ಅಫ್ತಾಬ್ತಿ'ನನ್ನು ತಿಹಾರ್ ಜೈ#ಲಿನಲ್ಲಿ ಇರಿಸಲಾಗಿದೆ.