ಶಾರ್ಜಾ ಕರ್ನಾಟಕ ಸಂಘದ ಬ್ರೋಚರ್ ಬಿಡುಗಡೆ ಮಾಡಿದ  ಡಿ.ಕೆ.ಶಿವಕುಮಾರ್!

ಶಾರ್ಜಾ ಕರ್ನಾಟಕ ಸಂಘದ ಬ್ರೋಚರ್ ಬಿಡುಗಡೆ ಮಾಡಿದ ಡಿ.ಕೆ.ಶಿವಕುಮಾರ್!

                                                   


ದುಬೈ(Headlines Kannada): ಕರ್ನಾಟಕ ಸಂಘ ಶಾರ್ಜಾದ  2023ನೇ ಸಾಲಿನ ಬ್ರೋಚರ್ ಅನ್ನುಇತ್ತೀಚೆಗೆ ದುಬೈಯ  ಹೋಟೆಲ್ ಗ್ರಾಂಡ್ ಹಯಾತ್ ನಲ್ಲಿ  ಕರ್ನಾಟಕದ ಜನಪ್ರಿಯ ರಾಜಕೀಯ ನೇತಾರ, ನಾಗರಾಭಿವೃದ್ಧಿ, ಇಂಧನ ಸಹಿತ ಹಲವಾರು ಮುಖ್ಯ ಇಲಾಖೆಗಳ ಮಂತ್ರಿ ಹುದ್ದೆಗಳನ್ನು ಸಮರ್ಥ ವಾಗಿ ನಿರ್ವಹಿಸಿದ ರಾಜಕೀಯ ಮುತ್ಸದ್ದಿ, ಪ್ರಸ್ತುತ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ   ಡಿ ಕೆ ಶಿವಕುಮಾರ ಅವರ ದಿವ್ಯ ಹಸ್ತದಿಂದ ಬಿಡುಗಡೆ ಮಾಡಲಾಯಿತು. 


ಕರ್ನಾಟಕ ಸಂಘ ಶಾರ್ಜಾ ಪರವಾಗಿ ಸಂಸ್ಥೆಯ ಅಧ್ಯಕ್ಷರಾದ M.E.ಮೂಳೂರುರವರು ಮತ್ತು ಉಪಾಧ್ಯಕ್ಷರಾದ ನೋವೆಲ್ ಅಲ್ಮೇಡಾ ಅವರು ಡಿಕೆಶಿ ಅವರಿಗೆ ಪುಷ್ಪ ಗುಚ್ಛ , ಶಾಲು ಮತ್ತು ಸ್ಮರಣಿಕೆ ನೀಡಿ ಸನ್ಮಾನಿಸಿದರು. 

M .E ಮೂಳೂರು ರವರು ಸಂಸ್ಥೆಯ ಪರಿಚಯವನ್ನು ಡಿ ಕೆ ಶಿವಕುಮಾರ್ ರವರಿಗೆ ನೀಡುತ್ತಾ ಸಂಸ್ಥೆಯ ಉದ್ಧೇಶ ಮತ್ತು ಸಾಧನೆಗಳ ಸ್ಥೂಲ ಪರಿಚಯವನ್ನು ಮಾಡಿದರು. ಶಾರ್ಜಾ ದ ಇಂಡಿಯನ್ ಅಸೋಸಿಯೇಷನ್ ಅಧೀನದಲ್ಲಿ ನೋಂದಾಯಿಸಲ್ಪಟ್ಟ ಕರ್ನಾಟಕ ಸಂಘ ಶಾರ್ಜಾ ಕಳೆದ ಸುಮಾರು 25 ವರ್ಷಗಳಿಂದ UAE ಯಲ್ಲಿರುವ ಅನಿವಾಸಿ ಕನ್ನಡಿಗರನ್ನು ಒಗ್ಗೂಡಿಸಿ ಕನ್ನಡ ಸಂಸ್ಕೃತಿ, ನುಡಿಯ ಬಗ್ಗೆ ಅನಿವಾಸಿ ಕನ್ನಡಿಗರಲ್ಲಿ ಯಾವತ್ತೂ ಅಭಿಮಾನ, ಜಾಗ್ರತಿ ನೆಲೆ ನಿಲ್ಲುವಂತೆ ಅವಿರತವಾಗಿ ಪ್ರಯತ್ನವನ್ನು ಮಾಡುತ್ತಾ ಇದೆ ಎಂದರು.

ಯಾವುದೇ ಪ್ರಚಾರ, ಪ್ರಶಸ್ತಿ ಅಥವಾ ಸನ್ಮಾನವನ್ನು ಬಯಸದೆ ಕೇವಲ ಹುಟ್ಟಿದ ನಾಡಿನ ಮೇಲಿನ ಅಭಿಮಾನದಿಂದ ನಮ್ಮ ಸಂಸ್ಥೆಯು ಈ ಮೌನವಾದ ಸೇವೆಯನ್ನು ಬಹಳ ಪರಿಣಾಮ ಕಾರಿಯಾಗಿ ಮಾಡುತ್ತಾ ಬಂದಿದೆ ಎಂದರು. 

ಸಂಸ್ಥೆಯ ವಾರ್ಷಿಕ ಸಮಾರಂಭದಲ್ಲಿ ಅನಾವರಣ ಗೊಳಿಸುವ ಕರ್ನಾಟಕದ ಶ್ರೀಮಂತ ಕಲಾ ವೈವಿಧ್ಯಗಳು, ಕನ್ನಡಿಗ ಸಾಧಕರನ್ನು ಗುರುತಿಸಿ ಪ್ರತೀ ವರ್ಷ ನೀಡುವ ಪ್ರತಿಷ್ಠಿತ ಮಯೂರ ಪ್ರಶಸ್ತಿಗಳು, ಊರಲ್ಲಿ ಕೆಲವು ಉತ್ಕ್ರಷ್ಟ ಸೇವಾ ಸಂಸ್ಥೆಗಳೊಂದಿಗೆ ಸೇರಿ ಕೊಂಡು ಮಾಡುವ ಸಾಮುದಾಯಿಕ ಸೇವೆಗಳು, COVID 19 ಕಾಲದಲ್ಲಿ ನೀಡಿದ ಸಹಾಯಗಳು, ರಕ್ತ ದಾನ ಶಿಬಿರಗಳು ಹೀಗೆ  ಸಂಸ್ಥೆಯ ಸಾಧನೆಗಳ ಹಲವಾರು ಮೈಲಿಗಲ್ಲುಗಳಲ್ಲಿ ಆಯ್ದ ಕೆಲವು ಉದಾಹರಣೆಗಳನ್ನು ಡಿಕೆಶಿಯವರಿಗೆ ವಿವರಿಸಿದರು.  

ಈ ಸಂಧರ್ಭದಲ್ಲಿ ಪ್ರಸಕ್ತ ಕರ್ನಾಟಕದ ಸಾಮಾಜಿಕ ಪರಿಸ್ಥಿತಿ, ಮುಖ್ಯವಾಗಿ ಅನಿವಾಸಿ ಕನ್ನಡಿಗರ ಸಮಸ್ಯೆಗಳು ಮೊದಲಾದ ವಿಷಯಗಳ ಬಗ್ಗೆ ಗಹನವಾದ ಚರ್ಚೆಗಳನ್ನು ನಡೆಸಲಾಯಿತು ಮತ್ತು ಜಿಜ್ಞಾಸೆಗಳನ್ನು – ಅಹವಾಲುಗಳನ್ನು ಈ ಸಂಧರ್ಭದಲ್ಲಿ  ವ್ಯಕ್ತಪಡಿಸಲಾಯಿತು. 

ಲಕ್ಷಾಂತರ ಸಂಖ್ಯೆಯಲ್ಲಿ ಪರದೇಶಗಳಲ್ಲಿ ವಿಶೇಷತಃ ಕೊಲ್ಲಿ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಅನಿವಾಸಿ ಕನ್ನಡಿಗರಿಂದ ದೇಶಕ್ಕೆ- ರಾಜ್ಯಕ್ಕೆ ಗಣನೀಯವಾದ ವಿದೇಶಿ ವಿನಿಮಯ ಲಭವಾಗುತ್ತಿದ್ದು, ರಾಜ್ಯದ ಅಭಿವೃದ್ಧಿಯಲ್ಲಿ ದೊಡ್ಡ ರೀತಿಯಲ್ಲಿ ಅನಿವಾಸಿ ಕನ್ನಡಿಗರ ಕಡೆಯಿಂದ ಧನಾತ್ಮಕವಾದ ಉಪಲಬ್ಧಿಗಳು ಆಗುತ್ತಿದ್ದರೂ ಕರ್ನಾಟ್ಟಕದ ಸರಕಾರ ಅನಿವಾಸಿ ಕನ್ನಡಿಗರ ಬಗ್ಗೆ ಯಾವುದೇ ಕಾಳಜಿ ತೋರದೆ ಬರೇ ಮಾತುಗಳ ಭರವಸೆ ಮಾತ್ರ ಕೊಡುತ್ತಾ ಬರುತ್ತಿರುವ ಬಗ್ಗೆ  ಡಿಕೆಶಿ ಅವರ ಗಮನವನ್ನು ಸೆಳೆಯಲಾಯಿತು. 

ಅನಿವಾಸಿ ಕನ್ನಡಿಗರಿಗೆ ಮತದಾನದ ಹಕ್ಕು,  ರ್ನಾಟಕ ಸಂಘ ಶಾರ್ಜಾದ ಗೌರವ ಮುಖ್ಯ ಸಲಹೆಗಾರರೂ ಆದ ಪ್ರವೀಣ್  ಕುಮಾರ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ KNRI  ಸಂಸ್ಥೆಯು ನಡೆಸುತ್ತಿರುವ ಅವಿರತ ಪ್ರಯತ್ನದ ಹೊರತಾಗಿಯೂ ಇನ್ನೂ ಈಡೇರದ ಕರ್ನಾಟಕ ಸರಕಾರದ ವತಿಯಿಂದ  ಅನಿವಾಸಿ ಕನ್ನಡಿಗ ನಿಗಮಕ್ಕೆ ಉಪಾಧ್ಯಕ್ಷರ ನೇಮಕ,, ವಾರ್ಷಿಕ ಬಜೆಟ್ ನಲ್ಲಿ ಅನಿವಾಸಿ ಕನ್ನಡಿಗರ ಕಲ್ಯಾಣಕ್ಕಾಗಿ ಸಾಕಷ್ಟು  ಮೀಸಲು ಮೊತ್ತ  ಮೊದಲಾದ ವಿಷಯಗಳ ಬಗ್ಗೆ ವಿಸ್ತಾರಿತವಾದ ಚರ್ಚೆ ನಡೆಸಲಾಯಿತು.

ಸೇರಿದ ಎಲ್ಲರೊಂದಿಗೆ ಬಹಳ ಸ್ನೇಹಮಯಿಯಾಗಿ ಸಂವಹನದೊಂದಿಗೆ ಬೆರೆತ ಡಿ ಕೆ ಶಿವಕುಮಾರ್ ರವರು ಎಲ್ಲರಿಗೂ ಕೃತಜ್ಞತೆ ಸಮರ್ಪಿಸಿದರು. ನೋವೆಲ್ ಅಲ್ಮೇಡಾ ಧನ್ಯವಾದ ಸಮರ್ಪಣೆ ಗೈದರು.


Ads on article

Advertise in articles 1

advertising articles 2

Advertise under the article