ಜೆಡಿಎಸ್'ನ  ಪಂಚರತ್ನ ರಥಯಾತ್ರೆ ಸ್ಥಗಿತಗೊಳಿಸುವ ಹುನ್ನಾರ ಕೇಶವ ಕೃಪದಲ್ಲಿಯೇ ನಡೆದಿದೆ: ಎಚ್‌.ಡಿ.ಕುಮಾರಸ್ವಾಮಿ

ಜೆಡಿಎಸ್'ನ ಪಂಚರತ್ನ ರಥಯಾತ್ರೆ ಸ್ಥಗಿತಗೊಳಿಸುವ ಹುನ್ನಾರ ಕೇಶವ ಕೃಪದಲ್ಲಿಯೇ ನಡೆದಿದೆ: ಎಚ್‌.ಡಿ.ಕುಮಾರಸ್ವಾಮಿ



ಮಂಡ್ಯ(Headlines Kannada): ಕೊರೋನಾ ಹೆಸರಿನಲ್ಲಿ ಜೆಡಿಎಸ್'ನ  ಪಂಚರತ್ನ ರಥಯಾತ್ರೆ ಸ್ಥಗಿತಗೊಳಿಸುವ ಹುನ್ನಾರ ನಡೆಯುತ್ತಿದೆ. ಇದನ್ನು ನಿಲ್ಲಿಸುವ ಕುರಿತು ಕೇಶವ ಕೃಪದಲ್ಲಿಯೇ ಚರ್ಚೆ ನಡೆಸಲಾಗಿದೆ ಎಂದು JDS ಶಾಸಕಾಂಗದ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜೆಡಿಎಸ್'ನ ‘ರಥಯಾತ್ರೆಯ ಅಲೆ ಕಂಡು ಬಿಜೆಪಿ ಮುಖಂಡರಿಗೆ ಆ#ತಂಕ ಸೃಷ್ಟಿಯಾಗಿದೆ. ಹೀಗಾಗಿ ಕೊರೋನಾ ನೆಪದಲ್ಲಿ ಯಾತ್ರೆ ಸ್ಥಗಿತಗೊಳಿಸುವ ಚರ್ಚೆ ಕೇಶವ ಕೃಪದಲ್ಲಿ ನಡೆದಿದೆ. ಕೊರೋನಾ  ಬಗ್ಗೆ ನಾನು ಲಘುವಾಗಿ ಮಾತನಾಡುವುದಿಲ್ಲ. ಈ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ, ಅದಕ್ಕೆ ನಾನೂ ಸಹಕಾರ ನೀಡುತ್ತೇನೆ’ ಎಂದು ಹೇಳಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನಕ್ಕಿಂತ ನನಗೆ ಪಂಚರತ್ನ ರಥಯಾತ್ರೆಯೇ ಮುಖ್ಯ. ಕೇವಲ ಅಧಿವೇಶನದಲ್ಲಿ ಕುಳಿತು ಮಾತನಾಡಿಬಿಟ್ಟರೆ ಸಮಸ್ಯೆಗಳು ಬಗೆಹರಿಯಲ್ಲ, ಕಳೆದ 3 ದಿನಗಳಿಂದ ಅಧಿವೇಶನದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡುತ್ತಿದ್ದೇನೆ.  ಕಳೆದ 75 ವರ್ಷಗಳಿಂದ ಆಗಿರುವ ಅ#ನಾಹುತಗಳನ್ನು ಸರಿಪಡಿಸಬೇಕಾಗಿದೆ. ಜನರ ನಡುವೆ ಇದ್ದು ಅವರ ಸಮಸ್ಯೆಗಳನ್ನು ತಾನು ಇತ್ಯರ್ಥಪಡಿಸಲು ಪ್ರಯತ್ನಿಸುತ್ತಿದ್ಧೇನೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.

Ads on article

Advertise in articles 1

advertising articles 2

Advertise under the article