
IPL ಹರಾಜು; ಬರೋಬ್ಬರಿ 13.25 ಕೋಟಿ ರೂ.ಗೆ ಸನ್‌ರೈಸರ್ಸ್ ಹೈದರಾಬಾದ್ ಪಾಲಾದ ಹ್ಯಾರಿ ಬ್ರೂಕ್! ಮಾರಾಟ ಆದ-ಆಗದ ಆಟಗಾರರ ವಿವರ ಇಲ್ಲಿದೆ....
ಕೊಚ್ಚಿ (Headlines Kannada): ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮಿನಿ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಇಂಗ್ಲೆಂಡ್‌ನ ಸ್ಮೋಕಿ ಕ್ರಿಕೆಟರ್ ಹ್ಯಾರಿ ಬ್ರೂಕ್ ಅವರನ್ನು ಬರೋಬ್ಬರಿ 13.25 ಕೋಟಿ ರೂಪಾಯಿಗೆ ಖರೀದಿಸಿದ್ದರೆ, ಮಾಯಾಂಕ್ ಅಗರವಾಲ್ ಗೆ 8.25 ಕೋಟಿ ನೀಡಿದೆ.
1.5 ಕೋಟಿ ಮೂಲಬೆಲೆಯ ಬ್ರೂಕ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ 13.25 ಕೋಟಿ ರುಪಾಯಿ ಖರೀದಿ ಮಾಡಿದ್ದು, ಈ ಬಾರಿ ಸನ್‌ರೈಸರ್ಸ್ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.
IPL ಆಟಕ್ಕಾಗಿ ಕಣದಲ್ಲಿರುವ 87 ಆಟಗಾರರ ಖರೀದಿಗಾಗಿ 10 ಫ್ರಾಂಚೈಸ್‌ಗಳು ಪೈಪೋಟಿ ನಡೆಸುತ್ತಿವೆ. ಕೊಚ್ಚಿಯಲ್ಲಿ ಇಂದು ನಡೆಯುತ್ತಿರುವ ಹರಾಜಿಗೆ ಒಟ್ಟು 405 ಆಟಗಾರರು ಲಭ್ಯರಿದ್ದಾರೆ. ಈ ಪೈಕಿ 273 ಭಾರತೀಯರು ಮತ್ತು 132 ವಿದೇಶಿ ಆಟಗಾರರು ಸೇರಿದ್ದಾರೆ.
ಈ IPL ಹರಾಜಿಗೆ ಲಭ್ಯರಿರುವ ಆಟಗಾರರಲ್ಲಿ ಅಫ್ಗಾನಿಸ್ತಾನದ ಸ್ಪಿನ್ನರ್, 15 ವರ್ಷದ ಅಲ್ಹಾ ಮೊಹಮ್ಮದ್ ಘಝನ್ಫರ್ ಅತ್ಯಂತ ಕಿರಿಯ ಎನಿಸಿಕೊಂಡಿದ್ದಾರೆ. 2007ರ ಜುಲೈ 15ರಂದು ಜನಿಸಿರುವ ಘಝನ್ಫರ್ ಈ ವರೆಗೆ ಮೂರು ಟಿ20 ಕ್ರಿಕೆಟ್ ಪಂದ್ಯಗಳನ್ನು ಆಡಿ ಅನುಭವ ಹೊಂದಿದ್ದಾರೆ. ಹಾರಜಿನಲ್ಲಿ ಭಾರತದ 40 ವರ್ಷದ ಅಮಿತ್ ಮಿಶ್ರಾ ಹರಾಜಿನಲ್ಲಿರುವ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
IPL ಮಿನಿ ಹರಾಜಿನಲ್ಲಿ ಅತಿಹೆಚ್ಚು ಮೊತ್ತ ಪಡೆದ ದಾಖಲೆ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಕ್ರಿಸ್ ಮಾರಿಸ್ ಹೆಸರಿನಲ್ಲಿದೆ. 2021ರಲ್ಲಿ ನಡೆದಿದ್ದ IPL ಮಿನಿ ಹರಾಜಿನಲ್ಲಿ ರಾಜಸ್ತಾನ ರಾಯಲ್ಸ್ ತಂಡ ಅವರನ್ನು ₹ 16.25 ಕೋಟಿ ನೀಡಿ ಖರೀದಿಸಿತ್ತು.
ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಅವರು ಮೊದಲ ಆಟಗಾರನಾಗಿ ಬಿಕರಿಯಾಗಿದ್ದಾರೆ. ಅವರಿಗೆ ನಿಗದಿಯಾಗಿದ್ದ ಮೂಲ ಬೆಲೆ ₹ 2 ಕೋಟಿ ನೀಡಿ ಗುಜರಾತ್ ಟೈಟನ್ಸ್ ಅವರನ್ನು ಖರೀದಿಸಿದೆ.
ಹರಾಜಿನಲ್ಲಿ ಮಾರಾಟವಾದ ಆಟಗಾರರು
-ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್): ₹ 2 ಕೋಟಿ – ಗುಜರಾತ್ ಟೈಟನ್ಸ್
-ಹ್ಯಾರಿ ಬ್ರೂಕ್ (ಇಂಗ್ಲೆಂಡ್): ₹ 13.5 ಕೋಟಿ – ಸನ್‌ರೈಸರ್ಸ್ ಹೈದರಾಬಾದ್
- ಮಯಂಕ್ ಅಗರವಾಲ್ (ಭಾರತ): ₹ 8.25 ಕೋಟಿ – ಸನ್‌ರೈಸರ್ಸ್ ಹೈದರಾಬಾದ್
-ಅಜಿಂಕ್ಯ ರಹಾನೆ (ಭಾರತ): ₹ 50 ಲಕ್ಷ – ಚೆನ್ನೈ ಸೂಪರ್ ಕಿಂಗ್ಸ್
-ಸ್ಯಾಮ್ ಕರನ್ (ಇಂಗ್ಲೆಂಡ್): ₹ 18.50 ಕೋಟಿ – ಪಂಜಾಬ್ ಕಿಂಗ್ಸ್
-ಒಡಿಯಾನ್ ಸ್ಮಿತ್ (ವೆಸ್ಟ್ ಇಂಡೀಸ್): ₹ 50 ಲಕ್ಷ – ಗುಜರಾತ್ ಟೈಟನ್ಸ್
-ಸಿಕಂದರ್ ರಾಜಾ (ಜಿಂಬಾಬ್ವೆ): ₹ 50 ಲಕ್ಷ – ಪಂಜಾಬ್ ಕಿಂಗ್ಸ್
-ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್): ₹ 5.75 ಕೋಟಿ – ರಾಜಸ್ಥಾನ ರಾಯಲ್ಸ್
-ಕೆಮರೂನ್ ಗ್ರೀನ್ (ಆಸ್ಟ್ರೇಲಿಯಾ): ₹ 17.50 ಕೋಟಿ – ಮುಂಬೈ ಇಂಡಿಯನ್ಸ್
-ಬೆನ್ ಸ್ಟೋಕ್ಸ್ (ಇಂಗ್ಲೆಂಡ್): ₹ 16.25 ಕೋಟಿ – ಚೆನ್ನೈ ಸೂಪರ್ ಕಿಂಗ್ಸ್
ಹರಾಜಿನಲ್ಲಿ ಮಾರಾಟ ಆಗದ ಆಟಗಾರರು
-ಜೋ ರೂಟ್ (ಇಂಗ್ಲೆಂಡ್): ಮೂಲ ಬೆಲೆ ₹ 1 ಕೋಟಿ
-ರೈಲೀ ರುಸ್ಸೋ (ದಕ್ಷಿಣ ಆಫ್ರಿಕಾ): ಮೂಲ ಬೆಲೆ ₹ 2 ಕೋಟಿ
-ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ): ಮೂಲ ಬೆಲೆ ₹ 1.5 ಕೋಟಿ