IPL ಹರಾಜಿನಲ್ಲಿ 18.50 ಕೋಟಿ ರೂ.ದಾಖಲೆ ಬೆಲೆಗೆ ಮಾರಾಟವಾದ ಸ್ಯಾಮ್‌ ಕರನ್‌; ಪಂಜಾಬ್‌ ಕಿಂಗ್ಸ್‌ ಪಾಲು

IPL ಹರಾಜಿನಲ್ಲಿ 18.50 ಕೋಟಿ ರೂ.ದಾಖಲೆ ಬೆಲೆಗೆ ಮಾರಾಟವಾದ ಸ್ಯಾಮ್‌ ಕರನ್‌; ಪಂಜಾಬ್‌ ಕಿಂಗ್ಸ್‌ ಪಾಲು


ಕೊಚ್ಚಿ (Headlines Kannada): ಇಲ್ಲಿ ನಡೆಯುತ್ತಿರುವ ಐಪಿಎಲ್‌ ಮಿನಿ ಹರಾಜಿನಲ್ಲಿ ಇಂಗ್ಲೆಂಡ್‌ ತಂಡದ ಸ್ಟಾರ್‌ ಆಲ್‌ರೌಂಡರ್‌ ಸ್ಯಾಮ್‌ ಕರನ್‌ ಅವರನ್ನು ಪಂಜಾಬ್‌ ಕಿಂಗ್ಸ್‌ ಫ್ರಾಂಚೈಸಿ ₹ 18.50 ಕೋಟಿ ನೀಡಿ ಖರೀದಿಸಿದೆ.

ಇದರೊಂದಿಗೆ IPL ಮಿನಿ ಹರಾಜಿನಲ್ಲಿ ಅತಿಹೆಚ್ಚು ಮೊತ್ತ ಜೇಬಿಗಿಳಿಸಿಕೊಂಡ ಆಟಗಾರ ಎಂಬ ಶ್ರೇಯ ಸ್ಯಾಮ್‌ ಅವರದ್ದಾಗಿದೆ. ಈ ಹಿಂದೆ (2021ರಲ್ಲಿ) ನಡೆದ ಹರಾಜಿನಲ್ಲಿ  ದಕ್ಷಿಣ ಆಫ್ರಿಕಾದ ಆಲ್‌ರೌಂಡರ್‌ ಕ್ರಿಸ್‌ ಮಾರಿಸ್‌ ಅವರನ್ನು ರಾಜಸ್ತಾನ ರಾಯಲ್ಸ್‌ ತಂಡ ₹ 16.25 ಕೋಟಿ ನೀಡಿ ಖರೀದಿಸಿತ್ತು. ಅದು ಈ ವರೆಗೆ ದಾಖಲೆಯಾಗಿತ್ತು.

ಹರಾಜಿನಲ್ಲಿ ಮತ್ತೋರ್ವ ಆಟಗಾರ ಆಸ್ಟ್ರೇಲಿಯಾದ 23 ವರ್ಷ ಆಟಗಾರ ಕೆಮರೂನ್‌ ಗ್ರೀನ್‌ ಅವರಿಗೆ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ ₹ 17.50 ಕೋಟಿ ನೀಡಿದೆ. ಇಂಗ್ಲೆಂಡ್‌ ಟೆಸ್ಟ್‌ ತಂಡದ ನಾಯಕ ಬೆನ್‌ ಸ್ಟೋಕ್ಸ್‌ ಅವರನ್ನು ಹರಾಜಿನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ₹ 16.25 ಕೋಟಿಗೆ ಖರೀದಿಸಿದೆ. ಹರಾಜಿನಲ್ಲಿ ಗ್ರೀನ್‌ ಹಾಗೂ ಸ್ಟೋಕ್ಸ್‌ ಅವರಿಗೆ ₹ 2 ಕೋಟಿ ಮೂಲ ಬೆಲೆ ನಿಗದಿಯಾಗಿತ್ತು.

Ads on article

Advertise in articles 1

advertising articles 2

Advertise under the article