
ಜಲೀಲ್ ಹ#ತ್ಯೆ ಪ್ರಕರಣದ ಆರೋಪಿಗಳು 10 ದಿನ ಪೊಲೀಸ್ ಕ#ಸ್ಟಡಿಗೆ; ಯಾರು ಈ ಆರೋಪಿಗಳು?
ಮಂಗಳೂರು(Headlines Kannada): ಕೃಷ್ಣಾಪುರದಲ್ಲಿ ನಡೆದ ಅಬ್ದುಲ್ ಜಲೀಲ್ ಹ#ತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಮಂದಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಅವರಿಗೆ 10 ದಿನ ಕ#ಸ್ಟಡಿ ವಿಧಿಸಿದೆ.
ಕೃಷ್ಣಾಪುರ ನೈತಂಗಡಿ ನಿವಾಸಿ ಶೈಲೇಶ್ ಅಲಿಯಾಸ್ ಶೈಲೇಶ್ ಪೂಜಾರಿ (21), ಉಡುಪಿ ಹೆಜಮಾಡಿ ನಿವಾಸಿ ಸುವಿನ್ ಕಾಂಚನ್ ಅಲಿ ಯಾಸ್ ಮುನ್ನ(24) ಮತ್ತು ಕೃಷ್ಣಾಪುರ 3ನೇ ಬ್ಲಾಕ್ ನಿವಾಸಿ ಪವನ್ ಅಲಿಯಾಸ್ ಪಚ್ಚು(23) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳ ಹಿನ್ನೆಲೆ....
ಶೈಲೇಶ್ ಪೂಜಾರಿ ಸುರತ್ಕಲ್ ಠಾಣೆಯಲ್ಲಿ ರೌ#ಡಿ ಶೀ#ಟರ್ ಆಗಿದ್ದು, ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆನ್ನಲಾಗಿದೆ. ಸುವಿನ್ ಕಾಂಚನ್ ಮೂಲ್ಕಿ ಹಾಗು ಸುರತ್ಕಲ್ ಠಾಣೆಯಲ್ಲಿ ರೌ#ಡಿ ಶೀ#ಟರ್ ಆಗಿದ್ದು, ಈತನ ವಿರುದ್ಧ ಮೂಲ್ಕಿ ಮೈಸೂರು, ಪಡುಬಿದ್ರೆ, ಸುರತ್ಕಲ್ ಠಾಣೆಗಳಲ್ಲಿ ಹಲವು ಪ್ರಕರಣಗಳಿವೆ ಎಂದು ಹೇಳಲಾಗಿದೆ.
ಆರೋಪಿಗಳಾದ ಶೈಲೇಶ್ ಹಾಗು ಸುವಿನ್ ಕಾಂಚನ್ ಎಂಬವರು ಪಿಂಕಿ ನವಾಜ್ ಎಂಬಾತನ ಕೊ#ಲೆ ಯತ್ನ ಪ್ರಕರಣದ ಆರೋಪಿಗಳು ಆಗಿದ್ದಾರೆ. ಶೈಲೇಶ್ ಪೂಜಾರಿ ಹಲವು ವರ್ಷಗಳ ಹಿಂದೆ ನಡೆದ ಕಾಟಿಪಳ್ಳದ ರವೂಫ್ ಎಂಬಾತನ ಕೊ#ಲೆ ಆರೋಪಿಯ ಪುತ್ರನಾಗಿದ್ದಾನೆ. ಸುಮಾರು ವರ್ಷಗಳ ಹಿಂದೆ ಕಾಟಿಪಳ್ಳದಲ್ಲಿ ನಡೆದಿದ್ದ ರವೂಫ್ ಹ#ತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿ ಶೈಲೇಶ್ ಅವರ ತಂದೆ ಕೇಶವ ಪೂಜಾರಿ ಪ್ರಮುಖ ಆರೋಪಿಯಾಗಿದ್ದರೆನ್ನಲಾಗಿದೆ.
ಪರಾರಿಯಾಗಲು ಯತ್ನಿಸಿದ್ದ ಆರೋಪಿಗಳು...
ಆರೋಪಿಗಳು ಕೃತ್ಯವೆಸಗಿ ಮುಂಬೈಗೆ ಪರಾರಿಯಾಗಲು ಸಂಚು ಹೂಡಿದ್ದರೆನ್ನಲಾಗಿದ್ದು, ಈ ವೇಳೆ, ಕಾಪು ಬಳಿಯ ಲಾಡ್ಜಿನಲ್ಲಿದ್ದಾಗಲೇ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳಿರುವ ಸಾಶ್ಯತೆಯಿದ್ದು, ಅದರಲ್ಲಿ ಪ್ರಮುಖ ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಹತ್ಯೆಯಲ್ಲಿ ಇಬ್ಬರು ನೇರ ಭಾಗಿ...
'ಬಂಧಿತರ ಪೈಕಿ ಇಬ್ಬರು ಕೃ#ತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದರೆ, ಕೃತ್ಯ ನಡೆಸಿದ ಬಳಿಕ ಆರೋಪಿಗಳಿಗೆ ಬೈಕಿನಲ್ಲಿ ಪರಾರಿಯಾಗಲು ಇನ್ನೋರ್ವ ನೆರವಾಗಿದ್ದಾನೆ. ಇವರನ್ನು ಮೊನ್ನೆ ರಾತ್ರಿ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಬಂಧಿತ ಮೂವರು ಕೃತ್ಯದಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗಿದೆ. ಕೊ#ಲೆಯ ಹಿಂದಿರುವ ಉದ್ದೇಶ, ಯಾರೆಲ್ಲ ಭಾಗಿಯಾಗಿದ್ದಾರೆ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ. ಜಲೀಲ್ ಕೊ#ಲೆ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರ ಬಂಧನಕ್ಕೆ ಕ್ರಮ ಕೈಕೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯರ ಸಹಿತ 12 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಬಂಧಿತರ ಇಬ್ಬರು ಆರೋಪಿಗಳ ವಿರುದ್ಧ ಸುರತ್ಕಲ್ ಸಹಿತ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. 2021ರಲ್ಲಿ ನಡೆದ ಕೊ#ಲೆಯತ್ನ ಪ್ರಕರಣದಲ್ಲಿ ಇವರು ಭಾಗಿಯಾಗಿದ್ದರು. ಜಲೀಲ್ ಕುಟುಂಬಸ್ಥರ ಮನವಿಯಂತೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಶಶಿಕುಮಾರ್ ತಿಳಿಸಿದ್ದಾರೆ.