ಅನಿವಾಸಿ ಕನ್ನಡಿಗ ಮಾಜಿ ಕ್ರೀಡಾಪಟುಗಳಿಗೆ ದುಬೈ ಕನ್ನಡ ಸಂಘದಿಂದ NRI ಸ್ಪೋರ್ಟ್ಸ್ ಪರ್ಸನ್ ಪ್ರಶಸ್ತಿ ಪ್ರದಾನ
ಅಬುಧಾಬಿ(Headlines Kannada): ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮತ್ತು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹೆಮ್ಮೆಯ ದುಬೈ ಕನ್ನಡ ಸಂಘವು ಇತ್ತೀಚೆಗೆ ದುಬೈ ದಸರಾ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕೋತ್ಸವ-2022 ಕಾರ್ಯಕ್ರಮದಲ್ಲಿ ಸಂಯುಕ್ತ ಅರಬ್ ಸಂಸ್ಥಾನದಲ್ಲಿ ನೆಲೆಸಿರುವ ಕ್ರೀಡೆಯಲ್ಲಿ ಭಾರತ ಮತ್ತು ಕರ್ನಾಟಕವನ್ನು ಪ್ರತಿನಿಧಿಸಿದ ಕನ್ನಡಿಗ ಕ್ರೀಡಾ ಪಟುಗಳನ್ನು ಗುರುತಿಸಿ ಅನಿವಾಸಿ ಯುಎಇ ಕನ್ನಡಿಗ ಸ್ಪೋರ್ಟ್ಸ್ ಪರ್ಸನ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಹೆಮ್ಮೆಯ ಕನ್ನಡಿಗರು ತಂಡದ ಶಾಲ್, ಮೊಮೆಂಟೋ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡ ಸ್ಪೋರ್ಟ್ಸ್ ಪರ್ಸನ್ ಪ್ರಶಸ್ತಿಯನ್ನು ಹೆಮ್ಮೆಯ ದುಬೈ ಕನ್ನಡ ಸಂಘದ ಸಮಿತಿ ಸದಸ್ಯರು ಯುಎಇ ಕನ್ನಡ ಕ್ರೀಡಾಪಟುಗಳಿಗೆ ವಿತರಿಸಿದರು.
2021-22ನೇ ಸಾಲಿನ ಏನ್ ಆರ್ ಐ ಕನ್ನಡಿಗ ಸ್ಪೋರ್ಟ್ಸ್ ಪರ್ಸನ್ ಪ್ರಶಸ್ತಿಯನ್ನು ಭಾರತೀಯ ಕ್ರಿಕೆಟ್ ಆಟಗಾರತಿ ಶ್ರೀಮತಿ ಸ್ಮಿತಾ, ಕರ್ನಾಟಕ ತ್ರೋಬಾಲ್ ಆಟಗಾರತಿ ಶ್ರೀಮತಿ ಶುಭ, ನ್ಯಾಷನಲ್ ಕಬಡ್ಡಿ ಆಟಗಾರ ಶ್ರೀಯುತ ಸುಹೈಲ್, ದೇಹದಾರ್ಡ್ಯ ಪಟು ಶ್ರೀಯುತ ರಿತೇಶ್ ಡಿಸೋಜ, ಭಾರತೀಯ ರೆಸಲಿಂಗ್ ಪಟು ವೈಷ್ಣವಿ ಮುಂತಾದವರು ಪ್ರಶಸ್ತಿ ಪಡೆದರು.
ಹೆಮ್ಮೆಯ ದುಬೈ ಕನ್ನಡ ಸಂಘದಲ್ಲಿ ಅಧ್ಯಕ್ಷರಾಗಿ ಸುದೀಪ್ ದಾವಣಗೆರೆ, ಮಾಜಿ ಅಧ್ಯಕ್ಷರಾದ ಮಮತಾ ಮೈಸೂರು, ಮುಖ್ಯ ಕಾರ್ಯದರ್ಶಿಯಾಗಿ ಶಂಕರ್ ಬೆಳಗಾವಿ, ಮುಖ್ಯ ಸಂಚಾಲಕರಾಗಿ ರಫೀಕಲಿ ಕುಂಡಂಡ ಕೊಡಗು ಮತ್ತು ಸಮಿತಿ ಸದಸ್ಯರುಗಳಾಗಿ ಪಲ್ಲವಿ ದಾವಣಗೆರೆ, ಹಾದಿಯ ಮಂಡ್ಯ, ವಿಷ್ಣುಮೂರ್ತಿ ಮೈಸೂರು, ಮಧು ದಾವಣಗೆರೆ, ಅನಿತಾ ಬೆಂಗಳೂರು,, ಡಾ.ಸವಿತಾ ಮೈಸೂರು, ಮೊಹೀನ್ ಹುಬ್ಬಳ್ಳಿ, ವರದರಾಜ್ ಕೋಲಾರ, ಅಕ್ರಮ್ ಕೊಡಗು ಮುಂತಾದವರು ಕಾರ್ಯ ನಿರ್ವಹಿಸುತ್ತಿದ್ದಾರೆ.