ಗುಜರಾತ್; ಮಗಳ ಅ#ಶ್ಲೀಲ ವಿಡಿಯೋ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ BSF ಯೋಧನನ್ನು ಥ#ಳಿಸಿ ಕೊ#ಲೆ; 7 ಮಂದಿ ಬಂಧನ

ಗುಜರಾತ್; ಮಗಳ ಅ#ಶ್ಲೀಲ ವಿಡಿಯೋ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ BSF ಯೋಧನನ್ನು ಥ#ಳಿಸಿ ಕೊ#ಲೆ; 7 ಮಂದಿ ಬಂಧನಅಹಮದಾಬಾದ್(Headlines Kannada): ತಮ್ಮ ಮಗಳ ಅ#ಶ್ಲೀಲ ವಿಡಿಯೋ ಮಾಡಿರುವುದರ ವಿರುದ್ಧ ಪ್ರತಿಭಟಿಸಿದ್ದ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಯೋಧರೊಬ್ಬರನ್ನು ಗುಂಪೊಂದು ಅ#ಮಾನುಷವಾಗಿ ಥ#ಳಿಸಿ ಹ#ತ್ಯೆ ಮಾಡಿದ ಭೀ#ಕರ ಘಟನೆ ಗುಜರಾತ್‌ನ ನಾಡಿಯಾದ್‌ನಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ 7 ಮಂದಿಯನ್ನು ಬಂಧಿಸಲಾಗಿದೆ.

ತಮ್ಮ ಮಗಳ ಅ#ಶ್ಲೀಲ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಾನೆ ಎನ್ನಲಾದ 15 ವರ್ಷದ ಬಾಲಕನ ಮನೆಗೆ ಬಿಎಸ್‌ಎಫ್ ಯೋಧ ಮೆಲ್ಜಿಭಾಯ್ ವಾಘೇಲಾ (45) ಅವರು ತೆರಳಿ ಈ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ವಾಘೇಲಾ ಮತ್ತು ಆ ಬಾಲಕನ ಮನೆಯವರ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ಜ#ಗಳ ತಾ#ರಕಕ್ಕೇರಿ ಬ#ಡಿಗೆಗಳು ಮತ್ತು ಹ#ರಿತವಾದ ಆ#ಯು#ಧಗಳಿಂದ ಅವರು ವಾಘೇಲಾ ಅವರ ಮೇಲೆ ದಾ#ಳಿ ನಡೆಸಿದ್ದಾರೆ. ಇದರಿಂದ ತೀವ್ರ ಗಾ#ಯಗೊಂಡ ವಾಘೇಲಾ ಮೃ#ತಪಟ್ಟಿದ್ದಾರೆ. ಈ ಘಟನೆ ಡಿ. 24ರಂದು ಘಟನೆ ನಡೆದಿದೆ.

ಬಿಎಸ್‌ಎಫ್ 56 ಬೆಟಾಲಿಯನ್‌ನ ಕಾನ್‌ಸ್ಟೆಬಲ್ ಆಗಿದ್ದ ವಾಘೇಲಾ ಪುತ್ರಿ ಮತ್ತು ಆ ಬಾಲಕ ಶೈಲೇಶ್ ಅಲಿಯಾಸ್ ಸುನಿಲ್ ಜಾಧವ್ ಇಬ್ಬರೂ ಸಹಪಾಠಿಗಳಾಗಿದ್ದು, ಅವರ ನಡುವೆ ಸಂಬಂಧವಿತ್ತು ಎಂದು ಎನ್ನಲಾಗಿದೆ.  ನಾಡಿಯಾದ್ ತಾಲೂಕಿನ ವಾಣಿಪುರ ಗ್ರಾಮದ ಶೈಲೇಶ್, ವಾಘೇಲಾ ಅವರ ಮಗಳ ಅ#ಶ್ಲೀಲ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ, ಅದು ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು.

ಈ ಕಾರಣಕ್ಕಾಗಿ ವಾಘೇಲಾ ಅವರು ತಮ್ಮ ಇಬ್ಬರು ಮಕ್ಕಳು ಹಾಗೂ ಕುಟುಂಬದ ಇತರೆ ಸದಸ್ಯರ ಜತೆಗೆ ಶೈಲೇಶ್ ಮನೆಗೆ ತೆರಳಿದ್ದರು. ತನ್ನ ಪುತ್ರಿಯ ವಿಡಿಯೋ ಮಾಡಿ, ಆನ್‌ಲೈನ್‌ನಲ್ಲಿ ಹರಿಬಿಟ್ಟಿದ್ದಕ್ಕಾಗಿ ಶೈಲೇಶ್‌ಗೆ ಎಚ್ಚರಿಕೆ ನೀಡುವುದು ಅವರ ಉದ್ದೇಶವಾಗಿತ್ತು. ಈ ವೇಳೆ ಅವರು ಮನೆಗೆ ಹೋಗಿದ್ದಾಗ ಶೈಲೇಶ್ ಮನೆಯಲ್ಲಿ ಇರಲಿಲ್ಲ. ಆದರೆ ಆತನ ಕುಟುಂಬದವರಿದ್ದು, ಈ ವೇಳೆ ಜಗಳ ನಡೆದಿದೆ.

ವಾಘೇಲಾ ಅವರ ಮೇಲೆ 7 ಮಂದಿ ದಾಳಿ ನಡೆಸಿದ್ದಾರೆ. ಇದರಿಂದ ಬಿಎಸ್‌ಎಫ್ ಯೋಧ ಮೃ#ತಪಟ್ಟರೆ, ಅವರ ಮಗ ನವದೀಪ್ ತಲೆಗೆ ಗಂ#ಭೀರವಾಗಿ ಗಾಯಗೊಂಡಿದ್ದು, ಆತನನ್ನು ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.

ವಾಘೇಲ ಅವರ ಪತ್ನಿ ಚಕ್ಲಾಸಿ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದರು. ದೂರಿನ ಸಂಬಂಧ 7 ಮಂದಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ V.R ಬಾಜಪಾಯ್ ಖಚಿತಪಡಿಸಿದ್ದಾರೆ. 

Ads on article

Advertise in articles 1

advertising articles 2

Advertise under the article